ಗೋಲ್ಡನ್ ಸ್ಟಾರ್ ಗಣೇಶ್ ಮತ್ತವರ ಕುಟುಂಬ ಸದ್ಯ ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದೆ. ಮಕ್ಕಳ ಶಾಲಾ ತರಗತಿಗಳೂ ಮನೆಯಲ್ಲಿಯೇ ನಡೆಯುತ್ತಿದೆ. ಹೀಗಿರುವಾಗ ಭಾನುವಾರ ಗಣೇಶ್ ಪುತ್ರಿ ಚಾರಿತ್ರ್ಯ ವಿಶೇಷವಾದ ಪೇಂಟಿಂಗ್ ಮಾಡಿದ್ದಾಳೆ. ಹಾಗಂತ ಯಾವುದೋ ಬಿಳಿ ಶೀಟ್ ಮೇಲೆ ಚಿತ್ರ ಬಿಡಿಸಿಲ್ಲ. ಬದಲಿಗೆ ಸಹೋದರ ವಿಹಾನ್ ಮುಖದ ಮೇಲೆ ಹುಲಿ ಮುಖವನ್ನು ಪೇಂಟಿಂಗ್ ಮಾಡಿದ್ದಾಳೆ. ತನ್ನ ಮುಖಕ್ಕೆ ಚಿಟ್ಟೆಯ ಚಿತ್ರ ಬಿಡಿಸಿಕೊಂಡಿದ್ದಾಳೆ. ಈ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಗಣೇಶ್ ಹಂಚಿಕೊಂಡಿದ್ದು, ಚಾರಿತ್ರ್ಯಾಳ ಕಲೆಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ. ಆ ಎರಡು ಪೇಂಟಿಂಗ್ ಫೋಟೋಗಳು ಇಲ್ಲಿವೆ.