ಈಜುತ್ತಿರುವ ವ್ಯಕ್ತಿ ಮೇಲೆ ಎತ್ತರದಿಂದ ಜಿಗಿದ ಯುವಕ; ಮೊಮ್ಮಗನ ಎದುರಲ್ಲೇ ಪ್ರಾಣ ಬಿಟ್ಟ ವೃದ್ಧ

Swimming Pool
Published on

ಮುಂಬೈ: ಈಜುಕೊಳದಲ್ಲಿ ಈಜುತ್ತಿರುವ ವೃದ್ಧನ ಮೇಲೆ ಯುವಕ ಎತ್ತರದಿಂದ ಜಿಗಿದಿದ್ದಾನೆ. ಈ ಪರಿಣಾಮ ವೃದ್ಧ ಸಾವನ್ನಪ್ಪಿದ್ದಾನೆ. ಈ ಘಟನೆ ಮುಂಬೈನಲ್ಲಿ ನಡೆದಿದೆ.

ವೃದ್ಧನ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ. ಅವರನ್ನು ಹತ್ತಿರದ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ನಡೆದಿದ್ದೇನು?: ಸಮಂತ್ ಅವರು ಕಳೆದ ಒಂದು ತಿಂಗಳಿನಿಂದ ಸಂಜೆ 5 ರಿಂದ 6 ಗಂಟೆ ನಡುವೆ ಈಜಲು ಓಝೋನ್ ಪೂಲ್‌ಗೆ ಪ್ರತಿನಿತ್ಯ ಹೋಗುತ್ತಿದ್ದರು. ಏಪ್ರಿಲ್ 23 ರಂದು ವೃದ್ಧ ಕೂಡಾ ತನ್ನ ಮೊಮ್ಮಗನ ಜೊತೆಗೆ ಈಜುಕೊಳಕ್ಕೆ ಬಂದಿದ್ದಾರೆ. ಸಮಂತ್ ಎತ್ತರದಿಂದ ಈಜುಕೊಳಕ್ಕೆ ಜಿಗಿದಿದ್ದಾನೆ. ಈ ವೇಳೆ  ಈಜುತ್ತಿದ್ದ ವೃದ್ಧನಿಗೆ ಗಾಯವಾಗಿದೆ. ಪೂಲ್ ಸಿಬ್ಬಂದಿ ವೃದ್ಧನನ್ನು ಕಾಪಾಡಿಯಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಗೋರೆಗಾಂವ್ ಪೊಲೀಸರು 20 ವರ್ಷದ ಯುವಕ ಸಮಂತ್​​ ವಿರುದ್ಧ ಐಪಿಸಿ ಸೆಕ್ಷನ್ 304 (ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net