ನಮ್ಮ ಗುರುತು ಉಳಿಸಿಕೊಳ್ಳಲು ಜಿಲ್ಲೆಗೆ ಮರುನಾಮಕರಣ: DK ಶಿವಕುಮಾರ್

untitled-design-35-687e3dbb538a0
Published on

ಕನಕಪುರ: ನಾನು ನನ್ನ ಹುಟ್ಟಿದ ಊರು, ತಂದೆಯ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಆಗುತ್ತದೆಯೇ? ಅದೇ ರೀತಿ ಕುಮಾರಸ್ವಾಮಿ ಅವರು ರಾಮನಗರ ಕುಮಾರಸ್ವಾಮಿ ಎಂದು ಬದಲಾವಣೆ ಮಾಡಿಕೊಳ್ಳ ಸಾಧ್ಯವೇ? ಕುಮಾರಸ್ವಾಮಿ ನಮ್ಮ ಹೆಸರು ಬದಲಾವಣೆ ಮಾಡಿದ್ದರು. ನಾನು ಅದನ್ನು ಸರಿ ಮಾಡಿದ್ದೇನೆ ಎಂದು ಡಿಸಿಎಂ DK ಶಿವಕುಮಾರ್​ ಹೇಳಿದರು.

ಕನಕಪುರದ ಕೋಡಿಹಳ್ಳಿ ಹೋಬಳಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ''ಈ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಹೋದಾಗ ಬಿಡುವುದಿಲ್ಲ ಎಂದರು. ಶಿವಕುಮಾರ್ ಸ್ವಾಮೀಜಿ ಅವರು, ಕೆಂಗಲ್ ಹನುಮಂತಯ್ಯ ಅವರು ಈ ನೆಲದವರು. ಅವರು ರಾಜಕಾರಣ ಮಾಡಲು ಅಲ್ಲಿಂದ ಇಲ್ಲಿಗೆ ಬಂದು ಮಾಡುತ್ತಿದ್ದಾರೆ. ರಾಮಕೃಷ್ಣ ಹೆಗಡೆಯವರು ಕನಕಪುರದಲ್ಲಿಯೇ ಚುನಾವಣೆಗೆ ನಿಂತಿದ್ದರು” ಎಂದರು.

ನಮಗೆ ಪೆನ್ನು ಪೇಪರ್ ಸಿಕ್ಕ ಕಾರಣಕ್ಕೆ ಯಾವುದೇ ಕಾರಣಕ್ಕು ನಮ್ಮ ಮೂಲ ಹೆಸರನ್ನು ಬಿಡುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದ್ದೇವೆ. ಮಾಡಲು ಬಿಡುವುದಿಲ್ಲ ಎಂದರು. ನಾನು ಮಾಡಿಯೇ ತೀರುತ್ತೇನೆ ಎಂದು ಮರುನಾಮಕರಣ ಮಾಡಿದ್ದೇನೆ. ನಾನು ನಿಮ್ಮ ಜೇಬಿಗೆ ಹಣ ಹಾಕಲು ಆಗದಿದ್ದರು ನಿಮ್ಮ ಆಸ್ತಿ ಮೌಲ್ಯ ಹೆಚ್ಚಿಸಿದ್ದೇವೆ ಎಂದರು.

ನಾನು ಆರಂಭದಲ್ಲಿ ಇಲ್ಲಿನ ಶಾಸಕನಾದಾಗ ಒಮ್ಮೆ ಕಾರ್ಖಾನೆ ಸ್ಥಾಪನೆಗೆ ಒಬ್ಬರನ್ನು ಕರೆದುಕೊಂಡು ಬಂದೆ ಅವರು ಇಲ್ಲಿನ ರಸ್ತೆ ನೋಡಿ ಬರುವುದಿಲ್ಲ ಎಂದರು. ಅಂದೇ ತೀರ್ಮಾನ ಮಾಡಿ ರಸ್ತೆ ಅಗಲೀಕರಣ ಮಾಡಲಾಯಿತು. ಇದರಿಂದ ಆಸ್ತಿ ಮೌಲ್ಯ ಹೆಚ್ಚಾಗಿದೆ. ಕೋಡಿಹಳ್ಳಿ, ಸಾತನೂರು ಸೇರಿದಂತೆ ಅನೇಕ ಕಡೆ ರಸ್ತೆ ಅಗಲೀಕರಣ ಮಾಡಿದ್ದೇನೆ ಎಂದರು.

ಡಿಸಿಎಂ ಆಗಿ ಅಲ್ಲ, ನಿಮ್ಮ ಮನೆ ಮಗನಾಗಿ ಬಂದಿರುವೆ

“ನಾನು ಯಾವುದೇ ಅಧಿಕಾರ ಹೊತ್ತಕೊಂಡು ಇಲ್ಲಿಗೆ ಬಂದಿಲ್ಲ. ನಾನು ನಿಮ್ಮೆಲ್ಲರ ಮನೆಮಗನಾಗಿ ಇಲ್ಲಿಗೆ ಬಂದಿದ್ದೇನೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಆದ ಕಾರಣಕ್ಕೆ ಮುಂದಿನ ಮೂರು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನಿಮಗೆ ಮಾತುಕೊಟ್ಟ ಕಾರಣಕ್ಕೆ ನಿಮ್ಮ ಸಮಸ್ಯೆಗಳನ್ನು ಆಲಿಸಿಕೊಳ್ಳಲು ಬಂದಿದ್ದೇನೆ” ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net