ದೆಹಲಿ: ದೆಹಲಿಯ ಅಲಿ ಗಾಂವ್ ಪ್ರದೇಶಲ್ಲಿ ಹಾಡಹಗಲೇ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Old man) ಆಗಿದ್ದು, ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಶುಕ್ರವಾರ (ಅ.24) ರಂದು ರಘುರಾಜ್ ಎಂದು ಗುರುತಿಸಲ್ಪಟ್ಟ ಬಲಿಪಶು ಮನೆಯಿಂದ ಕಚೇರಿಗೆ ತನ್ನ ಕಾರಿನಲ್ಲಿ ಹೊರಡುತ್ತಿದ್ದಾಗ ಆರೋಪಿ ಮೋಹಿತ್ ಹಾಗೂ ಆತನ ಸ್ನೇಹಿತರು ವೃದ್ಧನನ್ನು ತಡೆದು ವಾಹನದಿಂದ ಅವರನ್ನು ಹೊರಗೆಳೆದು ನಿರ್ದಯವಾಗಿ ಥಳಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶತಕದಾಟ ತೋರಿದ ರೋಹಿತ್ ಶರ್ಮ: ‘ರೋಕೊ’ ಅಬ್ಬರಕ್ಕೆ ಬೆರಗಾದ ಆಸೀಸ್! ಕೊಹ್ಲಿ ಪ್ರತಿಕ್ರಿಯೆ ವೈರಲ್ | IND vs AUS
ದಾಳಿಕೋರರು ಬಲಿಪಶುವನ್ನು ಕೋಲುಗಳಿಂದ ತೀವ್ರವಾಗಿ ಹೊಡೆದು ಗಾಯಗೊಳಿಸಿದ್ದನು. ಈ ಹಲ್ಲೆಗಳಿಂದಾಗಿ ರಘುರಾಜ್ ಅವರ ಎರಡೂ ಕಾಲುಗಳು ಮುರಿದಿವೆ. ಈ ದಾಳಿಯನ್ನು ತಡೆಯಲು ಅಕ್ಕ-ಪಕ್ಕದವರು ಬಂದಾಗ ಅವರನ್ನು ಆರೋಪಿಗಳು ಬೆದರಿಸಿ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಈ ದಾಳಿಯು ವೈಯಕ್ತಿಕ ದ್ವೇಷದಿಂದ ಪ್ರಾರಂಭವಾಗಿದೆ. 2 ವರ್ಷಗಳ ಹಿಂದೆ, ಪ್ರಮುಖ ಆರೋಪಿ ಮೋಹಿತ್ ಅಲಿ ಗಾಂವ್ನಲ್ಲಿ ಒಂದು ಜಮೀನನ್ನು ಖರೀದಿಸಿ ಅದರ ಮೇಲೆ ನಿರ್ಮಾಣ ಕೆಲಸವನ್ನು ಆರಂಭಿಸಿದ್ದ, ಆದಾಗ್ಯೂ, ದೆಹಲಿ ಅಭಿವೃದ್ಧಿ ಪ್ರಾಧಿಕಾರ ಅನಧೀಕೃತ ನಿರ್ಮಾಣವನ್ನು ಉಲ್ಲೇಖಿಸಿ ಒಂದು ತಿಂಗಳೊಳಗೆ ರಚನೆಯನ್ನು ಕೆಡವಿತು.
ಅಕ್ರಮ ನಿರ್ಮಾಣದ ಬಗ್ಗೆ ರಘುರಾಜ್ ಡಿಡಿಎಗೆ ದೂರು ನೀಡಿದ್ದರಿಂದ ನಿರ್ಮಾಣ ಕೆಡವಬೇಕಾಯಿತು ಎಂದು ಮೋಹಿತ್ ಅನುಮಾನ ವ್ಯಕ್ತಪಡಿಸಿದ್ದಾನೆ. ಇದಾದ ಬಳಿಕ ನನ್ನ ನಷ್ಟಕ್ಕೆ ಇವರೇ ಕಾರಣ ಎಂದು ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ ಆರೋಪಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಈ ಪ್ರಕರಣವನ್ನು ಗಮನಿಸಿದ ದೆಹಲಿ ಪೊಲೀಸರು ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಆರೋಪಿ ಮೋಹಿತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)