ನ್ಯೂಸ್

ಪವಿತ್ರ ಗೌಡ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?; ದರ್ಶನ್​ ಗೆಳತಿ​ ಕುರಿತು ಅಚ್ಚರಿಯ ಹೇಳಿಕೆ ಕೊಟ್ಟ ನಿರ್ದೇಶಕ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್​​ ಆಪ್ತೆ ಪವಿತ್ರ ಗೌಡ ಪೊಲೀಸ್​ ಕಸ್ಟಡಿ ಅಂತ್ಯವಾದ ಹಿನ್ನೆಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿರುವ ಅವರು ಹತ್ಯೆ ಕೇಸ್​ನ A1 ಆಗಿದ್ದು, ನಟ ದರ್ಶನ್​ಗೆ ಈ ಸ್ಥಿತಿ ಬರಲು ಪವಿತ್ರಾ ಗೌಡ ಮುಖ್ಯ ಕಾರಣ ಎಂಬ ಮಾತಿಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಪವಿತ್ರಾ ಗೌಡ ಅವರು ಮೊದಲು ಸಂಜಯ್ ಸಿಂಗ್ ಎನ್ನುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಖುಷಿ ಗೌಡ ಎಂಬ ಮಗಳು ಇದ್ದಾಳೆ. ಆದರೆ, ಕಾರಣಾಂತರಗಳಿಂದ ಸಂಜಯ್​ ಹಾಗೂ ಪವಿತ್ರಾ ದೂರಾಗಿದ್ದು, ಗಂಡನಿಂದ ಬೇರ್ಪಟ್ಟ ಬಳಿಕ ಪವಿತ್ರಾ ಮಾಡೆಲಿಂಗ್​ ಹಾಗೂ ಚಿತ್ರರಂಗಕ್ಕೆ ಕಾಲಿಟ್ಟರು. ನಟಿಯಾಗುವ ಆಸೆಯಿಂದ ಚಿತ್ರರಂಗಕ್ಕೆ ಬಂದವರು ಆದರೆ ನಟಿಯಾಗಿ ದೊಡ್ಡ ಯಶಸ್ಸು ಅವರಿಗೆ ಸಿಗಲಿಲ್ಲ. ಅಗಮ್ಯ ಎಂಬ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸಿದ ಪವಿತ್ರಾ ಗೌಡ ಈವರೆಗೆ ನಟಿಸಿರುವುದು ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ಎಂಬ ವಿಚಾರ ಹಲವರಿಗೆ ತಿಳಿದಿಲ್ಲ.

ಈ ಕುರಿತು ಮಾತನಾಡಿರುವ ಅಗಮ್ಯ ಚಿತ್ರದ ನಿರ್ದೇಶಕ ಉಮೇಶ್​ ಗೌಡ, ಸಿನಿಮಾಕ್ಕಾಗಿ ನಾವು ನಟಿಯರನ್ನು ಹುಡುಕುತ್ತಿದ್ದೆವು, ನಮ್ಮ ಬಳಿ ಬಜೆಟ್ ಕಡಿಮೆ ಇತ್ತು. ಹಾಗಾಗಿ ದೊಡ್ಡ ನಟಿಯರು ಬೇಕಿರಲಿಲ್ಲ. ಒಮ್ಮೆ ಕೋಆರ್ಡಿನೇಟರ್ ಒಬ್ಬರಿಂದ ಪವಿತ್ರಾ ಗೌಡ ಪರಿಚಯವಾಯ್ತು. ಆದರೆ ಪವಿತ್ರಾ ಗೌಡ ಪಾತ್ರಕ್ಕೆ ಸೂಕ್ತ ಅಲ್ಲ ಅನಿಸಿತು. ಅವರು ನಟನೆಯೂ ನನಗೆ ಅಷ್ಟಾಗಿ ಹಿಡಿಸಿರಲಿಲ್ಲ. ಹಾಗಾಗಿ ಅವರನ್ನು ತೆಗೆದುಕೊಂಡಿರಲಿಲ್ಲ. ಆದರೆ ಕೋ ಆರ್ಡಿನೇಟರ್​ ಕಡೆಯಿಂದ ನಮ್ಮ ಮೇಲೆ ನಿರಂತರವಾಗಿ ಒತ್ತಡ ಹಾಕಿಸುತ್ತಿದ್ದರು. ಇನ್ನೇನು ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಬೇಕು ಎಂದುಕೊಂಡಾಗ ಒಬ್ಬ ನಟಿ ಕೈಕೊಟ್ಟರು, ಆಗ ಆ ಜಾಗಕ್ಕೆ ನಾವು ಪವಿತ್ರಾ ಗೌಡ ಅವರನ್ನು ಸೇರಿಸಿಕೊಂಡೆವು. ಸಿನಿಮಾ ಶುರುವಾಗುವುದಕ್ಕೂ ಮುನ್ನ ಪವಿತ್ರಾಗೆ ಸಾಕಷ್ಟು ಸಲಹೆಗಳನ್ನು ನೀಡಿಯೇ ನಾವು ಸೇರಿಸಿಕೊಂಡೆವು.

ಪವಿತ್ರಾಗೆ ನಟನೆ ಅಷ್ಟಾಗಿ ಬರುತ್ತಿರಲಿಲ್ಲ. ಆದರೆ ಎಲ್ಲರೊಟ್ಟಿಗೆ ಬಹಳ ಚೆನ್ನಾಗಿ ಬೆರೆಯುತ್ತಿದ್ದರು. ತಮಾಷೆ ಮಾಡಿಕೊಂಡು ಇರುತ್ತಿದ್ದರು, ಆದರೆ ತುಂಬಾ ರೀಟೇಕ್ ತೆಗೆದುಕೊಳ್ಳುತ್ತಿದ್ದಳು. ನಾನಂತೂ ನಟನೆ ವಿಷಯಕ್ಕೆ ಸಾಕಷ್ಟು ಬಾರಿ ಬೈದಿದ್ದೇನೆ. ಆಗ ಬೇಜಾರು ಮಾಡುತ್ತಿದ್ದಳು ಬಳಿಕ ನಮ್ಮನ್ನೇ ನಗಿಸುತ್ತಿದ್ದಳು. ಬಹಳ ಆಕ್ಟಿವ್ ಆಗಿರುತ್ತಿದ್ದಳು. ಆಗ ಡಿಮ್ಯಾಂಡಿಂಗ್ ಆಗಿ ಇರಲಿಲ್ಲ. ಸರಳವಾಗಿಯೇ ಇರುತ್ತಿದ್ದಳು, ಮೊದಲ ಸಿನಿಮಾಕ್ಕೆ ಸಂಭಾವನೆ ಸಹ ಫಿಕ್ಸ್ ಮಾಡಿರಲಿಲ್ಲ. ಹಣ ಕೇಳಿದಾಗ ಕೊಡುತ್ತಿದ್ದೆ, ಆಗಾಗ್ಗೆ ಐದು ಸಾವಿರ, ಎರಡು ಸಾವಿರ ಪಡೆದುಕೊಳ್ಳುತ್ತಿದ್ದಳು. ಮೊದಲ ಸಿನಿಮಾಕ್ಕೆ ಸುಮಾರು 20-25 ಸಾವಿರ ರೂಪಾಯಿ ಕೊಟ್ಟಿರಬಹುದು ಅಷ್ಟೇ ಎಂದು ಹೇಳಿದ್ದಾರೆ.

ಪವಿತ್ರಾ ಬಹಳ ಬೇಗ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು. ನಮ್ಮ ಜೊತೆ ಕೆಲಸ ಮಾಡಲು ಆರಂಭಿಸಿದ ಎರಡು ವರ್ಷದಲ್ಲೇ ಆಕೆ ಚಿತ್ರರಂಗದಲ್ಲಿ ಚೆನ್ನಾಗಿ ಸಂಪರ್ಕ ಬೆಳೆಸಿಕೊಂಡಿದ್ದಳು, ದೊಡ್ಡ ನಿರ್ದೇಶಕರು, ವಿತರಕರು ಪರಿಚಯವಿತ್ತು, ದೊಡ್ಡ ನಿರ್ದೇಶಕರು ಆಕೆಗೆ ಕರೆ ಮಾಡುತ್ತಿದ್ದರು. ಇದೆಲ್ಲ ಆಶ್ಚರ್ಯವನ್ನುಂಟು ಮಾಡಿತ್ತು. ಸಿನಿಮಾದಲ್ಲಿ ಕ್ಲಿಕ್ ಆಗಲಿಲ್ಲ, ಆದರೂ ದೊಡ್ಡ ಮನೆ, ಕಾರು ಎಲ್ಲ ಹೇಗೆ ಬಂತು ಎಂದು ಆಶ್ಚರ್ಯಪಟ್ಟೆವು. ಆದರೆ ಅಷ್ಟರಲ್ಲೇ ದರ್ಶನ್ ಹಾಗೂ ಪವಿತ್ರಾರ ಸ್ನೇಹದ ಕುರಿತು ಮಾಹಿತಿ ಹೊರಗೆ ಬಂದಿತ್ತು ಎಂದು ಅಗಮ್ಯ ಚಿತ್ರದ ನಿರ್ದೇಶಕ ಉಮೇಶ್​ ಗೌಡ ಹೇಳಿದ್ದಾರೆ.

ಪಕ್ಕಾ ಮಿಡ್ಲ್​ ಕ್ಲಾಸ್​ ಹುಡುಗಿಯಾಗಿದ್ದ ಪವಿತ್ರಾಗೌಡಗೆ ಸಿರಿವಂತಿಕೆಯ ಕಿರೀಟ ಸಿಕ್ಕಿದ್ದು ದರ್ಶನ್​ ಭೇಟಿಯಾದ್ಮೇಲೆ ಅಂತಾ ಹಲವರು ಮಾತನಾಡಿಕೊಳ್ತಾರೆ. ಪವಿತ್ರಾ ಬಾಳಲ್ಲಿ ದರ್ಶನ್ ಬಂದ್ಮೇಲೆಯೇ ಕೋಟಿ ಕೋಟಿ ಆಸ್ತಿ ಒಡತಿಯಾಗಿದ್ದಳು. ದರ್ಶನ್​ ಪರಿಚಯವಾದ್ಮೇಲೆ ಪವಿತ್ರಾಳ ಫ್ರೆಂಡ್​ ಸರ್ಕಲ್ಲೇ ಬದಲಾಗಿ ಹೋಯ್ತು ಅನ್ನೋದು ಆಕೆಯ ಹತ್ತಿರದವರು ಹೇಳುವ ಮಾತು. ಲಕ್ಷ ಲಕ್ಷ ಬೆಲೆ ಬಾಳುವ ಕಾರು, ಒಡವೆಗಳು. ಡಿಸೈನರ್ ವೇರ್​ಗಳೂ.. ಒಂದೊಂದು ಬಟ್ಟೆ, ವಾಚು, ಒಡವೆಗಳೆಲ್ಲಾ ಬ್ರ್ಯಾಂಡೆಡ್​ ಹಾಗೂ ಸಖತ್​ ಎಕ್ಸ್​ಪೆನ್ಸಿವ್​. ಅಂದಹಾಗೇ, ಪವಿತ್ರ ಗೌಡಳ ಜೀವನ ಕಳೆದ ಹತ್ತು ಹನ್ನೆರಡು ವರ್ಷಗಳ ಹಿಂದೆ ಹೀಗಿರಲಿಲ್ಲ. ಸಾಮಾನ್ಯ ಮಧ್ಯಮವರ್ಗದ ಕುಟುಂಬದ ಹೆಣ್ಣು ಮಗಳಾಗಿದ್ದ ಈಕೆ ಇಷ್ಟೊಂದು ಸೌಂಡ್​ ಮಾಡಲು ಶುರುಮಾಡಿದ್ದು ಕೆಲ ವರ್ಷಗಳ ಹಿಂದಷ್ಟೇ. ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಕೋಟಿ ಕುಳವಾಗಿದ್ದೇಗೆ ಅನ್ನೋದು ಸಖತ್​ ಇಂಟರೆಸ್ಟಿಂಗ್ ಆಗಿದೆ.