World First Man : ಮಾನವ ಜನಾಂಗವು ಜಗತ್ತಿನಲ್ಲಿ ಉದಯಿಸಿದಾಗಿನಿಂದ ವಿಕಸನಗೊಳ್ಳುತ್ತಲೇ ಇದೆ. ಈ ಭೂಮಿಯ ಮೇಲೆ ಮಾನವ ಸಮುದಾಯ ಕಾಣಿಸಿಕೊಂಡಾಗ ಇದ್ದ ಮಾನವರು ಈಗ ಇಲ್ಲ, ಬದಲಿಗೆ ಮಾನವರು ವಿವಿಧ ಆಯಾಮಗಳಲ್ಲಿ ಅಭಿವೃದ್ಧಿ ಹೊಂದುತ್ತಾ ಬರುತ್ತಿದ್ದಾರೆ. ಅಂದರೆ, ದೇಹವು ಹಲವು ಬದಲಾವಣೆಗಳನ್ನು ಕಂಡಿದೆ. ಪ್ರಸ್ತುತ ಈ ಜಗತ್ತಿನಲ್ಲಿ 195 ದೇಶಗಳಿವೆ. ಆದರೆ, ವಿಶ್ವದ ಮೊದಲ ಮಾನವರು ಯಾವ ದೇಶದಲ್ಲಿ ವಿಕಸನಗೊಂಡರು ಎಂಬುದು ಯಾರಿಗೂ ನಿಜವಾಗಿಯೂ ತಿಳಿದಿಲ್ಲ.
ಪ್ರಪಂಚದ ಮೊದಲ ಮಾನವರು ಜನಿಸಿದ ಸ್ಥಳದ ಬಗ್ಗೆ ಶತಮಾನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕೆಲವು ಮೂಲಗಳು ಮಾನವರ ಜನ್ಮಸ್ಥಳ ಆಫ್ರಿಕಾದಲ್ಲಿತ್ತು ಮತ್ತು ಮೊದಲ ಮಾನವರು ಆಫ್ರಿಕನ್ ಖಂಡದ ಯಾವುದೋ ಭಾಗದಲ್ಲಿ ಜನಿಸಿದರು ಎಂದು ಸೂಚಿಸುತ್ತವೆ. ಇನ್ನು ಕೆಲವು ಮೂಲಗಳು ಪ್ರಪಂಚದಾದ್ಯಂತದ ವಿವಿಧ ಸ್ಥಳಗಳನ್ನು ಉಲ್ಲೇಖಿಸಿದರೂ, ಮಾನವಕುಲದ ಇತಿಹಾಸದ ಬಗ್ಗೆ ಇನ್ನೂ ಯಾವುದೇ ನಿರ್ಣಾಯಕ ಉತ್ತರ ಕಂಡುಬಂದಿಲ್ಲ.
ಆ ನಿಟ್ಟಿನಲ್ಲಿ, ಈ ಭೂಮಿಯ ಮೇಲಿನ ಮೊದಲ ಮಾನವ ಜನಿಸಿದ ದೇಶದ ಬಗ್ಗೆ ಕೆಲವು ವಿವರಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಅದೇನೆಂದರೆ, ಮನುಕುಲದ ಇತಿಹಾಸವನ್ನು ಹುಡುಕುವಾಗ, ಯಾರೇ ಆಗಲಿ "ಏಡನ್ ಉದ್ಯಾನ" ಎಂದು ಉಲ್ಲೇಖಿಸುತ್ತಿದ್ದರು. ಪವಿತ್ರ ಗ್ರಂಥವಾದ ಬೈಬಲ್‌ನಲ್ಲಿ ಭೂಮಿಯ ಮೇಲಿನ ಏಡನ್ ಉದ್ಯಾನವನ್ನು ಉಲ್ಲೇಖಿಸಲಾಗಿದೆ. ಮೊದಲ ಮಾನವರಾದ ಆಡಮ್ ಮತ್ತು ಈವ್ ವಾಸಿಸುತ್ತಿದ್ದ ಸ್ಥಳ ಇದಾಗಿದೆ ಎಂದು ಸಹ ಹೇಳಲಾಗುತ್ತದೆ. ಈ ವಿಷಯದ ಬಗ್ಗೆ ಧಾರ್ಮಿಕ ವಿದ್ವಾಂಸರು ಮತ್ತು ವಿಜ್ಞಾನಿಗಳ ನಡುವೆ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ.
2024ರಲ್ಲಿ ಡಾ. ಕಾನ್ಸ್ಟಾಂಟಿನ್ ಬೊರಿಸೊವ್ ನಡೆಸಿದ ಅಧ್ಯಯನದ ಪ್ರಕಾರ, "ಈಜಿಪ್ಟ್ ನೈಲ್, ಯೂಫ್ರಟಿಸ್, ಟೈಗ್ರಿಸ್ ಮತ್ತು ಸಿಂಧೂ ನದಿಗಳನ್ನು ಸಂಪರ್ಕಿಸುವ ಈಡನ್ನ ಸ್ಥಳ ಎಂದು ಹೇಳಲಾಗಿತ್ತು. ಆದಾಗ್ಯೂ, ಪ್ರಪಂಚದಾದ್ಯಂತದ ಅಧ್ಯಯನಗಳಿಂದ ಪಡೆದ ಮಾಹಿತಿಯ ಪ್ರಕಾರ, ಆಫ್ರಿಕನ್ ಖಂಡವನ್ನು ಮೊದಲ ಮಾನವನ ಜನ್ಮಸ್ಥಳವೆಂದು ಸಹ ಸೂಚಿಸಲಾಗಿದೆ.
ದಕ್ಷಿಣ ಆಫ್ರಿಕಾವನ್ನು ಮಾನವೀಯತೆಯ ತೊಟ್ಟಿಲು ಎಂದು ಕರೆಯಲಾಗುತ್ತದೆ. ಆದಾಗ್ಯೂ, ಅತ್ಯಂತ ಹಳೆಯ ಮಾನವ ಪಳೆಯುಳಿಕೆಗಳು ಇಥಿಯೋಪಿಯಾದ ಓಮೋ ಕಣಿವೆಯಲ್ಲಿ ಕಂಡುಬಂದಿವೆ. ಇತಿಹಾಸವನ್ನು ಸಾಬೀತುಪಡಿಸಲು ಅತ್ಯಂತ ದೊಡ್ಡ ಪುರಾವೆ ಎಂದು ಇದನ್ನು ಪರಿಗಣಿಸಲಾಗಿದ್ದು, ಮಾನವರು ಹುಟ್ಟಿದ ಪ್ರಮುಖ ಸ್ಥಳವೆಂದು ನೋಡಲಾಗುತ್ತದೆ. ಮನುಷ್ಯನ ಮೂಲದ ಕಥೆಯಲ್ಲಿ ವಿವರಿಸಲಾಗದ ಅನೇಕ ರಹಸ್ಯಗಳಿದ್ದರೂ, ಈ ಸಿದ್ಧಾಂತಗಳನ್ನು ಇಂದಿಗೂ ಅನ್ವೇಷಿಸಲಾಗುತ್ತಿದೆ. ಪ್ರಾಚೀನ ಗ್ರಂಥಗಳನ್ನು ಆಧುನಿಕ ವಿಜ್ಞಾನದೊಂದಿಗೆ ಹೋಲಿಸಲಾಗುತ್ತಿದೆ ಎಂಬುದು ಗಮನಾರ್ಹ.
ವಿಜ್ಞಾನದ ಪ್ರಕಾರ ಜಗತ್ತಿನ ಮೊದಲ ಮಾನವ ಹೋಮೋ ಹ್ಯಾಬಿಲಿಸ್(Homo habilis) ಎಂದು ಗುರುತಿಸಲಾಗಿದೆ. ಅಲ್ಲದೆ, ಇದಕ್ಕೆ ಪುರಾವೆ ಎಂಬಂತೆ, ಅವರ ಅವೇಶಷಗಳು ಇತ್ತೀಚಿಗೆ ಆಫ್ರಿಕಾದಲ್ಲಿ ಪತ್ತೆಯಾಗಿವೆ. ಅವುಗಳ ವಯಸ್ಸು ಸುಮಾರು 2.8 ರಿಂದ 1.4 ಮಿಲಿಯನ್ ವರ್ಷಗಳಷ್ಟು ಹಳೆಯದು. ಎರಡು ಕಾಲುಗಳ ಮೇಲೆ ನಡೆಯುವ ಸಾಮರ್ಥ್ಯವಿರುವ ಮೊದಲ ಜೀವಿ ಹೋಮೋ ಹ್ಯಾಬಿಲಿಸ್ ಆಗಿದ್ದರಿಂದ ಅವನನ್ನು ಜಗತ್ತಿನ ಮೊದಲ ಮಾನವ ಎಂದು ಪರಿಗಣಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಸಂಶೋಧನೆ ಮುಂದುವರೆದಿದೆ.
ಹೋಮೋ ಸೇಪಿಯನನ್ಸ್ ಅನ್ನು ಅಧುನಿಕ ಮಾನವರ ಪೂರ್ವಜರು ಎಂದು ಪರಿಗಣಿಸಲ್ಪಟ್ಟಿದೆ. ಇಂದು ನಾವರಲ್ಲರೂ ಹೋಮೋ ಸೇಪಿಯನನ್ಸ್ ಎಂದು ಪರಿಗಣಿಸಲ್ಪಟ್ಟಿದೆ. ಹೋಮೋ ಸೇಪಿಯನ್ ಅವಶೇಷಗಳು ಕೂಡ ಆಫ್ರಿಕಾದಲ್ಲಿ ಕಂಡಬಂದಿವೆ. ಅವು 3 ಲಕ್ಷ ವರ್ಷಗಳಷ್ಟು ಹಳೆಯವು ಎಂದು ಹೇಳಲಾಗಿದೆ. ಹೋಮೋ ಸೇಪಿಯನ್ಸ್ ನಮ್ಮೆಲ್ಲರಂತೆಯೇ ಕಾಣುವ ಮೊದಲ ಜೀವಿಯಾಗಿರುವುದರಿಂದ ಅವರನ್ನು ನಮ್ಮ ಪೂರ್ವಜರೆಂದು ಪರಿಗಣಿಸಲಾಗುತ್ತದೆ. ಜನರು ಪರಸ್ಪರ ಭೇಟಿಯಾಗಿ ಮಾತನಾಡುವಾಗ, ನಮ್ಮ ಆಲೋಚನೆಗಳು ವರ್ಗಾವಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಅದೇ ರೀತಿ, ನಾವು ಸಹ ಅಭಿವೃದ್ಧಿ ಹೊಂದಿದ್ದೇವೆ ಎಂದು ಅಧ್ಯಯನ ಹೇಳುತ್ತದೆ.(ಏಜೆನ್ಸೀಸ್)