ನ್ಯೂಸ್

ಇಂಜಿನಿಯರಿಂಗ್​ ವಿದ್ಯಾರ್ಥಿ ಅನುಮಾನಾಸ್ಪದ ಸಾವು! ನಾಲ್ಕೆ ದಿನಗಳ ಅಂತರದಲ್ಲಿ ಕ್ಯಾಂಪಸ್​ನಲ್ಲಿ 2 ಸಾವು ..Engineering Student

ಭಾನುಪ್ರಿಯ ಡಿ.ಕೆ

Engineering Student : ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಖರಗ್‌ಪುರದಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ​ ವಿದ್ಯಾರ್ಥಿಯೊಬ್ಬ ಅದೇ ಕ್ಯಾಂಪಸ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ (ಜುಲೈ21)ನಡೆದಿದೆ.

ಚಂದ್ರದೀಪ್​ ಪವರ್​ ಮೃತ ವಿದ್ಯಾರ್ಥಿ. ಸೋಮವಾರ (ಜುಲೈ21)ರಾತ್ರಿ ಸಾವನ್ನಪ್ಪಿದ್ದಾನೆ. 4 ದಿನಗಳ ಹಿಂದೆ (ಜುಲೈ18)ರಂದು ರಿತಮ್​ ಮಂಡಲ್​ ಎಂಬ ವಿದ್ಯಾರ್ಥೀ ಅದೇ ಕ್ಯಾಂಪಸ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಎಂದು ಮಾಹಿತಿ ತಿಳಿದು ಬಂದಿದೆ.

ಚಂದ್ರದೀಪ್​ ಸೋಮವಾರ ರಾತ್ರಿ ಊಟ ಮಾಡಿದ ನಂತರ, ವೈದ್ಯರ ಸಲಹೆಯಂತೆ ಕೆಲ ಔಷಧಿಗಳನ್ನು ಸೇವಿಸಿದ್ದಾನೆ. ಮಧ್ಯಪ್ರದೇಶದ ನಿವಾಸಿ, ಚಂದ್ರದೀಪ್​ನನ್ನು ಕ್ಯಾಂಪಸ್​ ಆಸ್ಪತ್ರೆಗೆ ವರ್ಗಾಹಿಸಲಾಯಿತು. ಅಲ್ಲಿನ ವೈದ್ಯರು ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಇನ್ನು ಈ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮಾಹಿತಿ ಲಭ್ಯವಾದ ನಂತರವೇ ಸಾವಿನ ನಿಜವಾದ ಕಾರಣ ತಿಳಿಯಬಹುದಾಗಿದೆ.

ಈ ಬಗ್ಗೆ ಸಂಸ್ಥೆಯ ಕೆಲವರು ಮಾಹಿತಿ ನೀಡಿದ್ದು, ಚಂದ್ರದೀಪ್ ಕೆಲವು ದಿನಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದು, ಆತನ ಸಾವಿ ಬಗ್ಗೆ ಗೊಂದಲಗಳು ಉಂಟಾಗುತ್ತಿವೆ ಎಂದಿದ್ದಾರೆ. ಇತ್ತ ಅವನು ತೆಗೆದುಕೊಳ್ಳುತ್ತಿದ್ದ ಔಷಧಿಗಳು ಆತನ ಶ್ವಾಸನಾಳದಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ ಎಂದು ಸಂಸ್ಥೆಯ ಅಧಿಕಾರಿಗಳು ಪೋಲೀಸರಿಗೆ ತಿಳಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ನಂತರ ನಿಖರ ಕಾರಣ ತಿಳಿದು ಬರಲಿದೆ.

ಐಐಟಿ ಖರಗ್‌ಪುರದ ಕ್ಯಾಂಪಸ್‌ನಲ್ಲಿ ನಡೆದ ಐದನೇ ಅಸಹಜ ಸಾವಿನ ಪ್ರಕರಣ ಇದಾಗಿದ್ದು, ಸೋಮವಾರ ಪವಾರ್ ಮತ್ತು ಜುಲೈ 18 ರಂದು ನಡೆದ ರಿತಮ್ ಮಂಡಲ್ ಸೇರಿದಂತೆ ಇನ್ನು ಮೂರು ವಿದ್ಯಾರ್ಥಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.