ಮುಂಬೈ: ಹೀರೋ, ವಿಲನ್ ಸೇರಿ ಯಾವುದೇ ಪಾತ್ರವಾದರೂ ಅಚ್ಚುಕಟ್ಟಾಗಿ ಮಾಡುವ ಬಾಲಿವುಡ್ ನಟ ಇಮ್ರಾನ್ ಹಶ್ಮಿ ವಿವಾಧಗಳಿಂದ ದೂರವಿರುತ್ತಾರೆ. ಆದರೆ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈ ಬಗ್ಗೆ ಈ ಹಿಂದೆ ಮಾಡಿದ್ದ ವಿವಾಧಾತ್ಮಕ ಕಾಮೆಂಟ್ಗೆ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
"2014 ರಲ್ಲಿ ಪ್ರಸಾರವಾದ ಕಾಫಿ ವಿಥ್ ಕರಣ್ ನಲ್ಲಿ ಐಶ್ವರ್ಯಾ ಅವರ ಬಗ್ಗೆ ನನ್ನ ಕಾಮೆಂಟ್‌ಗಳು ವಿವಾದಾಸ್ಪದವಾಗಿತ್ತು. ನಾನು ಐಶ್ವರ್ಯಾ ಅವರನ್ನು ಪ್ಲಾಸ್ಟಿಕ್ ಎಂದು ಕಾಮೆಂಟ್ ಮಾಡಿದ್ದೇನೆ. ಅವು ಕೇವಲ ತಮಾಷೆಯ ಮಾತುಗಳಾಗಿವೆ. ಕೆಲವರು ನನ್ನ ಕಾಮೆಂಟ್‌ಗಳನ್ನು ತಪ್ಪಾಗಿ ಅರ್ಥೈಸಿ ವಿವಾದವನ್ನು ಸೃಷ್ಟಿಸಿದ್ದಾರೆ. ಅದಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ. ನಾನು ಐಶ್ವರ್ಯಾರನ್ನು ಗೌರವಿಸುತ್ತೇನೆ. ನನ್ನ ಕಾಮೆಂಟ್‌ಗಳಿಂದ ಅವರು ಮನನೊಂದಿದ್ದರೆ ಕ್ಷಮೆ ಕೇಳಲು ಸಿದ್ಧ" ಎಂದು ಇಮ್ರಾನ್ ಹೇಳಿದರು.
ನಂತರ ಅಮೀಷಾ ಪಟೇಲ್, ಬಗ್ಗೆ ಮಾತನಾಡಿ, "ಗೋವಿಂದ ನಂತರ 'ಯೇ ಜಿಂದಗಿ ಕಾ ಸಫರ್' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ನಾನು ನಟನಾ ತರಬೇತಿ ಪಡೆಯುತ್ತಿದ್ದೆ. ಚಿತ್ರದ ಬರಹಗಾರ ಮಹೇಶ್ ಭಟ್ ನನಗೆ ನಟಿಸಲು ಪ್ರೋತ್ಸಾಹಿಸಿದರು. ನಟಿ ಅಮಿಷಾ ಪಟೇಲ್ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಆಗುತ್ತದೆಯೇ ಎಂದು ನನ್ನ ಬಗ್ಗೆ ಅಭಿಪ್ರಾಯಪಟ್ಟರು. ಆಗ ಆ ಪ್ರಾಜೆಕ್ಟ್ ನನ್ನ ಕೈತಪ್ಪಿತು. ಆಗ ಅವರ ಮೇಲೆ ಕೋಪ ಬಂದಿತ್ತು. ಆದರೆ ಈಗ ಅನಿಸುತ್ತಿದೆ, ಅದರಿಂದ ತಪ್ಪಿಸಿಕೊಂಡಿದ್ದು ಒಳ್ಳೇಯದಾಯಿತೆಂದು ಎಂದು ಹೇಳಿದರು.