ನವದೆಹಲಿ: ಕರೊನಾ ಸಂಕಷ್ಟದಿಂದಾಗಿ ಜನರು ಆರ್ಥಿಕವಾಗಿ ಬಸವಳಿದಿದ್ದಾರೆ. ಉದ್ಯೋಗ ನಷ್ಟ, ಸಂಬಳ ಕಡಿತದಿಂದಾಗಿ ದಿಕ್ಕು ಕಾಣದಂತಾಗಿದ್ದಾರೆ.
ಇಷ್ಟು ದಿನ ಕಳೆದ ಮೇಲೂ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಗಳೇನೂ ಇಲ್ಲ.
ಇದೀಗ ದಸರಾ ಹಬ್ಬ ಬೇರೆ ಸಮೀಪಿಸುತ್ತಿದೆ. ಕೊಲ್ಕತ್ತಾದಲ್ಲಂತೂ ಇದು ಅತ್ಯಂತ ಸಂಭ್ರಮದ ದುರ್ಗಾಪೂಜೆ. ಹೀಗಾಗಿ ಅಲ್ಲಿನ ರೈತರು ಹಾಗೂ ಮೀನುಗಾರರಿಗೆ ನೆರವು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ; ಎ.ಕೆ. -47 ಗುಂಡನ್ನು ತಡೆಯಬಲ್ಲುದು ಈ ಭಾಭಾ ಕವಚ….!
60 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿ ಪಡೆಯುತ್ತಿರುವ ರೈತ ಹಾಗೂ ಮೀನುಗಾರರ ಖಾತೆಗೆ ಅಕ್ಟೋಬರ್ ಮೊದಲ ವಾರದಲ್ಲಿ ಪಿಂಚಣಿ ಸಂದಾಯವಾಗಲಿದೆ.
ಪಶ್ಚಿಮ ಬಂಗಾಳ ಸರ್ಕಾರವು 87,911 ರೈತರು ಹಾಗೂ 20,000ಕ್ಕೂ ಅಧಿಕ ಮೀನುಗಾರರ ಖಾತೆಗೆ ಎರಡು ತಿಂಗಳ ಪಿಂಚಣಿಯನ್ನು ಮುಂಗಡವಾಗಿ ಪಾವತಿಸಲಿದೆ. 2,000 ರೂ.ಗಳನ್ನು ಖಾತೆಗೆ ಜಮಾ ಮಾಡಲಿದೆ.
ಆರ್ಥಿಕವಾಗಿ ಕಂಗೆಟ್ಟಿರುವ ಜನರಿಗೆ ಹಬ್ಬದ ಸಂದರ್ಭದಲ್ಲಿ ನೆರವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ 22 ಕೋಟಿ ರೂ.ಗಳನ್ನು ಭರಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.