ಕಣ್ಣೂರು: ಕುಡಿದ ಮತ್ತಿನಲ್ಲಿ ರಸ್ತೆ ಅಂದುಕೊಂಡು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ವ್ಯಕ್ತಿಯನ್ನು ಕಣ್ಣೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಈತ ಕೇರಳದ ಅಂಚರಕಂಡಿ ಮೂಲದ ನಿವಾಸಿ. ಥಾಜೆ ಛೋವಾ ರೈಲ್ವೆ ಗೇಟ್ ಬಳಿ ಸುಮಾರು 15 ಮೀಟರ್ ದೂರ ಹಳಿ ಮೇಲೆಯೇ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರು, ಹಳಿಗಳ ನಡುವೆ ಸಿಲುಕಿದ ಪರಿಣಾಮ ಸ್ಥಳದಲ್ಲಿಯೇ ಆಫ್ ಆಯಿತು.
ರೈಲ್ವೆ ಗೇಟ್ ಕೀಪರ್ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಳಿಗಳ ನಡುವೆ ಸಿಲುಕಿದ್ದ ಕಾರನ್ನು ತೆಗೆದು, ಚಾಲಕ ಜಯಪ್ರಕಾಶ್ನನ್ನು ಸ್ಥಳದಲ್ಲಿಯೇ ಬಂಧಿಸಿ, ಠಾಣೆಗೆ ಕರೆದೊಯ್ದರು.
ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಯಪ್ರಕಾಶ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ, ಆತನ ಕಾರನ್ನು ಬಿಡುಗಡೆ ಮಾಡದೇ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. (ಏಜೆನ್ಸೀಸ್)