ಕಾಸರಗೋಡು: ಜಿಲ್ಲೆಯ ಕಾಞಂಗಾಡು ಕಲ್ಲೂರಾವಿಯಲ್ಲಿ ಡಿವೈಎಫ್ಐ ಕಾರ್ಯಕರ್ತನನ್ನು ಬುಧವಾರ ತಡರಾತ್ರಿ ತಂಡವೊಂದು ಹತ್ಯೆಗೈದಿದೆ.
ಹಳೇಕಡಪ್ಪುರ ಮಸೀದಿ ಸಮೀಪದ ನಿವಾಸಿ ಕುಞಬ್ದುಲ್ಲ ದಾರಿಮಿ ಅವರ ಪುತ್ರ ಅಬ್ದುಲ್ ರಹಮಾನ್(28) ಯಾನೆ ಔಫ್ ಅಬ್ದುಲ್ ರಹಮಾನ್ ಮೃತ. ಇವರ ಸ್ನೇಹಿತ ಸುಹೈಬ್ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅಬ್ದುಲ್ ರಹಮಾನ್ ತನ್ನ ಸ್ನೇಹಿತರ ಜತೆ ಬೈಕ್ಗಳಲ್ಲಿ ತೆರಳುತ್ತಿದ್ದಾಗ ಕಲ್ಲೂರಾವಿ ಮುಂಡತ್ತೋಡ್ ಬಳಿ ಘಟನೆ ನಡೆದಿದೆ. ಎದೆಗೆ ಇರಿತದ ಗಾಯಗೊಂಡಿದ್ದ ಅಬ್ದುಲ್ ರಹಮಾನ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಯುವಕನ ಹತ್ಯೆ ಖಂಡಿಸಿ ಗುರುವಾರ ಕಾಞಂಗಾಡು ನಗರ ವ್ಯಾಪ್ತಿಯಲ್ಲಿ ಹರತಾಳ ಆಚರಿಸಲಾಯಿತು.