ನ್ಯೂಸ್

ಮುಖದಲ್ಲಿ ಮೊಡವೆ ಹೆಚ್ಚಾಗಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

arunakunigal

ಮಂಗಳೂರು: ಪ್ರೌಢಾವಸ್ತೆ ಮತ್ತು ಯೌವನದಲ್ಲಿ ಮೊಡವೆ ಸಹಜ. ಇದಕ್ಕೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು, ಇಲ್ಲವೇ ವೈದ್ಯರ ಬಳಿಯೂ ಪರಿಹಾರ ಪಡೆಯಬಹುದು. ಆದರೆ ಇಲ್ಲೊಬ್ಬಳು ತನ್ನ ಮುಖದಲ್ಲಿ ಮೊಡವೆ ಹೆಚ್ಚಾಯಿತೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇಂತಹ ದುರ್ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಲ್ತಾಡಿಯಲ್ಲಿ ಸಂಭವಿಸಿದೆ. 15 ವರ್ಷದ ದಿವ್ಯಾ ಮೃತ ದುರ್ದೈವಿ. ಈಕೆ ಕೆಯ್ಯೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು.

ಮುಖದಲ್ಲಿನ ಮೊಡವೆಯಿಂದ ಬಹಳಷ್ಟು ನೊಂದುಕೊಂಡಿದ್ದ ದಿವ್ಯಾ ಇದೇ ವಿಚಾರವಾಗಿ ಮಾನಸಿಕವಾಗಿ ಕುಗ್ಗಿದ್ದಳು ಎನ್ನಲಾಗಿದೆ. ಬೆಳ್ಳಾರೆ ಠಾಣಾ ವ್ಯಾಪ್ತಿಯ ಗೇರು ಗುಡ್ಡದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.