ನ್ಯೂಸ್

ನನ್ನ ಮುಟ್ಟಲು ಅಲ್ಲ.. ನಮ್ಮ ಮನೆಯ ಇಟ್ಟಿಗೆಯನ್ನು ಸಹ ಅಲುಗಾಡಿಸಲು ಸಾಧ್ಯವಿಲ್ಲ: ನಟ ಧನುಷ್ ಎಚ್ಚರಿಕೆ ನೀಡಿದ್ದು ಯಾರಿಗೆ? | Dhanush

Dhanush: ಚೈನ್ನೈನಲ್ಲಿ ಜೂ.1ರಂದು ನಡೆದ ಕಾಲಿವುಡ್​ ಸ್ಟಾರ್​ ಧನುಷ್​ ನಟನೆಯ 'ಕುಬೇರ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಾತನಾಡಿದ ಧನುಷ್​​, ಈ ವೇಳೆ ಕೊಂಚ ಭಾವುಕರಾದ್ರೂ ತಮ್ಮ ವಿರೋಧಿಗಳಿಗೆ ಖಡಖ್​​ ಎಚ್ಚರಿಕೆ ನೀಡಿದರು. ಈ ಕುರಿತು ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾದಲ್ಲಿ ವೈರಲ್​ ಆಗಿದೆ.

ಕುಬೇರ ಚಿತ್ರ ಜೂ.20ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ, ಚಿತ್ರತಂಡ ಇದೀಗ ಚಿತ್ರದ ಪ್ರಚಾರ ಆರಂಭಿಸಿದೆ. ಸಿನಿಮಾ ತಯಾರಕರು ಜೂ.1ರಂದು ಚೈನ್ನೈನಲ್ಲಿ ಬೃಹತ್​ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದ್ದರು. ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ, ದೇವಿ ಶ್ರೀ ಪ್ರಸಾದ್ ಮತ್ತು ಅನಿರುದ್ಧ್ ಮುಂತಾದ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಧನುಷ್​, ಈ ಸಿನಿಮಾ ಬಗ್ಗೆ ಕೆಲವರು ನೆಗೆಟಿವ್ ಸುದ್ದಿ ಹಬ್ಬಿಸುತ್ತಿದ್ದು, ಕೆಲವರು ತಮ್ಮ ಸ್ವಾರ್ಥಕ್ಕಾಗಿ ಚಿತ್ರದ ಬಗ್ಗೆ ನಕಾರಾತ್ಮಕ ಪ್ರಚಾರವನ್ನು ಹರಡುತ್ತಿದ್ದಾರೆ ಎಂದು ಅವರು ಹೇಳಿದರು.

ಧನುಷ್​ ಹೇಳಿದ್ದೇನು..?

''ನನ್ನ ಬಗ್ಗೆ ನೀವು ಎಷ್ಟು ಬೇಕಾದರೂ ವದಂತಿಗಳನ್ನು ಹರಡಿ. ನಿಮಗೆ ಬೇಕಾದ ನಕರಾತ್ಮಕತೆ(Neagitive Comments) ಮಾಡಿಕೊಳ್ಳಿ. ಆದರೆ, ನನ್ನ ಚಿತ್ರ ಬಿಡುಗಡೆಯಾಗುವ ಒಂದೂವರೆ ತಿಂಗಳ ಮೊದಲು, ನಕಾರಾತ್ಮಕ ಅಭಿಯಾನವನ್ನು ಪ್ರಾರಂಭಿಸಿ ಮತ್ತು ಅದನ್ನು ಹರಡಿ. ತಡೆಯುವ ಪ್ರಯತ್ನ ಫಲಿಸಲ್ಲ. ಯಾಕೆಂದರೆ, ಆ ಅದೃಶ್ಯ ಕೈ ಮತ್ತು ಟಾರ್ಚ್ ಆಗಿ ಬದಲಾಗುವ ನನ್ನ ಅಭಿಮಾನಿಗಳು ನನ್ನನ್ನು ಮುನ್ನಡೆಸುತ್ತಾರೆ" ಎಂದಿದ್ದಾರೆ.

''ಇಲ್ಲಿರುವವರೆಲ್ಲರೂ ನನ್ನ ಅಭಿಮಾನಿಗಳು ಮಾತ್ರವಲ್ಲ, 23 ವರ್ಷಗಳ ನನ್ನ ಸ್ನೇಹಿತರು ಜತೆಗೆ ಇದ್ದಾರೆ. ನೀವು ಕೆಲವು ವದಂತಿಗಳನ್ನು ಹರಡಿ ನನ್ನನ್ನು ಕೊನೆಗೊಳಿಸಬಹುದು ಎಂದು ಭಾವಿಸಿದ್ದರೆ, ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ನೀವು ಇಟ್ಟಿಗೆಯನ್ನು ಸಹ ಅಲುಗಾಡಿಸಲು ಸಾಧ್ಯವಿಲ್ಲ. ನಿಮ್ಮ ಆಲೋಚನೆಗಳು ನೀವು ಹೇಗೆ ಬದುಕುತ್ತೀರಿ ಎಂಬುದನ್ನು ನಿರ್ಧರಿಸುತ್ತವೆ" ಎಂದು ಹೇಳಿದರು.(ಏಜೆನ್ಸೀಸ್​​)