ನ್ಯೂಸ್

VIDEO| ವೃದ್ಧ ಕ್ಯಾಬ್​ ಚಾಲಕನನ್ನು ಅಮಾನುಷವಾಗಿ ಥಳಿಸಿದ ಗುಂಪು

ನ್ಯೂಯಾರ್ಕ್​: ಆಘಾತಕಾರಿ ಘಟನೆಯೊಂದರಲ್ಲಿ ಐದು ಜನರ ಗುಂಪೊಂದು ವೃದ್ಧ ಕ್ಯಾಬ್​ ಚಾಲಕನನ್ನು ಹಿಡಿದು ಅಮಾನುಷವಾಗಿ ಥಳಿಸಿ ಪರಾರಿಯಾಗಿರುವ ಘಟನೆ ನ್ಯೂಯಾರ್ಕ್​ನ 6thಅವೆನ್ಯೂ ಮತ್ತು W34 ಸ್ಟ್ರೀಟ್​ನಲ್ಲಿ ನಡೆದಿದೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ಧಾರೆ. ದಾರಿಹೋಕರೊಬ್ಬರು ಈ ಅಮಾನುಷ ಕೃತ್ಯವನ್ನು ಸೆರೆ ಹಿಡಿದು ವೈರಲ್​ ಮಾಡಿದ್ಧಾರೆ.

ಮೃಗೀಯ ವರ್ತನೆ

ವೈರಲ್​ ಆಗಿರುವ ವಿಡಿಯೊದಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು 60 ವರ್ಷದ ಕ್ಯಾಬ್​ ಚಾಲಕನನ್ನು ಹಿಡಿದು ನಡು ರಸ್ತೆಯಲ್ಲಿ ಅಮಾನುಷವಾಗಿ ಥಳಿಸುತ್ತಿರುವುದು ಕಂಡು ಬರುತ್ತದೆ. ವೃದ್ಧ ಎಷ್ಟೇ ಗೋಗರೆದರು ಸುಮ್ಮನಾಗದ ಕಿಡಿಗೇಡಿಗಳು ತಮ್ಮ ಮೃಗೀಯ ವರ್ತನೆಯನ್ನು ಮುಂದುವರೆಸುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು ಕ್ಯಾಬ್​ ಚಾಲಕ ಹಾಗೂ ಐವರು ನಡುವೆ ವಿಚಾರ ಒಂದಕ್ಕೆ ಗಲಾಟೆ ಶುರುವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಐವರು ಸದಸ್ಯರ ಗುಂಪು ಏಕಾಏಕಿ ಆತನ ಮೇಲೆ ದಾಳಿ ಮಾಡಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಹೊವಾರ್ಡ್ ಕೊಲ್ಲಿ(35), ನಟಾಲಿ ಮೋರ್ಗನ್(51) ಎಮಬುವವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿರುದ್ಧ ಕ್ರಿಮಿನಲ್​ ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ನ್ಯೂಯಾರ್ಕ್​ ಸ್ಟೇಟ್​ ಟ್ಯಾಕ್ಸಿ ಚಾಲಕರ ಸಂಘವು ಈ ರೀತಿಯ ಕೃತ್ಯಗಳನ್ನು ಸಹಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಒಬ್ಬ ವೃದ್ಧ ಎಂದು ನೋಡದೆ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದು ಖಂಡನೀಯ ಆರೋಪಿಗಳ ವಿರುದ್ಧ ಕಠಿಣ ಕಾನೂನು ಶಿಕ್ಷೆ ಜರುಗಿಸಬೇಕು ಎಂದು ಆಗ್ರಹಿಸಿದೆ.