ಜಮ್ಮು ಮತ್ತು ಕಾಶ್ಮೀರ: ಇಂದು (15) ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕ ತನ್ನ ಸಾವಿಗೂ ಮುನ್ನ ಆತನ ತಾಯಿಯೊಂದಿಗೆ ವಿಡಿಯೋಕಾಲ್ ಮೂಲಕ ಮಾತನಾಡಿದ್ದಾನೆ. ಅವನ ತಾಯಿ ಶರಣಾಗುವಂತೆ ಬೇಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಭಯೋತ್ಪಾದಕ ಅಮೀರ್ ನಜೀರ್ವಾನಿ ತನ್ನ ತಾಯಿಯೊಂದಿಗೆ ಮಾತನಾಡುವಾಗ ಎಕೆ -47 ಹಿಡಿದುಕೊಂಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ಚಿತ್ರ ಹಿಂಸೆ ಬಿಟ್ರೆ ಬೇರೇನೂ ಮಾಡಲಿಲ್ಲ; ತಂದೆ ಮಾಡಿದ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟ ಚೈತ್ರಾ ಕುಂದಾಪುರ| Chitra Kundapura
ಕೊನೆಯ ವಿಡಿಯೋ ಕರೆಯಲ್ಲಿ, ಅಮೀರ್‌ನ ತಾಯಿ ಅವನಿಗೆ ಶರಣಾಗುವಂತೆ ಹೇಳಿದ್ದಾರೆ. ಆದರೆ ಅವನು ತನ್ನ ತಾಯಿ ಮಾತನ್ನು ನಿರಾಕರಿಸಿದ್ದಾನೆ. ಸೈನ್ಯ ಮುಂದೆ ಬರಲಿ, ನಂತರ ನಾನು ನೋಡುತ್ತೇನೆ ಎಂದು ಆತ ಉತ್ತರಿಸಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ನಾದಿರ್ ಗ್ರಾಮದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ಮೂವರು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರಲ್ಲಿ ಅಮೀರ್ ಕೂಡ ಒಬ್ಬನಾಗಿದ್ದಾನೆ. ಎನ್‌ಕೌಂಟರ್‌ನಲ್ಲಿ ಹತರಾದ ಮೂವರು ಭಯೋತ್ಪಾದಕರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಎಲ್ಲರೂ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳು ಎಂದು ಹೇಳಲಾಗಿದೆ.
(ಏಜೆನ್ಸೀಸ್)
ಉಗ್ರರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆ ಈ ಸಂಪರ್ಕ ಇರುವುದು ಬಹಿರಂಗವಾಗಿದೆ. ಅವರೆಲ್ಲರೂ ಅವಂತಿಪೋರಾದ ಟ್ರಾಲ್ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಲು ಟ್ರಾಲ್ ತಹಸಿಲ್‌ನ ನಾಡರ್ ಗ್ರಾಮವನ್ನು ಸುತ್ತುವರೆದವು. ಭದ್ರತಾ ಪಡೆಗಳು ಅಡಗಿಕೊಂಡಿದ್ದ ಭಯೋತ್ಪಾದಕರ ಬಳಿಗೆ ಬಂದ ತಕ್ಷಣ, ಪರಸ್ಪರ ಗುಂಡಿನ ದಾಳಿ ನಡೆದಿದೆ. ನಂತರ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರವನ್ನು ನೀಡಿ ಉಗ್ರರನ್ನು ಮಟ್ಟ ಹಾಕಿವೆ.