More

    ಚುನಾವಣೆ ಫಲಿತಾಂಶ ಬಳಿಕ ಸಿಎಂ ಯಾರಾಗಬೇಕೆಂದು ಬಿಜೆಪಿ ತೀರ್ಮಾನ: ಸಚಿವ ಅಶ್ವತ್ಥ ನಾರಾಯಣ ಅಭಿಮತ

    ಬೆಂಗಳೂರು: ವೀರಶೈವ-ಲಿಂಗಾಯತ,ಒಕ್ಕಲಿಗರು ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಲು ಅವಕಾಶವಿದೆ. ಅದರಲ್ಲೂ ಬಿಜೆಪಿ ಜಾತಿ-ವರ್ಗವೆಂಬ ಬೇಧವೆಣಿಸದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಶಾಸಕರು ಹಾಗೂ ವರಿಷ್ಠರು ಸೇರಿ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

    ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ‌ಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಆಯಾ ಸಮುದಾಯಗಳ ಮುಖಂಡರು, ಶಾಸಕರು ವ್ಯಕ್ತಪಡಿಸುವುದಕ್ಕೂ ಪಕ್ಷದಿಂದ ನಿರ್ಬಂಧ ವಿಧಿಸಲಾಗದು. ಸಾಮಾನ್ಯ ಹಿನ್ನೆಲೆಯ, ಪ್ರತಿಭಾವಂತ ‌75 ಕಾರ್ಯಕರ್ತರಿಗೆ‌ ಸ್ಪರ್ಧಿಸಲು ಪಕ್ಷ ಈ ಬಾರಿ ಅವಕಾಶ ಕೊಟ್ಟಿದ್ದು, ಪಕ್ಷದ ನಿಲುವು ಏನೆಂಬುದು ರಾಜ್ಯದ ಜನರಿಗೂ ಗೊತ್ತಾಗಿದೆ ಎಂದರು. ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರ ಮತ ಎಚ್‌.ಡಿ.ದೇವೇಗೌಡ ಹಾಗೂ ಜಿ.ಟಿ.ದೇವೇಗೌಡರಿಗೆ ಮೀಸಲಿದೆ; ಎಚ್​​ಡಿಕೆ

    ಮನೆ ಮನೆ ಸಂಪರ್ಕ

    ಎರಡು ದಿನಗಳ ವಿಶೇಷ ಮಹಾ ಪ್ರಚಾರ ಅಭಿಯಾನದ ಮುಖೇನ ಡಬಲ್ ಇಂಜಿನ್ ಸರ್ಕಾದರ ಸಾಧನೆ, ಅಗತ್ಯತೆ ಮನವರಿಕೆ ಮಾಡಿಕೊಡುತ್ತಿದ್ದು, ಮನೆ ಮನೆ ಸಂಪರ್ಕ ಕಾರ್ಯವೂ ನಡೆಯಲಿದೆ ಎಂದರು.

    ಹಿನ್ನಡೆಯಲ್ಲ

    ಮುಸ್ಲಿಮರಿಗೆ ಶೇ 4ರಷ್ಟು ಮೀಸಲು ರದ್ದುಪಡಿಸಿ ಸರ್ಕಾರ ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆಯೇ ಹೊರತು ಹಿನ್ನಡೆಯಲ್ಲ. ಸಂವಿಧಾನ ಬದ್ಧವಾಗಿ ಮೀಸಲು ನಿರ್ಣಯವಾಗಿದ್ದು, ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಲಿದ್ದು, ಈ ಕಾನೂನು ಹೋರಾಟದಲ್ಲಿ ಜಯ ಸಾಧಿಸುವ ವಿಶ್ವಾಸವಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ಇದನ್ನೂ ಓದಿ: “ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ”: ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ

    ಪ್ರಧಾನಿ ಮೋದಿ ವರ್ಚುವಲ್ ವೇದಿಕೆಯಲ್ಲಿ ಭಾಷಣ ನಾಳೆ; 58 ಸಾವಿರ ಬೂತ್ ಗಳು 50 ಲಕ್ಷ ಕಾರ್ಯಕರ್ತರು ಭಾಗಿ

    “ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ”: ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ

    ನನ್ನ ಮೇಲೆ‌ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ಸಿದ್ದರಾಮಯ್ಯ ಸಾಬೀತು ಮಾಡಲಿ; ಸವಾಲೆಸೆದ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts