ನ್ಯೂಸ್

ಜಗತ್ತಿನಲ್ಲಿ ಮೊದಲು ಬೇಸಿಗೆ ಪ್ರಾರಂಭವಾಗುವುದು ಎಲ್ಲಿ ಗೊತ್ತೆ?; ಇಲ್ಲಿದೆ ಮಾಹಿತಿ.. | Summer

Summer : ಈ ಬಾರಿ ಮಾರ್ಚ್​ ಮಧ್ಯಂತರದಲ್ಲಿಯೇ ಬಿಸಿಲಿನ ತಾಪ ತಟ್ಟುತ್ತಿದೆ. ನಾಗರಿಕರು ಇದರಿಂದ ತಪ್ಪುಸಿಕೊಲ್ಳೊದೇಗೆ ಎಂದು ಯೋಚಿಸುತ್ತಿದ್ದಾರೆ. ಅಲ್ಲದೆ, ಇದೀಗ ಮಾರ್ಚ್​ ತಿಂಗಳು ಮುಗಿಯುವ ಅಂತ್ಯದಲ್ಲಿದ್ದು, ಏಪ್ರಿಲ್​ ಆರಂಭವಾಗಲಿದೆ ಜತೆಗೆ ಬೀರು ಬಿಸಿಲು ಕೂಡ ಧಾವಿಸುತ್ತಿದೆ. ಜನರು ಕೂಡ ಬೀಸಿಲಿ ತಾಪದಿಂದ ತಪ್ಪಿಸಿಕೊಳ್ಳಲು ವಿವಿಧ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಚಳಿಗಾಲ ಮತ್ತು ಬೇಸಿಗೆ ಕಾಲ ಸೇರಿದಂತೆ ಎಲ್ಲಾ ರೀತಿಯ ಕಾಲಗಳು ನಮ್ಮ ಭೂಮಿಯ ಚಲನೆಯನ್ನು ಅವಲಂಭಿಸಿವೆ. ಭೂಮಿಯ ಅಕ್ಷದ ಓರೆತನವು ಹವಾಮಾನದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ.

ಸೂರ್ಯನ ಸುತ್ತ ಸುತ್ತುವಾಗ, ನಮ್ಮ ಭೂಮಿಯು ಸೂರ್ಯನಿಂದ ದೂರವಿರುವುದರಿಂದ ಚಳಿಗಾಲ ಮತ್ತು ಬೇಸಿಗೆ ಕಾಲ ಉಂಟಾಗುತ್ತದೆ. ಭೂಮಿಯ ಮೇಲೆ ಸೂರ್ಯನ ಕಡೆಗೆ ಹೆಚ್ಚು ಒಲವು ತೋರುವ ಭಾಗವು ಬಿಸಿಯಾಗಿರುತ್ತದೆ. ಆದರೆ, ಭೂಮಿಯ ಶಾಶವು ಮೊದಲು ಎಲ್ಲಿಂದ ಪ್ರಾರಂಭವಾಗಲಿದೆಯೇ ಗೊತ್ತೆ? ಇದನ್ನು ತಿಳಿಯೋಣ ಬನ್ನಿ..

ಬೇಸಿಗೆ ಎಲ್ಲಿಂದ ಪ್ರಾರಂಭ?

ನಮ್ಮ ಭೂಮಿಯ ಮೇಲೆ ಬೇಸಿಗೆ ಕಾಲ ಮೊದಲು ದಕ್ಷಿಣ ಗೋಳಾರ್ಧದ ಭಾಗದಲ್ಲಿರುವ ದೇಶಗಳಲ್ಲಿ ಪ್ರಾರಂಭವಾಗಲಿದೆ. ಮಾರ್ಚ್​ ಅಂತ್ಯದಲ್ಲಿ ಇಲ್ಲಿ ವಸಂತ ಕಾಲ ಆರಂಭವಾಗಲಿದ್ದು, ದಕ್ಷಿಣ ಗೋಳಾರ್ಧದಲ್ಲಿ ಆಸ್ಟ್ರೇಲಿಯಾ , ದಕ್ಷಿಣ ಆಫ್ರಿಕಾ, ಬ್ರೇಜಿಲ್​ ಮತ್ತು ಚಿಲಿ, ಅರ್ಜೆಂಟೀನಾ, ಜಾಂಬಿಯಾ ಮುಂತಾದ ದೇಶಗಳನ್ನು ಒಳಗೊಂಡಿದೆ.ಇಲ್ಲಿ ಪ್ರತಿ ವರ್ಷ ಡಿ. 21 ರಿಂದ ಮಾರ್ಚ್​ 20ರ ವರೆಗೆ ಬೇಸಿಗೆ ಕಾಲ ಇರುತ್ತದೆ.

ಈ ಪ್ರದೇಶದಲ್ಲಿ ಚಳಿಗಾಲ ಪ್ರಾರಂಭವಾದಾಗ, ಉತ್ತರ ಗೋಳಾರ್ಧದ ದೇಶಗಳಲ್ಲಿ ಬೇಸಿಗೆ ಪ್ರಾರಂಭವಾಗುತ್ತದೆ. ಇದು ಜೂನ್​ 21 ರಿಂದ ಸೆ.21ರವರೆಗೆ ಇರುತ್ತದೆ. ಇನ್ನು ಉತ್ತರ ಗೋಳಾರ್ಧದಲ್ಲಿ ಭಾರತ ದೇಶ ಬರುತ್ತದೆ. ಇಲ್ಲಿ ಸಾಮಾನ್ಯವಾಗಿ ಮಾರ್ಚ್​, ಏಪ್ರೀಲ್​, ಮೇ ಮತ್ತು ಜೂನ್​ ತಿಂಗಳಲ್ಲಿ ಅತ್ಯಂತ ಶಾಖ ಇರುತ್ತದೆ.(ಏಜೆನ್ಸೀಸ್​)