ಕೂದಲಿನ ರಕ್ಷಣೆಯ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ಶ್ರುತಿ ಹಾಸನ್! ಏನದು ರಹಸ್ಯ Shruti Haasan

untitled-design-23-68fc9732556fa
Published on

Shruti Haasan: ಕೂದಲಿನ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರಿಗೂ ಇರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಅವುಗಳನ್ನು ಎದುರಿಸುವ ಉತ್ತಮ ಮಾರ್ಗವೆಂದರೆ ಮನೆಮದ್ದುಗಳು ಎಂದು ತಿಳಿದುಬಂದಿದೆ. ಅದೇ ರೀತಿಯಲ್ಲಿ ಭಾರತೀಯ ನಟಿ ಗಾಯಕಿ ಶ್ರುತಿ ಹಾಸನ್​ ತಮ್ಮ ಉದ್ದ ಮತ್ತು ಸುಂದರವಾದ ಕೂದಲಿನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅವರು ಕೂದಲನ್ನು ಪಳಗಿಸಲು ಸಹಾಯ ಮಾಡುವುದು ಸರಳ ಎಣ್ಣೆ ಎಂದು ಹೇಳಿದ್ದಾರೆ.

ಏನಿರಬಹುದು ನಟಿಯ ಕೂದಲಿನ ರಹಸ್ಯ?

ದಿ ರಣವೀರ್ ಶೋ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡ ನಟಿ, ತನ್ನ ಸೊಗಸಾದ ಮತ್ತು ಉದ್ದನೆಯ ಕೂದಲಿನ ರಹಸ್ಯ ಎಳ್ಳೆಣ್ಣೆ ಎಂದು ರಹಸ್ಯ ಬಯಲಿಗೆಳೆದಿದ್ದಾರೆ. ದುಬಾರಿ ಸಿರಮ್​ಗಳಿಂದ ತುಂಬಿರುವ ಜಗತ್ತಿನಲ್ಲಿ ಈ ಪ್ರಾಚೀನ ಪದಾರ್ಥದ ಮೇಲೆ ಅವಲಂಬಿತನಾಗಿದ್ದೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನಿರೂಪಕರು ನಿಮ್ಮ ಆರೋಗ್ಯಕರ ಕೂದಲನ್ನು ಹೇಗೆ ಕಾಪಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದಾಗ ಶ್ರುತಿ ಪ್ರತಿಕ್ರಿಯಿಸಿದ್ದು, ಇದು ನನ್ನ ನೈಸರ್ಗಿಕ ಕೂದಲಿನ ಬಣ್ಣ. ಮತ್ತು ನಾನು ಎಣ್ಣೆಯನ್ನು ಬಳಸುತ್ತೇನೆ ಅದು ಎಳ್ಳೆಣ್ಣೆಯನ್ನು ಮಾತ್ರ ಎಂದಿದ್ದಾರೆ. ನನ್ನ ಮನಸ್ಥಿತಿಗೆ ಅನುಗುಣವಾಗಿ ತೆಂಗಿನಕಾಯಿಯೊಂದಿಗೆ ಎಳ್ಳು ಅಥವಾ ಬಾದಾಮಿಯನ್ನು ಬೆರೆಸುತ್ತೇನೆ. ಆದರೆ ಎಳ್ಳು ನನ್ನ ಕೂದಲಿಗೆ ಅದ್ಭುತಗಳನ್ನು ಮಾಡಿದೆ ಎಂದು ಹಂಚಿಕೊಂಡಿದ್ದಾರೆ.

ಶ್ರುತಿ ಕೂದಲಿಗೆ ಎಣ್ಣೆಯನ್ನು ಹಚ್ಚುವ ದಿನಚರಿಯನ್ನು ಹಂಚಿಕೊಂಡಿದ್ದಾರೆ. ಅವರು ಪ್ರತಿ ಬಾರಿ ತಲೆ ತೊಳೆಯುವ ಮುನ್ನ ನಾನು ಅದನ್ನು ಬಳಸುತ್ತೇನೆ ಎಂದು ಹೇಳಿದರು. ನಾನು ಪ್ರತಿದಿನ ನನ್ನ ಕೂದಲನ್ನು ತೊಳೆಯುವುದಿಲ್ಲ. ಯಾರೂ ಕೂಡ ಹಾಗೆ ಮಾಡಬಾರದು. ಹಾಗಾಗಿ ನಾನು ಶೂಟಿಂಗ್‌ಗೆ ಹೋಗುವ ಹಿಂದಿನ ರಾತ್ರಿ ತಲೆಗೆ ಎಣ್ಣೆ ಹಚ್ಚುತ್ತೇನೆ, ಮಲಗುತ್ತೇನೆ, ಎದ್ದು ತಲೆ ತೊಳೆಯುತ್ತೇನೆ ಎಂದು ಹೇಳಿದರು.

ವಿಜ್ಞಾನದ ಪ್ರಕಾರ ಕೂದಲಿನ ಆರೈಕೆಗೆ ಎಳ್ಳೆಣ್ಣೆ ಹೇಗೆ ಮುಖ್ಯ?

ಎಳ್ಳೆಣ್ಣೆ ಸುಂದರವಾದ ಕೂದಲಿಗೆ ಮನೆಮದ್ದು ಎಂದು ಸಾಬೀತಾಗಿದೆ. ಇದರಲ್ಲಿ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳಿದ್ದು ಇದು ಕೂದಲಿನ ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಒಣ ಕೂದಲು ಮತ್ತು ನೆತ್ತಿಯನ್ನು ಎದುರಿಸಲು, ನೆತ್ತಿಯ ಆರೋಗ್ಯವನ್ನು ಸುಧಾರಿಸಲು, ತಲೆಹೊಟ್ಟು ಕಡಿಮೆ ಮಾಡಿ ಹೊಳೆಯುವ ಕೂದಲನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net