ನ್ಯೂಸ್

ಪ್ರಧಾನಿ ಮೋದಿ ತಾಯಿಗೆ ಪತ್ರ ಬರೆದ ರೈತನ ಮನವಿ ಹೀಗಿದೆ...

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಶತಾಯುಷಿ ಹೀರಾಬೆನ್ ಅವರಿಗೆ ಪಂಜಾಬಿನ ಫಿರೋಜ್​ಪುರ ಜಿಲ್ಲೆಯ ಗೋಲು ಕಾ ಮೋಧ್ ಗ್ರಾಮದ ಹರ್​ಪ್ರೀತ್ ಸಿಂಗ್ ಪತ್ರಬರೆದಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನಗಳನ್ನು ಹಿಂಪಡೆಯುವಂತೆ ಮನ ಒಲಿಸಬೇಕು. ಈ ಕೆಲಸವನ್ನು ತಾಯಿ ಮಾತ್ರ ಮಾಡಬಲ್ಲರು. ಮೋದಿ ಈ ಕಾಯ್ದೆಯನ್ನು ಹಿಂಪಡೆದರೆ ಇಡೀ ದೇಶ ನಿಮಗೆ ಧನ್ಯವಾದ ಹೇಳಲಿದೆ ಎಂದು ಸಿಂಗ್ ಮನವಿ ಮಾಡಿದ್ದಾರೆ.

ಗಣರಾಜ್ಯೋತ್ಸವ ಪರೇಡ್ ನಂತರ ರೈತರ ಟ್ರಾ್ಯಕ್ಟರ್ ರ‍್ಯಾಲಿ

ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಪರೇಡ್ ಮುಗಿದ ನಂತರದಲ್ಲಿ ರೈತರ ಟ್ರಾ್ಯಕ್ಟರ್ ಪರೇಡ್ ನಡೆಸುವುದಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಟ್ರಾ್ಯಕ್ಟರ್ ರ‍್ಯಾಲಿ ಬಿಗಿ ಬಂದೋಬಸ್ತ್ ನಡುವೆ ನಡೆಯಬೇಕು ಎಂಬ ಷರತ್ತನ್ನೂ ಪೊಲೀಸರು ವಿಧಿಸಿದ್ದಾರೆ. ದೇಶಾದ್ಯಂತ ಒಂದು ಲಕ್ಷ ಟ್ರಾ್ಯಕ್ಟರ್ ಟ್ರಾಲಿಗಳು ಪರೇಡ್​ನಲ್ಲಿ ಭಾಗವಹಿಸಲಿವೆ. ಈ ಪೈಕಿ ಶೇಕಡ 30ರಲ್ಲಿ ರೈತರ ಬದುಕು ಕೇಂದ್ರಿತ ವಿವಿಧ ಥೀಮ್ಳ ಸ್ತಬ್ಧಚಿತ್ರ ಪ್ರದರ್ಶಿತವಾಗಲಿದೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.

ಪರೇಡ್ ಎಲ್ಲಿಂದ?: ದೆಹಲಿಯ ಐದು ಗಡಿ ಭಾಗಗಳಿಂದ ಅಂದರೆ ಸಿಂಘು, ಟಿಕ್ರಿ, ಗಾಜಿಪುರ, ಪಾಲ್ವಾಲ, ಶಹಜಹಾನ್​ಪುರಗಳಲ್ಲಿ ಕಳೆದ ನವೆಂಬರ್ 28ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಅಲ್ಲಿಂದಲೇ ಟ್ರಾ್ಯಕ್ಟರ್ ಪರೇಡ್ ಆರಂಭಿಸಲಿದ್ದು, ರಾಜಪಥದಲ್ಲಿ ಸಂಪನ್ನಗೊಳಿಸಲಿದ್ದಾರೆ. 100 ಕಿ.ಮೀ. ಉದ್ದದ ಮೆರವಣಿಗೆ ಸಂಜೆ 6 ಗಂಟೆಯೊಳಗೆ ಮುಗಿಸಲು ಸೂಚನೆ ಇದೆ.