Paid Reviews: ಬಾಲಿವುಡ್ನಲ್ಲಿ ಪೇಡ್ ಮೂವಿ ರಿವ್ಯೂವ್ ಪ್ರಾಬಲ್ಯ ಹೇಗೆ ಹೊಂದಿವೆ ಎಂಬುದರ ಬಗ್ಗೆ ಚಿತ್ರ ವಿಮರ್ಶಕ ಕೋಮಲ್ ನಹ್ತಾ ಎಎನ್ಐ ನಡೆಸಿದ ಸಂದರ್ಶವನವೊಂದರಲ್ಲಿ ಬಾಲಿವುಡ್ ಸಿನಿಮಾಗಳ ಕರಾಳತೆ ಮುಖವನ್ನು ಬಿಚ್ಚಿಟ್ಟಿದ್ದು, ಇದೀಗ ಇವರ ಹೇಳಿಕೆಗಳು ಬಾಲಿವುಡ್ ಸಿನಿ ರಂಗದಲ್ಲಿ ಹೊಸ ಸಂಚಲವನ್ನು ಮೂಡಿಸಿದೆ.
ಇದನ್ನೂ ಓದಿ:ಇವರಿಗೆಲ್ಲ ನನ್ನ ಜೀವನದಲ್ಲಿ ಜಾಗವೇ ಇಲ್ಲ! ಹೆಸರು ಹೇಳೋದಕ್ಕೂ ಇಷ್ಟವಿಲ್ಲ: ವಾಸಿಮ್ ಅಕ್ರಂ ಗರಂ | Wasim Akram
ಮನರಂಜನಾ ವಲಯದಲ್ಲಿ ಪಾವತಿಸಿದ(ಪೇಡ್ ರಿವ್ಯೂವ್ಸ್) ಮಾಧ್ಯಮದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಚಿತ್ರ ವಿಮರ್ಶಕ ಕೋಮಲ್ ನಹ್ತಾ, ನಿರ್ದಿಷ್ಟವಾಗಿ ಪಾವತಿಸಿದ ವಿಮರ್ಶೆಗಳು, ಪ್ರಭಾವಶಾಲಿ ಪ್ರಚಾರಗಳು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಮೇಲೆ ಕೇಂದ್ರೀಕರಿಸಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಂದುವರೆದು ತಮಗಾದ ಅನುಭವನ್ನು ಹಂಚಿಕೊಂಡ ನೆಹ್ತಾ, '' ಒಂದು ದಿನ ಕಾಲ್ ಬಂತು. ಮುಂದಿನ ದಿನಗಳಲ್ಲಿ ಒಟಿಟಿಯಲ್ಲಿ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೆ ವಿಮರ್ಶೆ ಬರೆಯಲು ಪೇಡ್ ರಿವ್ಯೂರ್ಸ್ಬೇಕು ಎಂದರು. ಇದಕ್ಕೆ ನಾನು ಪ್ರತಿಕ್ರಿಯಿಸಿ, ಇದು ನೀವು ಕೆಟ್ಟ ನಡುವಳಿಕೆ ವ್ಯಕ್ತಿ. ಈ ತರ ಬರೆಸೋದು ಒಳ್ಳೆ ಪ್ರವೃತ್ತಿಯಲ್ಲ ಎಂದೆ. ಆದರೆ, ಆತ ನನ್ನ ಬಗ್ಗೆ ನಿಮಗಿನ್ನೂ ತಿಳಿದಿಲ್ಲ ಎದು ಹೇಳಿ ಕಾಲ್ ಕಟ್ ಮಾಡಿದ ಎಂದು ನೆಹ್ತಾ ಹೇಳಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾ ಆಡಲಿಲ್ಲ ಅಂದ್ರೆ ಬರೋಬ್ಬರಿ 45 ಕೋಟಿ ರೂ. ನಷ್ಟ: ವಿಶ್ವ ಕ್ರಿಕೆಟ್ಗೆ ಭಾರತವೇ ಕಿಂಗ್! Team India
ಪಾವತಿಸಿದ ವಿಮರ್ಶೆಗಳು ಹೇಗೆ ವ್ಯಾಪಕವಾಗಿ ಹರಡಿವೆ ಎಂದರೆ, "90% ಪತ್ರಕರ್ತರು ನಗದು ಅಥವಾ ವಸ್ತುಕ್ಕಾಗಿ(ಉಡುಗೊರೆ) ವಿಮರ್ಶೆಗಳನ್ನು ಬರೆಯುತ್ತಿದ್ದಾರೆ" ಎಂದು ನೆಹ್ತಾ ವಿಷಾದ ವ್ಯಕ್ತಪಡಿಸಿದ್ದಾರೆ.
ನಾವು ಉಚಿತ ಊಟ, ಉಚಿತ ಭೋಜನಕ್ಕಾಗಿ ಸಾಯುತ್ತಿಲ್ಲ. ಯಾರ ಪಾರ್ಟಿಯಲ್ಲೂ ಭಾಗವಹಿಸಲು ನಮಗೆ ಆಸಕ್ತಿ ಇಲ್ಲ ಎಂದು ನಹ್ತಾ ಹೇಳಿದರು. 1980 ರ ದಶಕದಲ್ಲಿ ಫ್ರೀ ಪ್ರೆಸ್‌ನಲ್ಲಿ ತಮ್ಮ ಸಮಯವನ್ನು ನೆನಪಿಸಿಕೊಳ್ಳುತ್ತಾ, ಮಾಧ್ಯಮದ ಮಾನ್ಯತೆ ಸೀಮಿತವಾಗಿದ್ದಾಗ ಮತ್ತು ಸಾಂಪ್ರದಾಯಿಕ ವಿಮರ್ಶೆಗಳು ಗಮನಾರ್ಹ ತೂಕವನ್ನು ಹೊಂದಿದ್ದವು ಎಂದು ಪಾವತಿಸಿದ ಮಾಧ್ಯಮದ ಬೆಳೆಯುತ್ತಿರುವ ಪ್ರವೃತ್ತಿಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.(ಏಜೆನ್ಸೀಸ್)