ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ ಯಶಸ್ವಿಯಾಗಿ ಮುಂದುವರೆಯುತ್ತಿದ್ದು, ನಾಲ್ಕನೇ ವಾರಾಂತ್ಯಕ್ಕೆ ಕಾಲಿಟ್ಟಿದೆ. ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ನಟ. ನಿರೂಪಕ ಸುದೀಪ್ ಮತ್ತೊಮ್ಮೆ ಮನೆಯ ಸ್ಪರ್ಧಿಗಳಿಗೆ ತಲುಪಿಸಬೇಕಿದ್ದ ಮಾತುಗಳನ್ನು ಗಂಭೀರವಾಗಿ ತಿಳಿಸಿದರು.
ವಿನಯ್ ಮತ್ತು ಸಂಗೀತಾ ಅವರ ನಡುವಿನ ಏಕವಚನದ ವಾಗ್ದಾಳಿಗೂ ತಕ್ಕ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ನಮ್ರತಾ ಸೇರಿದಂತೆ ಇತರರಿಗೆ ನಿದರ್ಶನಗಳ ಮುಖೇನ ಸುದೀಪ್ ಅರ್ಥೈಸಿದರು. ಇದೀಗ ಇದರ ಬೆನ್ನಲ್ಲೇ ಭಾನುವಾರದ ಸೂಪರ್ ಸಂಡೆ ವಿತ್ ಸುದೀಪ್ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ದ ಕೆಲವರು ಮಾಡಿದ ಆರೋಪವನ್ನು ಪ್ರಶ್ನಿಸಲಾಗಿದೆ.
ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳಲ್ಲಿ ಆಟದ ವೈಖರಿಯಲ್ಲಿ ಇರಬೇಕಿದ್ದ ಪೈಪೋಟಿ, ಜಿದ್ದಾಜಿದ್ದಿ ಕೇವಲ ಮಾತಿನಲ್ಲಿ, ಆರೋಪ-ಪ್ರತ್ಯಾರೋಪಗಳಲ್ಲಿ ಮಾತ್ರ ಕಾಣಿಸುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಮನೆ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ತೀವ್ರ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ಇಂದು ಸೂಪರ್ ಸಂಡೆ ವಿತ್ ಸುದೀಪ ಸಂಚಿಕೆಯಲ್ಲಿ ಕೆಲವರು ಪ್ರತಾಪ್ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿಯಿಲ್ಲ ಎಂದು ಮಾಡಿದ ಆರೋಪವನ್ನು ಸುದೀಪ್ ನೇರವಾಗಿ ಸ್ಪರ್ಧಿಗಳ ಬಳಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಾಳೆಹೊನ್ನೂರು ಸುತ್ತಮುತ್ತ ಉತ್ತಮ ಮಳೆ
ಪ್ರತಾಪ್ ಮನೆಯಲ್ಲಿನ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿ ಇಲ್ವಾ? ಕಳೆದ ವಾರ ವಿನಯ್ ಬಾಯಲ್ಲಿ ಇಂಥದೊಂದು ಮಾತು ಹೊರಬಂದಿತ್ತು. ಅದಕ್ಕೆ ಇಶಾನಿ ಕೂಡ 'ಹೌದು. ನಂಗೂ ಗೊತ್ತು ಅದು' ಎಂದು ಅನುಮೋದಿಸಿದ್ದರು. ತುಕಾಲಿ, ನಮ್ರತಾ ಕೂಡ ಆ ಮಾತನ್ನು ಅನುಮೋದಿಸಿದ್ದರು. ಈಗ ವೀಕೆಂಡ್ ಎಪಿಸೋಡಿನಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ಏನಾಯಿತು? ಸುದೀಪ್ ಯಾರಿಗೆ ಕ್ಲಾಸ್ ತೆಗೆದುಕೊಂಡರು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.