ನ್ಯೂಸ್

ಬಾಂಬ್ ತಯಾರಿಕೆ ವೇಳೆ ಸ್ಫೋಟ.. ಮೂವರ ಸಾವು | Bomb Making

ಬಾಬುಪ್ರಸಾದ್​ ಮೋಡಿಸ್​

ಪಶ್ಚಿಮ ಬಂಗಾಳ: ಮನೆಯಲ್ಲಿ ಸ್ವದೇಶಿ ಬಾಂಬ್​ ತಯಾರು(Bomb Making) ಮಾಡುತ್ತಿದ್ದಾಗ ಅಕ್ಮಸಿಕವಾಗಿ ಬಾಂಬ್​ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಖಯಾರ್ತಲಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಸ್ಥಳೀಯ ನಿವಾಸಿಗಳಾದ ಮಾಮುನ್​ ಮೊಲ್ಲಾ, ಸಕಿರುಲ್​ ಸರ್ಕಾರ್ ಮತ್ತು ಮುಸ್ತಾಕಿನ್​ ಶೇಖ್​​ ಮೃತರು ಎಂದು ಗುರುತಿಸಲಾಗಿದೆ. ಮೃತ ಮಾಮುನ್​ ಮೊಲ್ಲಾ ಮನೆಯಲ್ಲಿ ಆಕ್ರಮ ಬಾಂಬ್​ ತಯಾರುಸುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿನ್ನೆ (ಭಾನುವಾರ) ತಡ ರಾತ್ರಿ ದೊಡ್ಡ ಮಟ್ಟದ ಶಬ್ಧ ಕೇಳಿಬಂತು. ಹೀಗಾಗಿ, ನೆರೆಹೊರೆಯರು ಎಲ್ಲಾರೂ ಸೇರಿದ್ದೇವೆ ಎಂದು ಹೇಳಿದ್ದಾರೆ. ಬಾಂಬ್​ ಸ್ಫೋಟದ ಪರಿಣಾಮ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದಕ್ಕೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಸದ್ಯಕ್ಕೆ ಬಾಂಬ್​ ತಯಾರಿಗೆ ಸಂಬಂಧಪಟ್ಟ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪೊಲೀಸರು​ ಪ್ರಾಥಮಿಕ ತನಿಖೆ ಮಾಡಿ ಮಾಧ್ಯಮಗಳಿಗೆ ತಿಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ, (ಏಜೆನ್ಸಿಸ್​).