Seema Haider: ತನ್ನ ಪ್ರಿಯತಮ ಗ್ರೇಟರ್ ನೊಯ್ಡಾದ ನಿವಾಸಿ ಸಚಿನ್ ಮೀನಾಗೊಸ್ಕರ ಪಕ್ಕದ ರಾಷ್ಟ್ರ ಪಾಕಿಸ್ತಾನದಿಂದ ಆಕ್ರಮವಾಗಿ ನುಸುಳಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ಹೌದು, ಅದಕ್ಕೆ ಕಾರಣವೂ ಇದೆ. ಸದಾ ಒಂದಲ್ಲೊಂದು ಸುದ್ದಿಯಲ್ಲಿರುವ ಸೀಮಾ ಇದೀಗ ಮತ್ತೊಂದು ವಿಚಾರಕ್ಕೆ ಮುನ್ನೆಲೆಗೆ ಬಂದಿದ್ದಾರೆ. ಅದು ಏನೆಂದರೆ, ತನ್ನ ಪತಿ ಜತೆ ಭಾರತದಲ್ಲಿದ್ದುಕೊಂಡೆ ಯೂಟ್ಯೂಬ್ ಮೂಲಕ ಸಾಕಷ್ಟು ಹಣ ಸಂಪಾದಿಸಿದ್ದಾರೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಯೂಟ್ಯೂಬ್‌ನಿಂದ ಸೀಮಾ ಅವರ ಮೊದಲ ಗಳಿಕೆ 45 ಸಾವಿರ ರೂ. ಆಗಿದೆ ಎಂದು ಹೇಳಲಾಗಿದೆ. ಇನ್ನು ಮತ್ತೊಂದು ವರದಿ ಪ್ರಕಾರ, ಪ್ರಸ್ತುತ ಅವರ ಮಾಸಿಕ ಗಳಿಕೆ 80 ಸಾವಿರದಿಂದ 1 ಲಕ್ಷ ರೂ. ವೆರೆಗೆ ಇದೆ. ಸೀಮಾ ಮತ್ತು ಅವರ ಪತಿ ಸಚಿನ್ ಮೀನಾ ಒಟ್ಟು 6 ಯೂಟ್ಯೂಬ್ ಚಾನಲ್ಗಳನ್ನು ಹೊಂದಿದ್ದಾರೆ. ಅವರ ಆದಾಯವು ಯೂಟ್ಯೂಬ್ ಜಾಹೀರಾತುಗಳು, ಸೂಪರ್ ಚಾಟ್, ದೇಣಿಗೆಗಳು, ಬ್ರ್ಯಾಂಡ್ ಪ್ರಚಾರಗಳು ಮತ್ತು ಪ್ರಾಯೋಜಿತ ವೀಡಿಯೊಗಳಿಂದ ಬರುತ್ತದೆ.
ಇನ್ನು ಸೀಮಾ ಪ್ರಕಾರ, 5 ನಿಮಿಷಗಳ ವಿಡಿಯೋದಲ್ಲಿ 1 ಸಾವಿರ ವಿಕ್ಷಣೆಗೆ ಸುಮಾರು 25 ರೂ. ಪಡೆಯುತ್ತೇನೆ. ಆದರೆ, ಯೂಟ್ಯೂಬ್ ಶಾರ್ಟ್ಸ್ನಲ್ಲಿ 1 ಲಕ್ಷ ವಿಕ್ಷಣೆಗೆ 1 ಡಾಲರ್(80-82 ರೂ.) ಆದಾಯ ಬರುತ್ತಿದೆ ಎಂದು ಹೇಳಿದ್ದಾರೆ. ಯೂಟ್ಯೂಬ್ ನಿಂದ ಉತ್ತಮ ಗಳಿಕೆ ಬರುತ್ತಿರುವುದರಿಂದ, ಸೀಮಾ ತನ್ನ ಪತಿ ಸಚಿನ್ಗೆ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಕೆಲಸ ಬಿಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
PUBG ಆಡುವಾಗ ಸಚಿನ್ ಮೀನಾ ಅವರನ್ನು ಪ್ರೀತಿಸಿದ ಸೀಮಾ ಹೈದರ್, 2023ರಲ್ಲಿ ಪಾಕಿಸ್ತಾನದಿಂದ ನೇಪಾಳ ಮೂಲಕ ಭಾರತಕ್ಕೆ ತಮ್ಮ ಪ್ರೀತಿಗಾಗಿ ಸಚಿನ್ ಅವರನ್ನು ಅರಸಿ ಬಂದರು.
ಭಾರತಕ್ಕೆ ಬಂದು ಸಚಿನ್ ಅವರನ್ನು ಮದುವೆಯಾದರು. ಅಂದಿನಿಂದ ಅವರು ತಮ್ಮ ಪತಿ ಸಚಿನ್ ಅವರೊಂದಿಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವಾಸಿಸುತ್ತಿದ್ದರು. ಅವರಿಬ್ಬರ ಪ್ರೇಮಕಥೆ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಯಿತು.
ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ, ಗ್ರೇಟರ್ ನೋಯ್ತಾದ ರಬುಪುರ ಗ್ರಾಮದಲ್ಲಿ ತನ್ನ ಪ್ರೇಮಿ ಸಚಿನ್ ಮೀನಾ ಜೊತೆ ವಾಸಿಸುತ್ತಿದ್ದಳು. ಸೀಮಾಳ ಮೊದಲ ಪತಿಯಿಂದ ಬಂದ ನಾಲ್ವರು ಮಕ್ಕಳೂ ಸಹ ಅವಳೊಂದಿಗೆ ವಾಸಿಸುತ್ತಿದ್ದಾರೆ. ಅಲ್ಲದೆ. ಇದೇ ಮಾ.18ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳ ಎಂದು ವರದಿಯಾಗಿದೆ.
ಅಕ್ರಮವಾಗಿ ಭಾರತಕ್ಕೆ ಬಂದಿದ್ದಕ್ಕಾಗಿ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಸೀಮಾ ಸದ್ಯ ಜಾಮೀನಿನ ಮೇಲೆ ಇದ್ದಾರೆ. ಆತನನ್ನು ಇನ್ನೂ ಪೊಲೀಸ್ ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ಅವರು ಭಾರತೀಯ ಪೌರತ್ವಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.(ಏಜೆನ್ಸೀಸ್)