ಮಸ್ಸೂರಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ಮಸ್ಸೂರಿಯಲ್ಲಿ ವಿವಾಹವಾದರು. ನಿನ್ನೆಯಷ್ಟೇ ಎಂಎಸ್ ಧೋನಿ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಇದರಿಂದ ಮಹಿ ಪಂತ್ ಅವರ ಸಹೋದರಿಯ ಮದುವೆಗೆ ಆಗಮಿಸಿದ್ದಾರೆ ಎಂದು ಊಹಿಸಲಾಗಿತ್ತು. ಈಗ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.(MS Dhoni-Suresh Raina Dance)
ಇದನ್ನು ಓದಿ: ಸಿನಿಮಾಗಳಲ್ಲಿ ಇಂಟಿಮೇಟ್ ದೃಶ್ಯಗಳಿಂದ ದೂರವಿರಲು ಇದೇ ಕಾರಣ; ಕರೀನಾ ಕಪೂರ್ ಬಹಿರಂಗಪಡಿಸಿದ್ದೇನು? | Kareena Kapoor
ವೈರಲ್ ವಿಡಿಯೋದಲ್ಲಿ ಎಂಎಸ್ ಧೋನಿ ಜತೆ ಭಾರತದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಕೂಡ ಕಾಣಿಸಿಕೊಂಡಿದ್ದಾರೆ. ಇಬ್ಬರೂ ರಿಷಭ್ ಪಂತ್ ಜತೆಗೆ ‘ದಮದುಮ್ ಮಸ್ತ್ ಕಲಂದರ್’ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋ ರಿಷಭ್ ಪಂತ್ ಅವರ ಸಹೋದರಿಯ ಸಂಗೀತ ಸಮಾರಂಭದ್ದಾಗಿರಬಹುದು ಎಂದು ನಂಬಲಾಗಿದೆ. ಎಂಎಸ್ ಧೋನಿ, ಸುರೇಶ್ ರೈನಾ ಮಾತ್ರವಲ್ಲದೆ ನಿತೀಶ್ ರಾಣಾ ಕೂಡ ಕಾಣಿಸಿಕೊಂಡರು.
Rishabh Pant, MS Dhoni and Suresh Raina dancing at Rishabh Pant’s sister’s sangeet ceremony 🕺🏻❤️ pic.twitter.com/pw232528w8
— Sandy (@flamboypant) March 11, 2025
ಸ್ಟಾರ್ ಆಟಗಾರ ರಿಷಭ್ ಪಂತ್ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಆದರೆ ಅವರಿಗೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಫೈನಲ್‌ನಲ್ಲಿ ರೋಹಿತ್ ಪಡೆ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ಭಾರತ ತಂಡ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿದೆ. 12 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಐಸಿಸಿ ಏಕದಿನ ಟೂರ್ನಿಯಲ್ಲಿ ಗೆಲುವು ಸಾಧಿಸಿದೆ.(ಏಜೆನ್ಸೀಸ್)