ನ್ಯೂಸ್

ನಿಮ್ಮ ಹೆಸರು ಬಿ ಅಕ್ಷರದಿಂದ ಶುರುವಾಗುತ್ತಾ? ಹಾಗಾದರೆ ನಿಮ್ಮಲ್ಲಿ ಖಂಡಿತ ಈ ಗುಣಗಳಿವೆ! Name

Name : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಭವಿಷ್ಯದ ಜೀವನ ಮತ್ತು ವಿಶೇಷ ಗುಣಗಳ ಮೇಲೆ ಅವರ ರಾಶಿಚಕ್ರ ಚಿಹ್ನೆಯು ಪ್ರಭಾವ ಬೀರುವಂತೆಯೇ, ಆ ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಕೂಡ ಅವರ ವ್ಯಕ್ತಿತ್ವದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.

ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವ್ಯಕ್ತಿಯ ಹುಟ್ಟಿದ ಸಮಯ ಮತ್ತು ದಿನವನ್ನು ಗಣನೆಗೆ ತೆಗೆದುಕೊಂಡು ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಸಂಖ್ಯಾಶಾಸ್ತ್ರದ ತತ್ವಗಳ ಪ್ರಕಾರ ಹೆಸರನ್ನು ಇಟ್ಟರೆ, ಆ ವ್ಯಕ್ತಿಯ ಜೀವನವು ಪ್ರಗತಿ ಮತ್ತು ಸಂತೋಷದಿಂದ ತುಂಬಿರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಸಂಖ್ಯಾಶಾಸ್ತ್ರಕ್ಕೆ ವಿರುದ್ಧವಾಗಿ ಹೆಸರಿಟ್ಟರೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿಯೇ ಜಾತಕ ನೋಡಿ ಹೆಸರಿಡಲಾಗುತ್ತದೆ.

ನಾವೀಗ B ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರ ಶಿಕ್ಷಣ, ವೃತ್ತಿ, ಪ್ರೇಮ ಜೀವನ, ವೈವಾಹಿಕ ಜೀವನ ಮತ್ತು ವಿಶೇಷ ವ್ಯಕ್ತಿತ್ವಗಳ ಬಗ್ಗೆ ತಿಳಿದುಕೊಳ್ಳೋಣ.

ಬಿ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ಸ್ವಾಭಾವಿಕವಾಗಿಯೇ ಬಹಳ ಸೂಕ್ಷ್ಮರು ಮತ್ತು ಬಹಳಷ್ಟು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಈ ಜನರಿಗೆ ಭಯ ಅಂದರೆ ಏನು ಎಂಬುದೇ ಗೊತ್ತಿಲ್ಲ. ಕಷ್ಟಕರ ಸಂದರ್ಭಗಳಲ್ಲಿಯೂ ಸಹ ವಿಚಲಿತರಾಗದೆ ಶಾಂತ ಮತ್ತು ತಾಳ್ಮೆಯಿಂದಿರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಬಿ ಹೆಸರಿನವರಿಗೆ ಪ್ರೀತಿಯ ಬಗ್ಗೆ ಹೆಚ್ಚು ಕಾಳಜಿ ಇಲ್ಲದಿರಬಹುದು ಆದರೆ, ಅವರು ತುಂಬಾ ಪ್ರಾಮಾಣಿಕರು ಮತ್ತು ಸತ್ಯವಂತರು. ಶಾಂತಿಯುತ ಮತ್ತು ಸಂತೋಷದ ಕುಟುಂಬ ವಾತಾವರಣ ಮಾತ್ರ ಬಯಸುತ್ತಾರೆ. ಯಾವುದೇ ಕಾರಣಕ್ಕೂ ಜಗಳವಾಡಲು ಬಯಸುವುದಿಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲೂ ಶಾಂತವಾಗಿರಲು ಪ್ರಯತ್ನಿಸುತ್ತಾರೆ.

ಕಷ್ಟದ ಸಮಯಗಳು ಮತ್ತು ಕಠಿಣ ಸಂದರ್ಭಗಳಲ್ಲಿ ತಮ್ಮ ಹತ್ತಿರ ಇರುವವರೊಂದಿಗೆ ಸಾಂತ್ವನ ಹುಡುಕುವ ಮತ್ತು ಬೆಂಬಲವನ್ನು ಹಂಚಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಇತರರ ದುಃಖವನ್ನು ಹಂಚಿಕೊಳ್ಳುತ್ತಾರೆ. ದಾನ ಮತ್ತು ಸಹಾಯ ಮಾಡುವಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ.

ಇತರರು ಅವರನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ತಮ್ಮ ಭಾವನೆಗಳನ್ನು ತಮ್ಮ ಹತ್ತಿರದವರೊಂದಿಗೆ ಮಾತ್ರ ಹಂಚಿಕೊಳ್ಳುತ್ತಾರೆ. ಎಷ್ಟೇ ಕಠಿಣ ಸಂದರ್ಭಗಳು ಬಂದರೂ ತಮ್ಮ ಗುರಿಗಳತ್ತ ಪ್ರಯಾಣಿಸುವ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ಹಣ ಸಂಪಾದಿಸುವಲ್ಲಿ ನಿಪುಣರಾಗಿರುತ್ತಾರೆ. ಸ್ವಾಭಾವಿಕವಾಗಿಯೇ ಹಣಕಾಸು ನಿರ್ವಹಣಾ ಜ್ಞಾನ ಹೆಚ್ಚಿರುತ್ತದೆ. ಯಾವುದೇ ಸಂದರ್ಭವನ್ನು ಶಾಂತವಾಗಿ ನಿಭಾಯಿಸುತ್ತಾರೆ. ಹೀಗಾಗಿ ಯಾವುದೇ ಕೆಲಸದಲ್ಲೂ ಯಶಸ್ಸು ಸಾಧಿಸುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಜವಾಬ್ದಾರರಾಗಿರುವುದಿಲ್ಲ.