ಚಂಡೀಗಢ: ಪಂಜಾಬ್ನಲ್ಲಿ ವ್ಯಕ್ತಿಯೊಬ್ಬರು ನಾಲ್ಕು ಸ್ನಾತಕೋತ್ತರ ಪದವಿ, ಪಿಎಚ್ಡಿ ಪೂರ್ಣಗೊಳಿಸಿದ್ದರು ಜೀವನ ನಿರ್ವಹಣೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಡಾ.ಸಂದೀಪ್ ಸಿಂಗ್(39) ಪಂಜಾಬಿ, ಪತ್ರಿಕೋದ್ಯಮ, ರಾಜ್ಯಶಾಸ ಮತ್ತು ಕಾನೂನು ಶಿಣದಲ್ಲಿ ಸ್ನಾತಕೋತ್ತರ ಮುಗಿಸಿದ್ದಾರೆ.
ಕಾನೂನು ಶಿಕ್ಷಣದಲ್ಲಿ ಪಿಎಚ್ಡಿ ಪೂರ್ಣಗೊಳಿಸಿ, 11 ವರ್ಷಗಳ ಕಾಲ ಪಂಜಾಬಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು, ಅಧ್ಯಯನ ಮುಂದುವರಿಸುತ್ತಿದ್ದಾರೆ.
ಪ್ರಾಧ್ಯಾಪಕ ಕೆಲಸ ಮಾಡುತ್ತಿದ್ದಾಗ ಸಕಾಲಕ್ಕೆ ಸಂಬಳ ಸಿಗದ ಕಾರಣ ಹಾಗೂ ಆಗಾಗ ವೇತನ ಕಡಿತವಾಗುತ್ತಿದ್ದರಿಂದ ಕುಟುಂಬ ನಿರ್ವಹಣೆ ಹೊರೆಯಾಯಿತು. ಆ ಕೆಲಸದಿಂದ ಜೀವನ ಸಾಗಿಸುವುದು ಕಷ್ಟವಾಗಿತ್ತು. ಹಾಗಾಗಿ ನನ್ನ ಮತ್ತು ನನ್ನ ಕುಟುಂಬದ ಉಳಿವಿಗಾಗಿ ಆ ವೃತ್ತಿಯನ್ನು ಬಿಟ್ಟು ತರಕಾರಿ ಮಾರಲು ಆರಂಭಿಸಿದೆ ಎಂದು ಸಂದೀಪ್ ತಿಳಿಸಿದ್ದಾರೆ. ಪ್ರತಿದಿನ ಮನೆಮನೆಗೆ ತರಕಾರಿ ಮಾರುತ್ತಿದ್ದೇನೆ. ಫ್ರೊಫೆಸರ್ ಆಗಿದ್ದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತೇನೆ. ಹಣ ಉಳಿಸಿ ಮುಂದೊಂದು ದಿನ ಸ್ವಂತ ಟ್ಯೂಷನ್ ಸೆಂಟರ್ ತೆರೆಯುವ ಆಲೋಚನೆ ಇದೆ ಎಂದು ಹೇಳಿದ್ದಾರೆ.