FASTag Pass: ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಊರಿಂದ ಊರಿಗೆ ಕಾರಿನಲ್ಲಿ ಪ್ರಯಾಣಿಸುವವರಿಗೆ ಕೇಂದ್ರ ಸರ್ಕಾರವು ಶುಭ ಸುದ್ದಿಯನ್ನೇ ನೀಡಿದೆ. ಟೋಲ್ ಪ್ಲಾಜಾಗಳಲ್ಲಿ ಪದೇ ಪದೇ ಹಣವನ್ನು ಪಾವತಿ ಮಾಡಿಕೊಳ್ಳುವ ಮೂಲಕ ರಿಚಾರ್ಚ್ ಮಾಡಿಕೊಳ್ಳುತ್ತಿದ್ದ ಪ್ರಯಾಣಿಕರಿಗೆ ಇದೀಗ ವಾರ್ಷಿಕ ಪಾಸ್ ಬಂಪರ್ ಆಫರ್ ಆಗಿ ಪರಿಣಮಿಸಿದೆ.
ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ ತಾರಕಕ್ಕೆ; ಅಮೆರಿಕಾಗೆ ಪುಟಿನ್ ಎಚ್ಚರಿಕೆ! ಸೇನಾ ಹಸ್ತಕ್ಷೇಪ ಸರಿಯಲ್ಲ | Russia
ವರ್ಷಕ್ಕೊಮ್ಮೆ ಪಾಸ್ ಖರೀದಿಸಲು ಇದು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತಿದೆ ಎಂಬುದರಲ್ಲಿ ಅನುಮಾನವೇ ಬೇಡ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಈಗಾಗಲೇ ಈ ಅಧಿಕೃತ ಘೋಷಣೆ ಹಾಗೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಅನೇಕ ಜನರಿಗೆ ಇದರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅಸಲಿಗೆ ಫಾಸ್ಟ್‌ಟ್ಯಾಗ್ ವಾರ್ಷಿಕ ಟೋಲ್ ಪಾಸ್ ಹೆಸರಿನಲ್ಲಿ ಬರುತ್ತಿರುವ ಈ ಹೊಸ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬುದರ ಸಂಪೂರ್ಣ ವಿವರಗಳು ಹೀಗಿದೆ ಗಮನಿಸಿ.
ಈ ವಾರ್ಷಿಕ ಟೋಲ್ ಪಾಸ್ ಇದೇ ಆಗಸ್ಟ್ 15, 2025ರಿಂದ ಜಾರಿಗೆ ಬರಲಿದೆ. ಇದರ ಬೆಲೆ ವರ್ಷಕ್ಕೆ 3,000 ರೂ. ಮೂರು ಸಾವಿರ ಕೊಟ್ಟು ವರ್ಷಕ್ಕೊಮ್ಮೆ ಪಾಸ್ ಖರೀದಿಸಬಹುದಾಗಿದೆ. ಇದು ಖಾಸಗಿ ವಾಹನಗಳಿಗೆ ಮಾತ್ರ. ಇದರ ಮಾನ್ಯತೆ ಎಷ್ಟು? ಎಂಬುದು ಬಹುತೇಕರ ಪ್ರಶ್ನೆ. ಗರಿಷ್ಠ 200 ಟೋಲ್ ಕ್ರಾಸಿಂಗ್ ಅಥವಾ ಒಂದು ವರ್ಷ ಮಿತಿ.
ಇದು ಪ್ರಿಪೇಯ್ಡ್ ಟೋಲ್ ಪಾಸ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ನಿಮ್ಮ ಫಾಸ್ಟ್‌ಟ್ಯಾಗ್‌ನಿಂದ ಯಾವುದೇ ಹೆಚ್ಚುವರಿ ಹಣವನ್ನು ಕಡಿತಗೊಳಿಸಲಾಗುವುದಿಲ್ಲ. ಈ ಪಾಸ್ 200 ಟೋಲ್ ಕ್ರಾಸಿಂಗ್‌ಗಳಿಗೆ ಅಥವಾ ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ. ಪಾಸ್‌ನ ಸಿಂಧುತ್ವವು ನಿಗಡಿಪಡಿಸಿದ ದಿನಾಂಕದಂದು ಕೊನೆಗೊಳ್ಳುತ್ತದೆ.
ಈ ಸೌಲಭ್ಯವು ಖಾಸಗಿ ವಾಹನ ಚಾಲಕರಿಗೆ ಮಾತ್ರ ಸೀಮಿತವಾಗಿದೆ. ವಾಣಿಜ್ಯ ವಾಹನಗಳಾದ ಲಾರಿ, ಸಾರಿಗೆ ಬಸ್ ಮತ್ತು ಟ್ಯಾಕ್ಸಿಗಳು.
ಇಲ್ಲಿ ಒಂದು ಪ್ರಮುಖ ಅನುಕೂಲವಿದೆ. ಪ್ರವೇಶ-ನಿರ್ಗಮನ ಬಿಂದುಗಳನ್ನು ಹೊಂದಿರುವ ಟೋಲ್ ರಸ್ತೆಗಳಲ್ಲಿ, ನಿಮ್ಮ ಪ್ರವಾಸವನ್ನು ಒಂದೇ ಟೋಲ್ ಕ್ರಾಸಿಂಗ್ ಎಂದು ಪರಿಗಣಿಸಲಾಗುತ್ತದೆ. ಇದು ಡಬಲ್ ಚಾರ್ಜಿಂಗ್‌ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
ಈ ಪಾಸ್ನಿಂದ ಟೋಲ್ ಬೂತ್‌ಗಳಲ್ಲಿ ಕಾಯುವ ಅಗತ್ಯವಿಲ್ಲ. ಪ್ರಯಾಣ ಸರಾಗವಾಗಿ ಸಾಗುತ್ತದೆ. ನಿಮ್ಮ ಖಾತೆಯಿಂದ ಪದೇ ಪದೇ ಹಣ ಕಡಿತಗೊಳ್ಳುವ ಬಗ್ಗೆ ಚಿಂತೆ ಇರುವುದಿಲ್ಲ. ಲೆಕ್ಕಾಚಾರದಲ್ಲಿ ಹೆಚ್ಚಿನ ಶುಲ್ಕ ಅಥವಾ ಗೊಂದಲಕ್ಕೆ ಇಲ್ಲಿ ಅವಕಾಶವಿಲ್ಲ.
ತಜ್ಞರ ಪ್ರಕಾರ, ಈ ಪಾಸ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವರ್ಷಕ್ಕೆ 2,500 - 3,000ಕ್ಕೂ ಅಧಿಕ ಕಿ.ಮೀ. ಪ್ರಯಾಣಿಸುವವರಿಗೆ ಹೆಚ್ಚು ಲಾಭದಾಯಕ.
ಸರ್ಕಾರವು ಶೀಘ್ರದಲ್ಲೇ ರಾಜಮಾರ್ಗ್‌ಯಾತ್ರ ಅಪ್ಲಿಕೇಶನ್, NHAI ಮತ್ತು MoRTH ವೆಬ್‌ಸೈಟ್‌ಗಳಲ್ಲಿ ವಿಶೇಷ ಲಿಂಕ್ ಅನ್ನು ಲಭ್ಯವಾಗುವಂತೆ ಮಾಡಿದೆ. ಅದರಲ್ಲಿ ನೀವು ನಿಮ್ಮ ವಾಹನ ಮತ್ತು FASTag ವಿವರಗಳನ್ನು ಒದಗಿಸುವ ಮೂಲಕ ಪಾಸ್ ಅನ್ನು ಸಕ್ರಿಯಗೊಳಿಸಬಹುದಾಗಿದೆ.
ಒಟ್ಟಾರೆ, ಈ ವಾರ್ಷಿಕ ಟೋಲ್ ಪಾಸ್ ವ್ಯವಸ್ಥೆಯು ಭಾರತೀಯ ರಸ್ತೆಗಳಲ್ಲಿನ ಪ್ರಯಾಣದ ಅನುಭವವನ್ನು ಪರಿವರ್ತಿಸುವ ಪ್ರಮುಖ ಸುಧಾರಣೆಯಾಗಿದೆ. ಇದು ದೇಶದ ಲಕ್ಷಾಂತರ ಖಾಸಗಿ ವಾಹನ ಚಾಲಕರಿಗೆ ಸಮಯ ಮತ್ತು ಹಣವನ್ನು ಉಳಿಸುವ ಮೂಲಕ ಬಿಗ್ ರಿಲೀಫ್ ನೀಡಿದೆ,(ಏಜೆನ್ಸೀಸ್).