ನ್ಯೂಸ್

ದಾಳಿ ಸಂದರ್ಭದ ಯಾತನೆ ಬಿಚ್ಚಿಟ್ಟ ಇಸ್ರೇಲಿ ನಟಿ ರೋನಾ ಲೀ ಶಿಮೊನ್

ನವದೆಹಲಿ: ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದಾಗ ಇಸ್ರೇಲಿಗಳು ಎದುರಿಸಿದ ಭಯಾನಕತೆಯನ್ನು ಸೆರೆಹಿಡಿದಿರುವ ರೀಲ್​ ಅನ್ನು ಜನಪ್ರಿಯ ವೆಬ್ ಸರಣಿ ಫೌಡಾದಲ್ಲಿ ನಟಿಸಿರುವ ಇಸ್ರೇಲಿ ನಟಿ ರೋನಾ ಲೀ ಶಿಮೊನ್ ಇನ್‌ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ.

2023ರ ಅಕ್ಟೋಬರ್ 7 ವಿಶ್ವದ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ಹತ್ಯಾಕಾಂಡಗಳಲ್ಲಿ ಒಂದಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ಹಮಾಸ್​ ಉಗ್ರರ ದಾಳಿಯಲ್ಲಿ ಸುಮಾರು 1,300 ಇಸ್ರೇಲಿಗಳು ಕೊಲ್ಲಲ್ಪಟ್ಟರು. 150 ಕ್ಕೂ ಹೆಚ್ಚು ಮಹಿಳೆ, ಮಕ್ಕಳು ಮತ್ತು ಸಾರ್ವಜನಿಕರನ್ನು ಒತ್ತೆಯಾಳುಗಳನ್ನಾಗಿಸಿಕೊಂಡರು. ಈ ಭಯೋತ್ಪಾದಕ ದಾಳಿಗೆ ವಿರುದ್ಧವಾಗಿ ಗಾಜಾ ಮೇಲೆ ಇಸ್ರೇಲ್ ಭಯಂಕರ ಪ್ರತಿದಾಳಿ ನಡೆಸಿತು.

ದಾಳಿಗೆ ಮುನ್ನ ಮತ್ತು ಬಳಿಕ ಇಸ್ರೇಲ್‌ನ ಭಯೋತ್ಪಾದನಾ ನಿಗ್ರಹ ಘಟಕದ ಮಹಿಳಾ ಸದಸ್ಯೆ ನೂರಿಟ್ ನಿರ್ವಹಿಸಿದ ಪಾತ್ರದ ಕುರಿತು ಅವರು ಕೊಂಡಾಡಿದ್ದಾರೆ. ನೀವು ದಕ್ಷಿಣ ಇಸ್ರೇಲ್‌ನಲ್ಲಿ ತಾಯಿಯಾಗಿದ್ದೀರಿ ಎಂದು ಹಾಡಿಹೊಗಳಿದ್ದಾರೆ. ಹಮಾಸ್‌ನ ರಾಕೆಟ್ ಸ್ಟ್ರೈಕ್‌ನ ತುರ್ತು ಎಚ್ಚರಿಕೆ ಸಂದೇಶಗಳು ಮೊಬೈಲ್​ಗಳಿಗೆ ಬರಲು ಪ್ರಾರಂಭವಾಗುತ್ತವೆ. ಇದೇ ಸಂದರ್ಭ ಸೈರನ್‌ಗಳು ಮೊಳಗುತ್ತವೆ. ಬಳಿಕ ತಮ್ಮ ಪ್ರೀತಿಪಾತ್ರರಿಗೆ ಕರೆಗಳನ್ನು ಮಾಡಲಾಗುತ್ತದೆ. ಕರೆಗಳಿಗೆ ಉತ್ತರಿಸಲಾಗುವುದಿಲ್ಲ. ಪ್ರತಿ ಕ್ಷಣ ಭಯ, ದುಗುಡ ಆವರಿಸುತ್ತದೆ. ಸರ್ಕಾರಿ ಅಧಿಕಾರಿಗಳು ನಾಗರಿಕರನ್ನು ಆಶ್ರಯಕ್ಕಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಂದೇಶ ಕಳೂಹಿಸುತ್ತಾರೆ. ನಮ್ಮ ಪ್ರೀತಿಪಾತ್ರರನ್ನು ತಲುಪಲು ಪ್ರಯತ್ನಿಸುವಾಗ ಎಚ್ಚರಿಕೆಯ ಸಂದೇಶಗಳು ಒಂದೇ ಸಮನೆ ಮೊಬೈಲ್​ಗಳಿಗೆ ಬರುತ್ತಿರುತ್ತವೆ. ಇದು ಇಡೀ ಇಸ್ರೇಲ್​ ಪ್ರಜೆಗಳು ಹಮಾಸ್​ ಉಗ್ರರ ದಾಳಿ ಸಂದರ್ಭ ಅನುಭವಿಸಿದ ಯಾತನೆಯಾಗಿತ್ತು ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಒಂದು ಹಂತದಲ್ಲಿ ಮೊಬೈಲ್ ಚಾರ್ಜ್ ಖಾಲಿಯಾಗುತ್ತದೆ, ಪರದೆಯು ಕತ್ತಲೆಯಾಗುತ್ತದೆ. ಇಸ್ರೇಲ್ ಪರವಾಗಿ ನಿಲ್ಲುವ ಮನವಿಯೊಂದಿಗೆ ಕೊನೆಗೊಳ್ಳುತ್ತದೆ. ಕುಟುಂಬ ಸದಸ್ಯರ ಸಂದೇಶಗಳು, ತಮ್ಮ ಪ್ರೀತಿಪಾತ್ರರನ್ನು ಸಂಪರ್ಕಿಸಲು ಜನರು ವಿಫಲವಾಗಿ ಹತಾಶೆಗೆ ತಿರುಗಿ ಕಡೆಗೆ ದೇಶದ ವಿಚಾರ ಬಂದಾಗ ಭರವಸೆ ಮೂಡುತ್ತದೆ, ಕಡೆಗೆ ನಾವು ಮೇಲುಗೈ ಸಾಧಿಸುತ್ತೇವೆ ಎಂದು ನಟಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.