Fine: ಸಾಮಾನ್ಯವಾಗಿ ಭಾರತದಲ್ಲಿ ಟ್ರಾಫಿಕ್ ಸೇರಿದಂತೆ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡೋದು ಅಧಿಕ ಎಂದು ಹೇಳಲಾಗುತ್ತಿದೆ. ಇದರಿಂದ ಪ್ರತಿದಿನ ದೇಶಾದ್ಯಂತ ನೂರಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇದನ್ನು ತಡೆಯಲು ಸರ್ಕಾರ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿದ್ದು, ಅಲ್ಲದೆ, ಈ ಕಾಯ್ದೆಯನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡುತ್ತದೆ.
ಇದನ್ನೂ ಓದಿ:ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆಯ ಮಧ್ಯೆ ಟ್ರುಡೊ ಭಾವುಕ; ಕಣ್ಣೀರಿಡುತ್ತಾ ಹೇಳಿದ್ದೇನು? | Justin Trudeau
ಇತ್ತೀನ ದಿನಗಳಲ್ಲಿ ದೇಶದ ಎಲ್ಲಾ ನಗರಗಳಲ್ಲಿ ಸಂಚಾರ ನಿಯಮಗಳನ್ನು ಜನರು ಬಹಳ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೊಸ ಹೊಸ ತಂತ್ರಜ್ನಾನವನ್ನು ಆಳವಡಿಸಿಕೊಂಡಿದೆ. ಹೀಗಾಗಿ, ಇನ್ಮುಂದೆ ನೀವು ನಿಮ್ಮ ಮನೆಯಿಂದ ವಾಹನದೊಂದಿಗೆ ಹೊರಗೆ ಬರಬೇಕಾದರೆ ಎಚ್ಚರವಹಿಸುವುದು ಅತ್ಯಗತ್ಯ. ಒಂದು ಸಣ್ಣ ತಪ್ಪು ಕೂಡ ನಿಮಗೆ ಭಾರೀ ನಷ್ಟವನ್ನುಂಟು ಮಾಡಬಹುದು ಎಂದು ನಾವು ನಿಮಗೆ ಹೇಳುತ್ತಿದ್ದೇವೆ.
ನಮ್ಮ ದೇಶದಲ್ಲಿ ಹೆಲ್ಮಟ್ನಿಂದ ಹಿಡಿದು ಸೀಟ್ ಬೆಲ್ಟ್ವರೆಗೆ ಹಲವು ರೀತಿಯ ಸಂಚಾರ ನಿಯಮಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ಓವರ್‌ಲೋಡ್. ಸಾಮಾನ್ಯವಾಗಿ ಓವರ್‌ಲೋಡ್ ಎಂದಾಕ್ಷಣ ವಾಣಿಜ್ಯ ವಾಹನಗಳು ಎಂದು ಮಾತ್ರವೇ ಅಂದುಕೊಳ್ಳುತ್ತೇವೆ. ಆದರೆ, ಬೈಕ್, ಕಾರು ಸೇರಿದಂತೆ ಇತರೆ ವಾಹನಗಳಲ್ಲಿ ಮೀಸಲಿರುವ ಸೀಟ್ಗಿಂತ ಅಧಿಕ ಜನ ಪ್ರಯಾಣಿಕರಿದ್ದರೆ ಅದನ್ನು ಓವರ್‌ಲೋಡ್ ಅಡಿಯಲ್ಲಿ ಉಲ್ಲೇಖಿಸಿ ಪೊಲೀಸರು ದಂಡ ವಿಧಿಸುತ್ತಾರೆ.
ಹೌದು, ಇದೀಗ ಕಾರಿನಲ್ಲಿ ಪ್ರಯಾಣಿಸಬಹುದಾದರ ಜನರ ಮತ್ತು ಸಂಚಾರ ನಿಯಮದ ಬಗ್ಗೆ ತಿಳಿಯೋಣ. ಅನೇಕ ಜನರು ತಮ್ಮ ಕಾರು ಅಥವಾ ಇತರೆ ವಾಹನಗಳಲ್ಲಿ ಅಧಿಕ ಮಂದಿಯನ್ನೇ ಕರೆದೊಯ್ಯುವುದು ಸಾಮಾನ್ಯವಾಗಿಬಿಟ್ಟಿದೆ. ಇದನ್ನು ನೀವು ಗಮನಿಸಿರಬಹುದು. ಒಂದು ವೇಳೆ ನೀವು ಕೂಡ ಹೀಗೆ ಮಾಡಿದರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದರ್ಥ. ನೀವು ಪ್ರತಿ ಪ್ರಯಾಣಿಕರಿಗೆ 1000 ರೂ. ದಂಡವನ್ನು ಪಾವತಿಸಬೇಕಾಗಬಹುದು. ಅದೇ ರೀತಿ, ದ್ವಿಚಕ್ರ ವಾಹನಗಳಲ್ಲಿ ಓವರ್‌ಲೋಡ್ ಮಾಡಿದರೆ 2,000 ರೂ.ವರೆಗೆ ದಂಡ ವಿಧಿಸಬಹುದು ಮತ್ತು ಪರವಾನಗಿಯನ್ನು ಮೂರು ತಿಂಗಳವರೆಗೆ ಮುಟ್ಟುಗೋಲು ಹಾಕಿಕೊಳ್ಳಬಹುದು.(ಏಜೆನ್ಸೀಸ್)