ಆಂಧ್ರಪ್ರದೇಶ: ಈ ವರ್ಷ ತೆರೆಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಟಾಲಿವುಡ್ನ ಐಕಾನ್ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಸಿನಿಮಾ ಸದ್ಯ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಬಿಡುಗಡೆಗೂ ಮುನ್ನವೇ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಈ ಮಧ್ಯೆ ಕಳೆದ ಹಲವು ತಿಂಗಳುಗಳಿಂದ ಚಿತ್ರದ ವಿಶೇಷ ಹಾಡಿಗೆ ಯಾವ ನಟಿಯೂ ಸಿಗುತ್ತಿಲ್ಲ ಎಂಬ ಚಿಂತೆಯಲ್ಲಿ ಚಿತ್ರತಂಡವಿತ್ತು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿಯೂ ವ್ಯಾಪಕವಾಗಿ ಹರಿದಾಡಿತ್ತು.
'ಪುಷ್ಪ 2' ಚಿತ್ರದ ವಿಶೇಷ ಹಾಡಿಗೆ ಯಾವ ನಟಿಯೂ ಹೊಂದುತ್ತಿಲ್ಲ ಎಂದು ಚಿತ್ರತಂಡ ತಮ್ಮ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡುವ ಮುಖೇನ ಸಾಂಗ್ ಶೂಟಿಂಗ್ ಬಾಕಿ ಉಳಿಸಿತ್ತು. ಒಂದಷ್ಟು ದಿನಗಳ ಕಾಲ ನಟಿಯ ಹುಡಕಾಟದಲ್ಲಿದ್ದ ಚಿತ್ರದ ತಯಾರಕರು ಭಾಗ 1ರಲ್ಲಿ 'ಹು ಅಂಟಾವ, ಊಹು ಅಂಟಾವ' ಹಾಡಿನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅವರಿಂದಲೇ ಈ ಹಾಡನ್ನೂ ಪೂರ್ಣಗೊಳಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಅದರೆ ಅದು ವದಂತಿ ಎಂಬುದು ಬಳಿಕ ದೃಢವಾಯಿತು.
ಇದೀಗ ಬಂದ ಸಿನಿ ವರದಿ ಪ್ರಕಾರ, 'ಪುಷ್ಪ 2' ಸಿನಿಮಾದ ವಿಶೇಷ ಹಾಡಿಗೆ ಬಾಲಿವುಡ್ನ ಹಾಟ್ ಬೆಡಗಿ, ನಟಿ ದಿಶಾ ಪಟಾನಿ ಅವರನ್ನು ಆಯ್ಕೆ ಮಾಡಲಾಗಿದೆ. ಶೀಘ್ರವೇ ಹಾಡಿನ ಚಿತ್ರೀಕರಣ ಕೂಡ ಸಂಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ ಈ ಬಗ್ಗೆ ಚಿತ್ರತಂಡದಿಂದ ಪ್ರಕಟವಾಗಲಿರುವ ಅಧಿಕೃತ ಘೋಷಣೆಗಾಗಿ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).