ಗೀತಾನಂದ ಫೌಂಡೇಶನ್ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಲಾಯಿತು 
ನ್ಯೂಸ್

ಗೀತಾನಂದ ಫೌಂಡೇಶನ್‌ನಿಂದ ಸಮವಸ್ತ್ರ ವಿತರಣೆ

ಕೋಟ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ವತಿಯಿಂದ ನೀಡಲಾದ ಸಮವಸ್ತ್ರ, ಪಠ್ಯಪುಸ್ತಕಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಗೀತಾನಂದ ಫೌಂಡೇಶನ್‌ನ ಅಧ್ಯಕ್ಷ ಆನಂದ ಸಿ.ಕುಂದರ್ ಕೊಡುಗೆಗಳನ್ನು ವಿತರಿಸಿ ಶುಭಹಾರೈಸಿದರು. ಪ್ರಾಂಶುಪಾಲ ಡೆನಿಸ್ ಬಾಲಾಜಿ ಕೆ. ಸ್ವಾಗತಿಸಿದರು. ಫಾತಿಮಾತುಲ್ ಮಿಸ್ರಿಯಾ ಗೀತಾನಂದ ಫೌಂಡೇಶನ್‌ನ ಸಮಾಜದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಅನುಜ್ ವಂದಿಸಿದರು. ನಿಶಾ ಎನ್. ಕಾರ್ಯಕ್ರಮ ನಿರೂಪಿಸಿದರು.