Doomsday Fish: ಹಾವಿನಂತೆ ಕಾಣಿಸುವ ಅಪರೂಪದಲ್ಲೇ ಬಲು ಅಪರೂಪದ ದೇವರ ಮೀನು ಇದೀಗ ತಮಿಳುನಾಡಿನ ಮೀನುಗಾರರ ಬಲೆಗೆ ಸಿಕ್ಕಿರುವುದು ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಇದನ್ನೂ ಓದಿ: ಆತನ ಬಗ್ಗೆ ಎಚ್ಚರದಿಂದಿರಿ ಇಲ್ಲದಿದ್ರೆ ಇಂದು ಕೂಡ ಒನ್ ಸೈಡ್ ಪಂದ್ಯ ಆಗಬಹುದು! ಪಂಜಾಬ್ಗೆ ಯುವಿ ತಂದೆ ಎಚ್ಚರಿಕೆ! IPL 2025
ಸಾಮಾನ್ಯವಾಗಿ ಈ ಮೀನು ಕಾಣಿಸಿಕೊಳ್ಳುವುದು ತುಂಬಾ ವಿರಳ. ಕಾಣಿಸಿಕೊಂಡರೆ ಜಗತ್ತಿಗೆ ಏನೋ ಗಂಡಾಂತರ ಕಾದಿದೆ ಅನ್ನೋ ಮುನ್ಸೂಚನೆಯಂತೆ. ಈ ಕಾರಣಕ್ಕೆ ಇದನ್ನು ಡೂಮ್ಸ್ಡೇ (ಪ್ರಳಯ ದಿನ) ಮೀನು ಎಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸಲಿಗೆ 30 ಅಡಿ ಉದ್ದದ ದೇವರ ಮೀನನ್ನು ಸೆರೆಹಿಡಿದ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದು, ಇದು ಪ್ರಕೃತಿ ವಿಕೋಪದ ಮುನ್ಸೂಚನೆ ಎಂಬ ಮಾತನ್ನು ಇಂದಿಗೂ ಬಲವಾಗಿ ನಂಬಿದ್ದಾರೆ.
ಈ ಮೀನು ಸಿಕ್ಕಿತು ಎಂದರೆ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಪ್ರಳಯ, ಭೂಕಂಪನ, ಪ್ರವಾಹ ಅಥವಾ ಪ್ರಕೃತಿ ವಿಕೋಪ ಸಂಭವಿಸುತ್ತದೆ ಎಂಬ ಸೂಚನೆ ಎಂದು ಆಳವಾಗಿ ನಂಬಲಾಗಿದೆ. ಸ್ಥಳೀಯರು ಇದನ್ನು ದೇವರು ಮೀನಿನ ರೂಪದಲ್ಲಿ ನಮಗೆ ಎಚ್ಚರಿಸುತ್ತಾನೆ ಎಂದು ಇಂದಿಗೂ ನಂಬಿದ್ದಾರೆ. ಈ ಘಟನೆ ಮೇ.30ರಂದು ನಡೆದಿದ್ದು, ದೃಶ್ಯಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.
ಇದನ್ನೂ ಓದಿ: ಕಮಲ್ ಹಾಸನ್ಗೆ ಭಾರೀ ಮುಖಭಂಗ; ಜೂನ್.10 ರವರೆಗೂ ಕರುನಾಡಿನಲಿಲ್ಲ ‘ಥಗ್ ಲೈಫ್’ ರಿಲೀಸ್ | Kamal Haasan
ಈ ಓರ್ಫಿಶ್ ಉದ್ದವಾದ ಈಲ್ ತರಹದ ದೇಹವನ್ನು ಹೊಂದಿದೆ. ಸಾಮಾನ್ಯವಾಗಿ ಇದು ಸಮುದ್ರದ ಕೆಳಭಾಗದಲ್ಲಿ ವಾಸಿಸುತ್ತದೆ. ಮೇಲ್ಮೈಯಿಂದ ಸುಮಾರು 700 ರಿಂದ 3,280 ಅಡಿ ಕೆಳಗೆ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಈ ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಆದಾಗ ಮಾತ್ರ ಹೊರಗಡೆ ಬರುತ್ತವೆ ಹೊರತು, ಇದು ಸನ್ನಿಹಿತವಾಗುತ್ತಿರುವ ವಿಪತ್ತಿನ ಸಂಕೇತವಲ್ಲ. ಇದೊಂದು ಮೂಢನಂಬಿಕೆ ಅಷ್ಟೇ ಎಂದು ಸಂಶೋಧಕರು ಹೇಳಿದ್ದಾರೆ,(ಏಜೆನ್ಸೀಸ್).