ನ್ಯೂಸ್

ಯುವತಿ ಮದುವೆಯಾಗಲು ಫಿಜಿ ದೇಶದಿಂದ ಬಂದು ಪೊಲೀಸರ ಅತಿಥಿಯಾದ ಮೂರು ಮಕ್ಕಳ ತಂದೆ..!

ಮೀರತ್: ಫಿಜಿ ದೇಶದ ಕಂಪ್ಯೂಟರ್ ಇಂಜಿನಿಯರ್ ತನ್ನ ಗೆಳತಿಯನ್ನು ಮದುವೆಯಾಗಲು ಬಂದು ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ಮ್ಯೂಸಿಕ್​ ಕಂಪನಿಗೆ ನುಗ್ಗಿ ಉದ್ಯಮಿಯ ಅಪಹರಣ: ಶಾಸಕನ ಪುತ್ರ ಸೇರಿ ಹಲವರ ವಿರುದ್ಧ ಎಫ್​ಐಆರ್​

ಫಿಜಿ ಮೂಲದ ಸೈಯದ್ ಫಜಲ್ ಈಗ ಬಂಧನದಲ್ಲಿದ್ದು, ಸದ್ಯ ಆತನ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆಹಾಕುವ ಹಾಗೂ ಯುವಕನ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಮೀರತ್​ನ ಯುವತಿಯೊಬ್ಬಳನ್ನು ವಿವಾಹವಾಗಲು ಬಯಸಿ ಇಲ್ಲಿಗೆ ಬಂದಿದ್ದು, ಆತನ ವಿರುದ್ಧ ಕಿರುಕುಳದ ಆರೋಪ ಹೊರಿಸಲಾಗಿದೆ.

ಕೆಲ ತಿಂಗಳ ಹಿಂದೆ ಯುವಕನ ಪತ್ನಿ ಆತನನ್ನು ತೊರೆದಿದ್ದಳು. ಸೈಯದ್​ಗೆ ಮೂರು ಮಕ್ಕಳಿದ್ದು ಆತ ತನ್ನ ಮರುಮದುವೆ ಬಗ್ಗೆ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಿಳಿಸಿದ್ದನು. ಈ ನಡುವೆ, ಫಿಜಿ ನಿವಾಸಿ ಸೈಯದ್ ಫಜಲ್ ಮೀರತ್‌ನ ರಸುಲ್‌ಪುರ ದೌಲಾಡಿಯ ಹುಡುಗಿಯನ್ನು ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿದ್ದು, ಇದಾದ ಬಳಿಕ ಚಾಟಿಂಗ್ ಮೂಲಕ ಇಬ್ಬರ ನಡುವೆ ಸಂಭಾಷಣೆ ಆರಂಭವಾಗಿ ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಇದಾದ ನಂತರ ಇಬ್ಬರೂ ಪರಸ್ಪರ ಮದುವೆಯಾಗಲು ನಿರ್ಧರಿಸಿದರು. ನಂತರ, ಹುಡುಗಿ ತನ್ನ ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡಿದ್ದಳು. ಹುಡುಗಿಯ ಮನೆಯವರು ಒಪ್ಪಿದ್ದು, ಫಜಲ್ ಮದುವೆಗೆ ತಯಾರಿ ಆರಂಭಿದ್ದನು.

ಇದನ್ನೂ ಓದಿ: ಬಾಯ್ ಫ್ರೆಂಡ್ ಜೊತೆ ಮದುವೆಯಾಗಲು ತಂದೆ ಅಡ್ಡಿ: ಮಗಳ ಪ್ಲ್ಯಾನ್​​ ಪೊಲೀಸರನ್ನೂ ಬೆಚ್ಚಿ ಬೀಳಿಸಿತ್ತು..!

ಈ ಹಿನ್ನೆಲೆ ಆತ ಬುಧವಾರ ಯುವತಿಯ ಮನೆಗೆ ಬಂದಿದ್ದು, ಯುವಕನನ್ನು ನೋಡಿದ ಸಂಬಂಧಿಕರಿಗೆ ಎಲ್ಲಿ ಕೋಪ ಬಂದು ಮದುವೆಗೆ ನಿರಾಕರಿಸಿ ಆತನಿಗೆ ವಾಪಸ್ಸಾಗುವಂತೆ ಹೇಳಿದ್ದಾರೆ. ಆದರೆ, ಯುವಕ ಪದೇ ಪದೇ ಯುವತಿಯನ್ನು ನೋಡುತ್ತಿದ್ದು ಆಕೆಯೊಂದಿಗೆ ಒಮ್ಮೆ ಮಾತನಾಡಬೇಕೆಂದು ಬಯಸಿದ್ದಾನೆ. ಕೊನೆಗೆ ಯುವಕನ ಮೇಲೆ ದೌರ್ಜನ್ಯ ಆರೋಪ ಹೊರಿಸಿ ಕುಟುಂಬಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆದರೆ ಯುವಕನು, ಒಬ್ಬರಿಗೊಬ್ಬರು ಪ್ರೀತಿಯ ನಂತರ ಮದುವೆಯ ಬಗ್ಗೆ ನಿರ್ಧರಿಸಲಾಯಿತು.‘ ಆಕೆ ಹೇಳಿದ ನಂತರ ಮದುವೆ ವಿಷಯ ಮಾತನಾಡಲಾಗಿದ್ದು, ತಾನು ಬುಧವಾರ ಆಕೆಯ ನಿವಾಸಕ್ಕೆ ತೆರಳಿದ್ದೆ. ಆದರೆ ಕುಟುಂಬದ ಪ್ರತಿಕ್ರಿಯೆಯು ನಿರೀಕ್ಷಿಸಿದ್ದಕ್ಕಿಂತ ಭಿನ್ನವಾಗಿತ್ತು ಎಂದಿದ್ದಾನೆ. ಈ ಕುರಿತು ಪೊಲೀಸರು ಮಾತನಾಡಿದ್ದು, ಯುವಕನ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗುತ್ತಿದೆ. ಮದುವೆ ವಿಷಯವೂ ಮುನ್ನೆಲೆಗೆ ಬಂದಿದೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.(ಏಜೆನ್ಸೀಸ್​)