ನ್ಯೂಸ್

ಪತ್ನಿ ಉಡುಗೊರೆಯಾಗಿ ಕೊಟ್ಟ ಬೈಕ್​ ಒರೆಸುವಾಗ ಪತಿಗೆ ಕಾದಿತ್ತು ಬಿಗ್​ ಶಾಕ್..!​

ಮುಂಬೈ: ದಣಿವರಿಯಿಲ್ಲದೆ ಸುಮಾರು 7 ಗಂಟೆಗಳ ಆಪರೇಷನ್ ಮಾಡುವ ಮೂಲಕ ಅಪಘಾತದಲ್ಲಿ ಹೆಬ್ಬೆರಳು ಕಳೆದುಕೊಂಡಿದ್ದ ವ್ಯಕ್ತಿಗೆ ಹೆಬ್ಬೆರಳು ಮರುಜೋಡಣೆ ಮಾಡುವಲ್ಲಿ ಮುಂಬೈ ವೈದ್ಯರು ಯಶಸ್ವಿಯಾಗಿದ್ದಾರೆ.

ಘಟನೆಯ ವಿವರಣೆಗೆ ಬರುವುದಾದರೆ, ಮುಂಬೈ ಮೂಲದ ರೋಹನ್​ ಅಜ್ಜಂಕರ್​ (42)ಗೆ ಬೈಕ್​ ಸ್ಟಂಟ್​ ಮಾಡುವ ಹುಚ್ಚು. ಹೀಗಾಗಿ ರೋಹನ್​ ಪತ್ನಿ ಜಾಗೃತಿ ಬೈಕ್​ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಕೆಲವು ದಿನಗಳ ಹಿಂದೆ ಒದ್ದೆ ಬಟ್ಟೆಯಿಂದ ಬೈಕ್​ ಒರೆಸುವಾಗ ಅದೇ ಸಮಯದಲ್ಲಿ ಇಂಜಿನ್​ ಸಹ ಆನ್​ ಆಗಿ, ರೋಹನ್​ ಎಡಗೈ ಹೆಬ್ಬೆರಳು ಚೈನ್​ಗೆ ಸಿಕ್ಕಿಕೊಂಡಿತ್ತು.

ಕೆಲವೇ ಸೆಕೆಂಡ್​ಗಳನ್ನು ತನ್ನ ಕೈಯನ್ನು ರೋಹನ್​ ಎಳೆದುಕೊಂಡಿದ್ದ. ಬೆರಳಿನಲ್ಲಿ ರಕ್ತ ತುಂಬಿಕೊಂಡಿತ್ತು. ಏನು ಆಗುವುದಿಲ್ಲ. ಇದೊಂದು ಸಣ್ಣ ಗಾಯವಷ್ಟೇ ಅಂದುಕೊಂಡಿದ್ದ ರೋಹನ್​ ಸರಿಯಾಗಿ ನೋಡಿದಾಗ ಹೆಬ್ಬೆರಳಿನ ತುದಿ ಇಲ್ಲದಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದರು.

ತಕ್ಷಣ ಮುಂಬೈನ ಪರೇಲ್​ನಲ್ಲಿರುವ ಗ್ಲೋಬಲ್​ ಆಸ್ಪತ್ರೆಗೆ ರೋಹನ್​ ದಾಖಲಾದರು. ಇದಾದ ಬಳಿಕ ವೈದ್ಯರು ಸುಮಾರು 7 ಗಂಟೆಗಳ ಕಾಲ ಆಪರೇಷನ್​ ನಡೆಸಿ ಬೆರಳನ್ನು ಅಳವಡಿಸಲಾಗಿದೆ. ಆದರೆ, ತಾನು ಉಡುಗೊರೆಯಾಗಿ ನೀಡಿದ ಬೈಕ್‌ನಿಂದಾಗಿ ಪತಿಗೆ ಹೀಗಾಯಿತಲ್ಲ ಎಂದು ಜಾಗೃತಿ ಆಘಾತಕ್ಕೆ ಒಳಗಾಗಿದ್ದಾರೆ. (ಏಜೆನ್ಸೀಸ್​)