health tips: ಪ್ರತಿಯೊಬ್ಬ ಮನುಷ್ಯನು ಆರೋಗ್ಯವಾಗಿರಲು ಸ್ನಾಯು ಬಲ ಅಧಿಕವಾಗಿ ಬೇಕಾಗಿರುತ್ತದೆ. ಆದರಿಂದ ಸ್ನಾಯು ಬಲವನ್ನು ಹೆಚ್ಚಿಸಲು ಸರಿಯಾದ ಆಹಾರ ಸೇವನೆ, ವ್ಯಾಯಾಮ ಮತ್ತು ಸಂಯೋಜನೆಯಿಂದ ಸ್ನಾಯುಗಳ ಶಕ್ತಿ, ಸಹಿಷ್ಣುತೆ ಮತ್ತು ಬೆಳವಣಿಗೆಯನ್ನು ಸುಧಾರಿಸಬಹುದು. ಹಾಗಾಗಿ ಈ ಕೆಳಗಿನ ಆಹಾರಗಳನ್ನು ಸೇವಿಸುವುದರಿಂದ ಸ್ನಾಯು ಬಲವನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ಪ್ರೋಟೀನ್ ಸಮೃದ್ಧವಾಗಿರುವಂತ ಆಹಾರಗಳಾದ ಮೊಟ್ಟೆ, ಕೋಳಿಮಾಂಸ, ಮೀನು, ತೊಗರಿ ಬೀಜ, ಕಡಲೆಕಾಳು ಬೀನ್ಸ್, ಕ್ಯಾರೇಟ್, ಬೀಟ್ರೂಟ್ಗಳನ್ನು ಸೇವಿಸುವುದರಿಂದ ಸ್ನಾಯು ಬಲಗೊಳ್ಳಲು ಸಹಾಯುವಾಗುತ್ತದೆ. ಹಾಗೆಯೇ ಈ ಪದಾರ್ಥಗಳು ಸಂಪೂರ್ಣ ಪ್ರೊಟೀನ್ ಅಮೈನೋ ಆಮ್ಮಗಳನ್ನು ಒದಗಿಸುತ್ತದೆ. ಹಾಗೇಯೇ ಮೀನುಗಳಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒದಗಿಸುತ್ತವೆ. ಇವು ಸ್ನಾಯು ಊತವನ್ನು ಕಡಿಮೆ ಮಾಡುತ್ತದೆ. ಕಾಳುಗಳಲ್ಲಿರುವ ಪ್ರೊಟೀನ್ಗಳು ಸ್ನಾಯುಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಾರ್ಬೋಹೈಡ್ರೇಟ್ ಆಹಾರಗಳಾದ ಓಟ್ಸ್, ಸಿಹಿಗೆಣಸು, ಬಾಳೆಹಣ್ಣು, ಬಾದಾಮಿ, ವಾಲ್ನಟ್ಗಳನ್ನು ಸೇವಿಸುವುದರಿಂದ ಕಾರ್ಬೋಹೈಡ್ರೇಟ್ಗಳು, ಫೈಬರ್, ವಿಟಮಿನ್, ಹಸಿರು ತರಕಾರಿಗಳು, ಪೊಟ್ಯಾಸಿಯಂನಂತಹ ಖನಿಜಗಳನ್ನು ದೇಹಕ್ಕೆ ಒದಗಿಸುತ್ತದೆ. ಹಾಗೆಯೇ ಇವು ಸ್ನಾಯು ದುರಸ್ತಿಗೆ ಬೇಕಾದ ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಇವುದಳು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ನಂತಹ ಪದಾರ್ಥಗಳನ್ನು ದೇಹಕ್ಕೆ ಒದಗಿಸಿ ಸ್ನಾಯು ಬಲವಾಗಿಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬಾಲಕ ಸೇರಿ ಇಬ್ಬರ ಸಾವು
ಸ್ನಾಯು ಬಲಕ್ಕಾಗಿ 30 ನಿಮಿಷಗಳ ವ್ಯಾಯಾಮ, ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯುವುದು, 7-8 ಗಂಟೆ ನಿದ್ರೆ ಮಾಡುವುದು, ಅಧಿಕ ಒತ್ತಡದಿಂದ ದೂರಾಗಲು ಧ್ಯಾನ, ಯೋಗಗಳನ್ನು ಮಾಡುವುದರಿಂದ ಸ್ನಾಯುಬಲವನ್ನು ಪಡೆಯಬಹುದು.
ಎಚ್ಚರಿಕೆ
* ಆಹಾರ ಸೇವನೆಯನ್ನು ವೈಯಕ್ತಿಕ ಆರೋಗ್ಯ ಸ್ಥಿತಿಗೆ ತಕ್ಕಂತೆ ಮಾಡಬೇಕು. ಅಗತ್ಯವಿದ್ದರೆ ವೈದ್ಯರನ್ನು ಒಮ್ಮೆ ಭೇಟಿ ಮಡಿ ಸೇವಿಸಿ.
* ಅತಿಯಾದ ವ್ಯಾಯಾಮವನ್ನು ತಪ್ಪಿಸಿ, ಏಕೆಂದರೆ ಇದು ಸ್ನಾಯು ಗಾಯಕ್ಕೆ ಕಾರಣವಾಗಬಹುದು.
* ಆಹಾರಗಳು ಮತ್ತು ಸಲಹೆಗಳನ್ನು ಅನುಸರಿಸುವುದರಿಂದ ಸ್ನಾಯುಗಳ ಬಲ, ಆರೋಗ್ಯ ಮತ್ತು ಸಹಿಷ್ಣುತೆಯನ್ನು ಸುಧಾರಿಸಬಹುದು. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ