ಬೆಂಗಳೂರು: ಇತ್ತೀಚೆಗೆ ಮೊಬೈಲ್ಗಳಲ್ಲಿ ವಾಟ್ಸ್ಪ್ ಸಂದೇಶವೊಂದು ಬಹಳ ಸದ್ದು ಮಾಡುತ್ತಿದೆ. ಅದೇನೆಂದರೆ, ಅಮೆಜಾನ್ ಕಂಪನಿ ಮೂವತ್ತನೇ ವರ್ಷಾಚರಣೆಯ ಪ್ರಯುಕ್ತ ಎಲ್ಲರಿಗೂ ಉಡುಗೊರೆ ದೊರೆಯಲಿದೆ ಎಂಬ ಲಿಂಕ್ ಒಂದು ಹರಿದಾಡುತ್ತಿದೆ.
ಈ ಲಿಂಕ್ ಕ್ಲಿಕ್ ಮಾಡಿದರೆ (https://ccweivip.xyz/amazonhz/tb.php?v=ss1616516)
ಅಮೆಜಾನ್ ಸರ್ವೆಯೊಂದನ್ನು ನಡೆಸುತ್ತಿದೆ ಇದಕ್ಕೆ ಉತ್ತರಿಸಿದರೆ ನಿಮಗೆ ದುಬಾರಿ ಉಡುಗೊರೆ ದೊರೆಯಲಿದೆ ಎಂಬ ಲಿಂಕ್ ಅದು. ಆದರೆ, ನಾವು ಯಾವುದೇ ಉಡುಗೊರೆ ನೀಡುತ್ತಿಲ್ಲ, ಸರ್ವೆಯನ್ನೂ ನಡೆಸುತ್ತಿಲ್ಲ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ.
ಫೇಕ್ ಯುಆರ್ಎಲ್ ಲಿಂಕ್ ಕ್ಲಿಕ್ ಮಾಡಿ, ಸರ್ವೆಯಲ್ಲಿ ಭಾಗವಹಿಸಿದರೆ, ಉಡುಗೊರೆಯ ಬಾಕ್ಸ್ ಒಂದು ಕಾಣುತ್ತದೆ. ನಂತರ ಆ ಸಂದೇಶವನ್ನು 20 ಜನಕ್ಕೆ ಅಥವಾ ಐದು ವಾಟ್ಸಪ್ ಗ್ರುಪ್ಗಳಲ್ಲಿ ಕಳಿಸಿದರೆ ಉಡುಗೊರೆ ನಿಮ್ಮದಾಗಲಿದೆ ಎಂಬ ಸೂಚನೆ ಇರುತ್ತದೆ.
ಒಂದು ವೇಳೆ ಯಾರಾದರೂ ಸಂದೇಶವನ್ನು ಕಳಿಸಿದರೆ, ಹ್ಯಾಕರ್ಗಳು ನಿಮ್ಮ ಖಾಸಗಿ ಮಾಹಿತಿಯನ್ನು ನಿಮ್ಮ ಮೊಬೈಲ್ನಿಂದ ಕದಿಯಬಹುದು ಈ ಕುರಿತು ಎಚ್ಚರವಾಗಿರಿ ಎಂದು ಅಮೆಜಾನ್ ತಿಳಿಸಿದೆ.