ನ್ಯೂಸ್

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೂವರು ಸಾವು|Fire Cracker

Vijayavani Webdesk

Fire Cracker: ತಮಿಳುನಾಡಿನ ಶಿವಕಾಶಿ ಬಳಿ ನಾರಾಯಣಪುರಂನ ಮರಿಯಮ್ಮಾಳ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಮಹಿಳಾ ಕಾರ್ಮಿಕರು ಸೇರಿ ಮೂವರು ಮೃತಪಟ್ಟಿರುವ ಘಟನೆ ಸೋಮವಾರ ವರದಿಯಾಗಿದೆ.

ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಾರ್ಖಾನೆಯಲ್ಲಿ ಎಂದಿನಂತೆ ಕಾರ್ಮಿಕರು ಕೆಲಸಲದಲ್ಲಿದ್ದಾಗ ಪಟಾಕಿ ಶೇಖರಿಸಿಟ್ಟಿದ್ದ ಕೊಠಡಿಯಲ್ಲಿ ಕಿಡಿ ಹೊತ್ತಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ತಕ್ಷಣಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.( ಏಜೆನ್ಸೀಸ್ ​)