ನ್ಯೂಸ್

ತಾಯಿಯ ಚಿನ್ನಾಭರಣಕ್ಕಾಗಿ ಗಲಾಟೆ; ಅಣ್ಣನ ಪತ್ನಿ, ಮಗನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ ತಮ್ಮ; ಗಂಭೀರ ಗಾಯ| Attack

Attack: ತೆಲಂಗಾಣದ ಭದ್ರಾದಿ ಕೊತ್ತಗೂಡಂ ಜಿಲ್ಲಾ ಲಕ್ಷ್ಮೀಪುರದಲ್ಲಿ ಇಬ್ಬರು ಸಹೋದರರ ನಡುವೆ ಆಸ್ತಿ ಕಲಹ, ತಾಯಿಯ ಚಿನ್ನಾಭರಣಕ್ಕಾಗಿ ನಡೆದ ಗಲಾಟೆ ಹಿಂಸಾಚಾರದ ರೂಪ ತೆಳೆದಿದೆ. ಅಣ್ಣನ ಹೆಂಡತಿ, ಮಗನ ಮೇಲೆ ತಮ್ಮ ಕಲ್ಲಿನಿಂದ ಹಲ್ಲೆ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾಗಿರೆಡ್ಡಿ ಮತ್ತು ರಾಮಕೃಷ್ಣ ಎನ್ನುವ ಸಹೋದರರ ನಡುವೆ ಆಸ್ತಿ ಕಲಹದಿಂದ ಗಲಾಟೆ ನಡೆದಿದೆ. ಮೃತ ತಾಯಿಯ ಚಿನ್ನದ ಆಭರಣಗಳ ವಿಚಾರದಲ್ಲಿ ಸಹೋದರರ ನಡುವೆ ಹಲವಾರು ತಿಂಗಳುಗಳಿಂದ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ. ಗುರುವಾರ ಕಿರಿಯ ಸಹೋದರ ರಾಮಕೃಷ್ಣ ಮತ್ತು ಅವರ ಕುಟುಂಬ, ಅಣ್ಣ ನಾಗಿರೆಡ್ಡಿ ಅವರ ಮನೆಯ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದೆ.

ಹೊಡೆದಾಟದ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿ ನೆಲದಿಂದ ಕಲ್ಲನ್ನು ಎತ್ತಿಕೊಂಡು ಮಹಿಳೆಯ ತಲೆಗೆ ನೇರವಾಗಿ ಹೊಡೆದಿದ್ದು,  ಬಳಿಕ ಅದೇ ಕಲ್ಲಿನಿಂದ ಅವರ ಮಗನನ್ನು ಹೊಡೆದಿದ್ದು ದಾಖಲಾಗಿದೆ. ನಂತರ ಆರೋಪಿ ವ್ಯಕ್ತಿ ತನ್ನ ಸಂಬಂಧಿಕರ ಮೇಲೆ ದಾಳಿ ಮುಂದುವರಿಸಲು ಹೆಚ್ಚುವರಿ ವಸ್ತುಗಳನ್ನು ಹುಡುಕುತ್ತಿರುವುದನ್ನು ಕಾಣಬಹುದು ವಿಡಿಯೋದಲ್ಲಿದೆ.

ಘಟನೆ ಕುರಿತಂತೆ ಅಣ್ಣ ನಾಗಿರೆಡ್ಡಿ ಅವರ ಕುಟುಂಬ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಹಗಲು ಹೊತ್ತಿನಲ್ಲಿ ನಡೆದ ಈ ಭೀಕರ ದಾಳಿ ಸ್ಥಳೀಯರಲ್ಲಿ ಆತಂಕವನ್ನು ಮೂಡಿಸಿದೆ. ಕುಟುಂಬಗಳಲ್ಲಿನ ಆಸ್ತಿ ವಿವಾದಗಳು ಹೇಗೆ ವಿನಾಶಕಾರಿ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ. (ಏಜೆನ್ಸೀಸ್)