ನ್ಯೂಸ್

500 ಕೋಟಿ ರೂ. ಮೌಲ್ಯದ ಮಾದಕ ವಸ್ತು, ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡ ಡಿಆರ್​ಐ!

ಮಹಾರಾಷ್ಟ್ರ: ಮಹಾರಾಷ್ಟ್ರದ ಸಂಭಾಜಿ ನಗರ (ಔರಂಗಾಬಾದ್) ಜಿಲ್ಲೆಯಿಂದ ಅಹಮದಾಬಾದ್ ಕ್ರೈಂ ಬ್ರಾಂಚ್ ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಭಾನುವಾರ 200 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಮತ್ತು 300 ರೂ. ಮೌಲ್ಯದ ಡ್ರಗ್ಸ್ ತಯಾರಿಕೆಗೆ ಬಳಸಿದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡಿದೆ.

ವಶಪಡಿಸಿಕೊಂಡ ಮಾದಕ ವಸ್ತುಗಳಲ್ಲಿ ಕೊಕೇನ್, ಕೆಟಮೈನ್ ಮತ್ತು ಎಂಡಿಎಂಎ ಸೇರಿವೆ. ಕಾರ್ಯಾಚರಣೆಯಲ್ಲಿ ಏಜೆನ್ಸಿಗಳು ಸದ್ಯ ಮೂವರನ್ನು ಈಗಾಗಲೇ ಬಂಧನಕ್ಕೆ ಒಳಪಡಿಸಿದೆ. ಅಹಮದಾಬಾದ್ ಕ್ರೈಂ ಬ್ರಾಂಚ್‌ನ ಅಧಿಕಾರಿಯೊಬ್ಬರು ಮತ್ತೊಂದು ಮಾದಕ ದ್ರವ್ಯ ಪ್ರಕರಣದ ತನಿಖೆ ನಡೆಸುತ್ತಿರುವಾಗ ಸಂಭಾಜಿ ನಗರದ ಮೂರು ಕಾರ್ಖಾನೆಗಳಲ್ಲಿ ಡ್ರಗ್ಸ್ ತಯಾರಿಸಲಾಗಿದೆ ಎಂಬ ಮಾಹಿತಿಯನ್ನು ತಿಳಿದ ಬೆನ್ನಲ್ಲೇ ಏಜೆನ್ಸಿಗಳ ಕ್ರಮವು ಹೊರಬಿದ್ದಿದೆ.

ಮಾಹಿತಿ ಪಡೆದ ಅಹಮದಾಬಾದ್ ಕ್ರೈಂ ಬ್ರಾಂಚ್ ಮತ್ತು ಡಿಆರ್‌ಐ ಜಂಟಿ ತಂಡ ಸಂಭಾಜಿ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ಮೇಲೆ ಏಕಾಏಕಿ ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದೆ. ಅಹಮದ್‌ಬಾದ್ ಅಪರಾಧ ವಿಭಾಗದ ತಂಡವು ಈ ಮಾದಕ ದ್ರವ್ಯಗಳನ್ನು ಎಲ್ಲಿಗೆ ಸರಬರಾಜು ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆಯನ್ನು ಚುರುಕುಗೊಳಿಸಿದೆ,(ಏಜೆನ್ಸೀಸ್).