ನ್ಯೂಸ್

ಅಭಿಮಾನಿಯೊಂದಿಗಿನ ವಿಚಿತ್ರ ಪರಿಸ್ಥಿತಿ ನಿಭಾಯಿಸಿದ ನಟಿ; ಕಾಜೋಲ್ ತಾಳ್ಮೆಗೆ ಫ್ಯಾನ್ಸ್​​ ಬಹುಪರಾಕ್​ | Kajol

ಮುಂಬೈ: ಅಭಿಮಾನಿಯೊಬ್ಬರು ನಟಿ ಕಾಜೋಲ್(Kajol) ಅವರನ್ನು ಭೇಟಿಯಾದಾಗ ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಮುಂಬೈನ ಬಾಂದ್ರಾ ಪ್ರದೇಶದ ಸಲೂನ್‌ನಿಂದ ನಟಿ ಹೊರಬರುತ್ತಿದ್ದಾಗ ವೃದ್ಧ ಅಭಿಮಾನಿಯೊಬ್ಬರು ಅವರ ಬಳಿಗೆ ಹೋದರು. ಕಾಜೋಲ್​ ಅವರಿಂದ ಆಟೋಗ್ರಾಫ್‌ ಪಡೆಯಲು ನೋಟ್‌ಬುಕ್ ಕೊಟ್ಟರು. ಆದರೆ ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿವಾಗ ಸಣ್ಣ ಎಡವಟ್ಟಾಗಿದೆ.

ಆ ವೃದ್ಧ ಅಭಿಮಾನಿ ತನ್ನ ಮೊಬೈಲ್​ ಕ್ಯಾಮೆರಾದಲ್ಲಿ ಕಾಜೋಲ್​​ ಜತೆ ಸೆಲ್ಫಿ ತೆಗೆಯಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ನಟಿಯ ಕಾಲಿನ ಮೇಲೆ ಕಾಲಿಟ್ಟಿದ್ದಾರೆ. ಕಾಜೋಲ್ ಹಿಂದೆ ಸರಿದಾಗ ಅಭಿಮಾನಿಗೆ ತನ್ನ ತಪ್ಪಿನ ಅರಿವಾದಾಗಿ ನಾಲಿಗೆ ಹೊರಚಾಚುವುದನ್ನು ನೋಡಬಹುದು. ಮತ್ತೊಮ್ಮೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಕಾಜೋಲ್ ಬೇಸರಗೊಳ್ಳದೆ ಅವರಿಗೆ ಆಟೋಗ್ರಾಫ್​ ನೀಡಿ ಸೆಲ್ಫಿ ನೀಡಲು ಸ್ಮೈಲ್​ ಮಾಡಿದ್ದಾರೆ.

ಈ ವಿಡಿಯೋ ನೋಡಿ ಅಭಿಮಾನಿಗಳು ಕಾಜೋಲ್​ ತಾಳ್ಮೆಯನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಬಹಳ ಗೌರವದಿಂದ ನಿಭಾಯಿಸಿದರು, ಅವರು ಈ ರೀತಿ ವರ್ತಿಸುವುದು ತುಂಬಾ ಮುದ್ದಾಗಿದೆ, ಅಭಿಮಾನಿಗಳು ಕೂಡ ಸ್ವಲ್ಪ ಕಾಳಜಿ ವಹಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಕಾಜೋಲ್ ಹಾರರ್ ಚಿತ್ರ 'ಮಾ'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಜೋಲ್ ಅಭಿನಯದ ಹಾರರ್ ಸಿನಿಮಾ ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾಜೋಲ್ ಜತೆ ರೋನಿತ್ ರಾಯ್, ಇಂದ್ರಾನಿಲ್ ಸೇನ್‌ಗುಪ್ತಾ ಮತ್ತು ಖೇರಿನ್ ಶರ್ಮಾ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ.(ಏಜೆನ್ಸೀಸ್​​)