ನ್ಯೂಸ್

ಹುಡುಗಿಯರ ಫೈಟ್​ ನೋಡಿ ಕುಣಿದು ಕುಪ್ಪಳಿಸಿದ ಹುಡುಗರು; Viral Video ನೋಡಿದ್ರೆ ನಗೋದು ಗ್ಯಾರಂಟಿ

ನವದೆಹಲಿ: ಸಾಮಾನ್ಯವಾಗಿ ನಾವು ನೋಡಿರುವಂತೆ ಜನರು ತಾವು ಇಷ್ಟಪಟ್ಟಿರುವುದನ್ನು ಪಡೆಯಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ಘಟನೆಗಳು ನಡೆದಿವೆ. ಆದರೆ, ಹುಡುಗನ ವಿಚಾರವಾಗಿ ಹುಡುಗಿಯರು ಕಿತ್ತಾಡಿಕೊಳ್ಳುತ್ತಿರುವ ವಿಡಿಯೋಗಳು (Viral Video) ಇತ್ತೀಚಿನ ದಿನಗಳಲ್ಲಿ ವೈರಲ್​ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.

ಸದ್ಯ ವೈರಲ್​ ಆಗಿರುವ ವಿಡಿಯೋ (Viral Video) ನೋಡುವುದಾದರೆ ಹುಡುಗಿಯರ ಗುಂಪೊಂದು ಕಿತ್ತಾಡಿಕೊಂಡಿದ್ದು, ಬೆಲ್ಟ್​ ಸೇರಿದಂತೆ ಇತರೆ ವಸ್ತುಗಳಿಂದ ಮನಸ್ಸೋಇಚ್ಛೆ ಥಳಿಸಿದ್ದಾರೆ. ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಆದರೆ, ಹುಡುಗಿಯರು ಕಿತ್ತಾಡಿಕೊಳ್ಳುವಾಗ ಅಲ್ಲಿದ್ದ ಹುಡುಗರು ಖುಷಿಯಲ್ಲಿ ಕುಣಿದಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

gharkekalesh ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ (Viral Video) ಹಂಚಿಕೊಳ್ಳಲಾಗಿದ್ದು, 1.75 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಅಉಮ್ಮನೆ ನೋಡುವ ಬದಲು ಜಗಳವನ್ನು ಬಿಡಿಸಬಹುದಿತ್ತಲ್ವಾ ಎಂದು ಕಮೆಂಟ್​ ಮಾಡಿದರೆ ಮತ್ತಷ್ಟು ಜನ ನೋಡಲು ಫನ್ನಿಯಾಗಿದೆ ಎಂದು ಕಮೆಂಟ್​ ಹಾಕಿದ್ದಾರೆ. ಕೆಲವರು ಹುಡುಗರು ಕುಣಿಯುತ್ತಿರುವುದನ್ನು ನೋಡಿ ಹುಡುಗರೇ ಅವರನ್ನು ಜಗಳಕ್ಕೆ ಹುರಿದುಂಬಿಸುವಂತಿದೆ ಎಂದು ಕಮೆಂಟ್​ ಮಾಡಿದ್ದಾರೆ.