ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಕೋವಿಡ್ ಕಾಲದಲ್ಲಿ ನಡೆಸಲಾಗುವ ಚುನಾವಣೆಗೆ ಸಂಬಂಧಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಪ್ರಕಟಿಸಲಾಗಿದೆ.
ಬಿಹಾರದ ಜತೆಗೆ, ಇತರ ರಾಜ್ಯಗಳಲ್ಲಿ ಚುನಾವಣೆ ಹಾಗೂ ಉಪಚುನಾವಣೆಗಳಿಗೂ ಸಹಜವಾಗಿಯೇ ಇದು ಅನ್ವಯಿಸಲಿದೆ. ರಾಜ್ಯದಲ್ಲಿ ಗ್ರಾಪಂ ಚುನಾವಣೆಗೆ ಮೀಸಲಾತಿ ಪ್ರಕಟಿಸಲಾಗಿದ್ದು, ಈ ಚುನಾವಣೆಗೂ ಇದೇ ಮಾರ್ಗಸೂಚಿ ಅನ್ವಯವಾಗುವ ಸಾಧ್ಯತೆಗಳಿವೆ.
ಮನೆಗಳಿಗೆ ತೆರಳಿ ಪ್ರಚಾರ ಮಾಡಲು ಕೇವಲ ಐದು ಜನರಷ್ಟೇ ತೆರಳಬೇಕು. ರೋಡ್ಶೋಗಳಲ್ಲಿ ಐದು ವಾಹನಗಳಷ್ಟೇ ಇರತಕ್ಕದ್ದು ಎಂದು ನಿರ್ಬಂಧ ವಿಧಿಸಿದೆ. ಕರೊನಾ ಸಂಕಷ್ಟದ ನಡುವೆ ಚುನಾವಣೆ ನಡೆಯಲಿರುವ ಮೊದಲ ರಾಜ್ಯ ಬಿಹಾರ ಆಗಿರಲಿದೆ. ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಅದಕ್ಕಾಗಿ ಬಿಡುಗಡೆಗೊಳಿಸಿರುವ ಮಾರ್ಗಸೂಚಿಗಳು ಹೀಗಿವೆ.
ಇದನ್ನೂ ಓದಿ; ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್ಕಾಂಗ್, ಅಮೆರಿಕ, ಬ್ರಿಟನ್ನಲ್ಲಿವೆ ಹತ್ತಾರು ಕಂಪನಿ…!
ಚುನಾವಣೆ ನಡೆಸುವ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು, ಮುಖಂಡರು, ತಜ್ಞರಿಂದ ಆಯೋಗ ಸಲಹೆ- ಸೂಚನೆಗಳನ್ನು ಆಹ್ವಾನಿಸಿತ್ತು. ಅವುಗಳನ್ನೆಲ್ಲ ಕ್ರೋಢೀಕರಿಸಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.