More

    BBKS10: ‘ಉತ್ತರನ ಪೌರುಷ ಒಲೆಯ ಮುಂದೆ’; ಯಾವ ಗಾದೆ ಯಾರಿಗೆ ಸಲ್ಲುತ್ತೆ ನೀವೇ ಹೇಳಿ!

    ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಹತ್ತನೇ ಸೀಸನ್‌ನ ವಾರಾಂತ್ಯದ ಎರಡನೇ ಪಂಚಾಯಿತಿ ಕಟ್ಟೆಯನ್ನು ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದು, ಸರ್ಧಿಗಳು ಮಾಡಿದ ತಪ್ಪನ್ನು ಸರಳವಾಗಿ ಅರ್ಥೈಸಿ, ಬುದ್ದಿ ಹೇಳಿದರು. ತಮ್ಮ ಖಡಕ್ ಮಾತಲ್ಲೇ ಅವರವರ ತಪ್ಪುಗಳನ್ನು ತಿಳಿ ಹೇಳಿ ಅವರವರ ಭಾವಕ್ಕೆ ಬಿಟ್ಟ ಸುದೀಪ್​, ತುಕಾಲಿ ಸಂತೋಷ್​ ಮಾಡಿದ ಎಡವಟ್ಟನ್ನು ಮೆಲುಕು ಹಾಕಿ ಮನೆಯವರನ್ನು ನಗೆಗಡಲಲ್ಲಿ ತೇಲಿಸಿದರು. ಆದ್ರೆ, ಇಂದು ‘ಸೂಪರ್​ ಸಂಡೆ ವಿತ್​ ಕಿಚ್ಚ ಸುದೀಪ್’ ಸಂಚಿಕೆಯಲ್ಲಿ ಸದಸ್ಯರ ನಡುವೆ ಮಾತಿನ ಕಿಚ್ಚು ಬುಗಿಲೆದ್ದಿದೆ.

    ಇದನ್ನೂ ಓದಿ: ಬಿಜೆಪಿ ಜತೆಗಿನ ಮೈತ್ರಿ ಮರುಪರಿಶೀಲನೆ ಮಾಡಿ; ದೇವೇಗೌಡರಿಗೆ ಇಬ್ರಾಹಿಂ ಮನವಿ

    ಇಂದು ಭಾನುವಾರಕ್ಕೆ ಕಾಲಿಟ್ಟಿ ಸ್ಪರ್ಧಿಗಳಿಗೆ ಸೂಪರ್​ ಸಂಡೆ ವಿಥ್​ ವಿತ್​ ಕಿಚ್ಚ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್​ ಅವರೊಡನೆ ಮತ್ತೊಮ್ಮೆ ಮಾತನಾಡುವ ಅವಕಾಶ ದೊರೆತಿದ್ದು, ಸ್ಪರ್ಧಿಗಳು ಎಂದಿನಂತೆ ವೀಕೆಂಡ್​ನಲ್ಲಿ ಸುದೀಪ್​ ಮುಂದೆ ಹಾಜರಾಗುವ ಸಲುವಾಗಿ ಭರ್ಜರಿಯಾಗಿ ಕಂಗೊಳಿಸಿದ್ದಾರೆ. ಅದೇ ರೀತಿ ರೆಡಿಯಾಗಿ ಕುಳಿತ್ತಿದ್ದ ಮನೆ ಮಂದಿಗೆ ಸುದೀಪ್​ ಒಂದು ಚಿಕ್ಕ ಕೆಲಸ ಕೊಟ್ಟಿದ್ದು, ಇಲ್ಲಿರುವ ಗಾದೆ ಮಾತುಗಳು ಯಾರಿಗೆ? ಯಾಕೆ ಅನ್ವಯಿಸುತ್ತದೆ ಎಂದು ಬಹಿರಂಗವಾಗಿ ತಿಳಿಸಿ ಎಂದು ಹೇಳಿದರು.

    ‘ಉತ್ತರನ ಪೌರಷ ಒಲೆಯ ಮುಂದೆ’, ‘ಬೆಳ್ಳಗಿರುವುದೆಲ್ಲಾ ಹಾಲಲ್ಲ’, ‘ಮೂರು ಬಿಟ್ಟೋರು ಊರಿಗೆ ದೊಡ್ಡೋರು’, ‘ಆರಕ್ಕೇರಲ್ಲ ಮೂರಕ್ಕಿಳಿಯಲ್ಲ’, ‘ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ’, ‘ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು’, ‘ಕಳ್ಳನಿಗೊಂದು ಪಿಳ್ಳೆ ನೆಪ’ ಎಂಬ ಹಲವು ಗಾದೆಗಳ ಬೋರ್ಡ್​ ಕೊಟ್ಟ ಸುದೀಪ್​, ಇದು ಯಾರಿಗೆ ಅನ್ವಯಿಸುತ್ತದೆ ಎಂದು ನೇರವಾಗಿ ಹೇಳಿ ಎಂದು ತಿಳಿಸಿದರು.

    ಇದನ್ನೂ ಓದಿ: ಕಾಂಗ್ರೆಸ್‌ಗೆ ಸಂಬಂಧವಿಲ್ಲ, 42 ಕೋಟಿ ರೂ. ವಶ ಪ್ರಕರಣಕ್ಕೆ ಚೆಲುವರಾಯಸ್ವಾಮಿ ಪ್ರತಿಕ್ರಿಯೆ

    ಆಯಾ ಸ್ಪರ್ಧಿಗಳು ಕೊಟ್ಟ ಗಾದೆಗಳನ್ನು ಮನೆಯ ಇತರೆ ಸದಸ್ಯರ ಕೊರಳಿಗೆ ಹಾಕಿ ತಮ್ಮ ಕಾರಣಗಳನ್ನು ನೀಡಿದ್ದಾರೆ. ಕೆಲವರು ಇದನ್ನು ಸ್ವೀಕರಿಸಿದರೆ, ಇನ್ನೂ ಕೆಲವರು ಇದನ್ನು ವಿರೋಧಿಸಿ, ಮಾತಿನ ಜಟಾಪಟಿ ಆರಂಭಿಸಿದ್ದಾರೆ. ಇದರಿಂದ ಸದಸ್ಯರ ನಡುವೆ ಕೊಂಚ ವಾಗ್ವಾದ ನಡೆದಿದ್ದು, ಹೇಳಿಕೆಗಳ ಸಮರ್ಥನೆ ತಾಪನಕ್ಕೇರಿದೆ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಅನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

    ‘ದಿ ಗರ್ಲ್‌ಫ್ರೆಂಡ್’ ಆಗಿ ರಶ್ಮಿಕಾ ಮಂದಣ್ಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts