ಗ್ರೈಮ್ಸ್​ ಮತ್ತು ಎಲಾನ್ ಮಸ್ಕ್ 
ನ್ಯೂಸ್

ಎಲಾನ್ ಮಸ್ಕ್ ಬಚ್ಚಿಟ್ಟಿದ್ದ 'ಆ ಮೂರನೇ ಮಗು'ವಿನ ವಿಷಯ ಕೊನೆಗೂ ಬಹಿರಂಗ!

ನವದೆಹಲಿ: ಟೆಸ್ಲಾ ಕಂಪನಿಯ ಸಿಇಒ, ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್​ ಬಚ್ಚಿಟ್ಟಿದ್ದ ಆ ಮೂರನೇ ಮಗುವಿನ ವಿಷಯ ಕೊನೆಗೂ ಬಹಿರಂಗಗೊಂಡಿದೆ. ಎಲಾನ್ ಮಸ್ಕ್ ಜೀವನಚರಿತ್ರೆ ಕುರಿತ ಈ ಪುಸ್ತಕದಲ್ಲಿ ಆ ವಿಷಯ ಉಲ್ಲೇಖಗೊಂಡಿದೆ.

ಪತ್ರಕರ್ತ ವಾಲ್ಟರ್ ಐಸಾಕ್​ಸನ್ ಎಂಬವರು ಮಸ್ಕ್ ಮತ್ತು ಆತನ ಸಹೋದ್ಯೋಗಿಗಳ ಸಂದರ್ಶನಗಳು ಹಾಗೂ ಕಳೆದ ಎರಡು ವರ್ಷಗಳ ಅಧ್ಯಯನದ ಮೂಲಕ ಈ ಜೀವನಚರಿತ್ರೆಯನ್ನು ರಚಿಸಿದ್ದಾರೆ. ಸೆ. 12ರಂದು ಬಿಡುಗಡೆ ಆಗಲಿರುವ ಈ ಪುಸ್ತಕದ ವಿಮರ್ಶೆ ಮಾಧ್ಯಮವೊಂದರಲ್ಲಿ ಪ್ರಕಟವಾಗುವ ಮೂಲಕ ಆ ವಿಷಯ ಬಹಿರಂಗಗೊಂಡಿದೆ.

ಮಸ್ಕ್​ನ ಮಾಜಿ ಗೆಳತಿ ಗ್ರೈಮ್ಸ್​ ದಾಂಪತ್ಯದಲ್ಲಿ ಹುಟ್ಟಿದ್ದು ಇಬ್ಬರಲ್ಲ ಮೂವರು, ಆದರೆ ಆ ಮೂರನೇ ಮಗುವಿನ ವಿಷಯ ಗುಟ್ಟಾಗಿ ಇಡಲಾಗಿತ್ತು ಎಂಬ ಸಂಗತಿ ಇದೀಗ ಬಯಲಾಗಿದೆ. ಆ ಮೂರನೇ ಮಗನ ಹೆಸರು ಟೆಕ್ನೊ ಮೆಕಾನಿಕಸ್ (ಟಾ-Tau) ಎಂಬುದಾಗಿದ್ದು, ಈ ವಿಷಯ ಸಾರ್ವಜನಿಕರಿಗೆ ಗೊತ್ತಾಗದಂತೆ ಇರಿಸಲಾಗಿತ್ತು ಎಂಬುದು ಈ ಜೀವನಚರಿತ್ರೆಯಿಂದ ತಿಳಿದುಬಂದಿದೆ. ಈಕೆಯ ಹೊರತಾಗಿ ಮಸ್ಕ್​ಗೆ ಮೂವರು ಪತ್ನಿಯರಿದ್ದು, 11 ಮಕ್ಕಳಿದ್ದಾರೆ. ಒಂದು ಮಗು ಸಾವಿಗೀಡಾಗಿದೆ. -ಏಜೆನ್ಸೀಸ್