ಬೆಂಗಳೂರು: ಕಿರುತೆರೆ ನಟ , ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕ ಅಂಜನಿ ಕಶ್ಯಪ ಹೆಸರನ್ನು ಹೇಳಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಶಾ ನರಸಪ್ಪ ಎಂಬ ಹೆಸರಿನ ಮಹಿಳೆಯೂ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರೇಳಿಕೊಂಡು ಆಕ್ಟಿಂಗ್ ಹಾಗೂ ಮಕ್ಕಳ ಪೋಟೋಶೂಟ್ ಮಾಡಿಸುವುದಾಗಿ ವಂಚನೆ ಎಸಗಿದ್ದಾರೆ.
ಆ್ಯಡ್ ಶೂಟ್, ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ. ನಿಮ್ಮ ಮಕ್ಕಳಿಗೂ ಚ್ಯಾನ್ಸ್ ಕೊಡಿಸುವುದಾಗಿ ಹೇಳಿ ನೂರಾರು ಮಂದಿ ಪೋಷಕರಿಂದ ಲಕ್ಷ ಲಕ್ಷ ಹಣ ಪಡೆದು ವಂಚನೆ ಎಸಗಲಾಗಿದೆ. ಈ ಸಂಬಂಧ ಹಣ ಕಳೆದುಕೊಂಡಿದ್ದ ಪೋಷಕರು ನಿಶಾಳನ್ನು ಹಿಡಿದು ಸದಾಶಿವನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ವಂಚದನೆ ಸಂಬಂಧ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಕೂಡ ಸದಾಶಿವನಗರ ಪೊಲೀಸ್ ಠಾಣೆಯಲ್ಇ ದೂರು ದಾಖಲಿಸಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿತೆ ನಿಶಾಳನ್ನು ವಶಕ್ಕೆ ಪಡೆದಿರುವ ಸದಾಶಿವನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.