More

    ಲೋಕ ಸಮರ 2024: ಗಡಿನಾಡಲ್ಲಿ ಶುರುವಾಗಿದೆ ಹೈವೋಲ್ಟೇಜ್ ಪಾಲಿಟಿಕ್ಸ್! ಕುಂದಾನಗರಿಯ ಸಿಹಿ ಯಾರಿಗೆ?

    ಬೆಳಗಾವಿ: ಗಡಿನಾಡು, ಕುಂದಾನಗರಿ ಹಾಗೂ ಕರ್ನಾಟಕದ ಪವರ್ ಹೌಸ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿಯಲ್ಲಿ ಈಗಾಗಲೇ ಲೋಕಸಭಾ ಚುನಾವಣಾ ಕಾವು ರಂಗೇರಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಲೋಕಸಭಾ ಕ್ಷೇತ್ರವು 1951ರಲ್ಲಿ ಪ್ರಥಮ ಬಾರಿಗೆ ಲೋಕಸಭೆ ಚುನಾವಣೆಯನ್ನು ಎದುರಿಸಿತ್ತು. 1951 ರಿಂದ 1999ರ ವರೆಗೆ ಸತತ 11 ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಕಂಡಿದ್ದರು.

    1996ರಲ್ಲಿ ಒಮ್ಮೆ ಜನತಾದಳ ಗೆದ್ದಿದ್ದರೆ ತದನಂತರ 1998ರಲ್ಲಿ ಬಿಜೆಪಿಯಿಂದ ರೈತ ನಾಯಕ ಬಾಬಾಗೌಡ ಪಾಟೀಲ ರೈತ ಸಂಘದಿಂದ ಗೆಲವು ಸಾಧಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನಿಂದ ಅಮರಸಿಂಹ ಪಾಟೀಲ ಗೆದ್ದಿದ್ದರು. 2004ರಿಂದ 2019ರ ವರೆಗೆ ಸತತ ನಾಲ್ಕು ಬಾರಿ ದಿ.ಸುರೇಶ ಅಂಗಡಿ ಗೆಲವು ಸಾಧಿಸಿದ್ದರು. 2020ರಲ್ಲಿ ಅವರ ಅಕಾಲಿಕ ಅಗಲಿಕೆ ನಂತರ ನಡೆದ 2021ರ ಉಪ ಚುನಾವಣೆಯಲ್ಲಿ ಸುರೇಶ ಅಂಗಡಿ ಪತ್ನಿ ಮಂಗಲ ಅಂಗಡಿ ಜಯಭೇರಿ ಬಾರಿಸಿದ್ದರು. ಬೆಳಗಾವಿ ಕ್ಷೇತ್ರವು ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

    Belagavi

    ಲೋಕಸಭಾ ವ್ಯಾಪ್ತಿಯ ಶಾಸಕರು
    * ಬೆಳಗಾವಿ ದಕ್ಷಿಣ – ಅಭಯ ಪಾಟೀಲ (ಬಿಜೆಪಿ)
    * ಬೆಳಗಾವಿ ಉತ್ತರ – ರಾಜು ಸೇಠ್ (ಕಾಂಗ್ರೆಸ್)
    * ಬೆಳಗಾವಿ ಗ್ರಾಮೀಣ – ಲಕ್ಷ್ಮೀ ಹೆಬ್ಬಾಳ್ಕರ್ (ಕಾಂಗ್ರೆಸ್)
    * ಬೈಲಹೊಂಗಲ – ಮಹಾಂತೇಶ ಕೌಜಲಗಿ (ಕಾಂಗ್ರೆಸ್)
    * ಸವದತ್ತಿ – ವಿಶ್ವಾಸ ವೈದ್ಯ (ಕಾಂಗ್ರೆಸ್)
    * ರಾಮದುರ್ಗ – ಅಶೋಕ ಪಟ್ಟಣ (ಕಾಂಗ್ರೆಸ್)
    * ಗೋಕಾಕ – ರಮೇಶ ಜಾರಕಿಹೊಳಿ (ಬಿಜೆಪಿ)
    * ಅರಭಾವಿ – ಬಾಲಚಂದ್ರ ಜಾರಕಿಹೊಳಿ (ಬಿಜೆಪಿ)

    Belagavi

    Belagavi

    Belagavi

    ಕಳೆದ 4 ಲೋಕಸಭಾ ಚುನಾವಣಾ ಲೆಕ್ಕಚಾರ
    * 2004-ಸುರೇಶ್ ಅಂಗಡಿ
    * 2009-ಸುರೇಶ್ ಅಂಗಡಿ
    * 2014-ಸುರೇಶ್ ಅಂಗಡಿ
    * 2019-ಸುರೇಶ್ ಅಂಗಡಿ
    * 2021-ಮಂಗಳ ಅಂಗಡಿ
    2004ರಿಂದ 2019ರವರೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಿರಂತರವಾಗಿ ನಾಲ್ಕು ಬಾರಿ ದಿ.ಸುರೇಶ ಅಂಗಡಿ ಗೆಲುವು ಸಾಧಿಸಿದ್ದರು. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರು ಕೊರೊನಾದಿಂದ ನಿಧನರಾದರು. ನಂತರ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಶ್ರೀಮತಿ ಮಂಗಳ ಸುರೇಶ್ ಅಂಗಡಿಯವರು ಗೆಲುವು ಸಾಧಿಸಿದರು.

    ಕ್ಷೇತ್ರದ ಜಾತಿವಾರು ಲೆಕ್ಕಚಾರ
    ಬೆಳಗಾವಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 19,89,345 ಮತದಾರರು ಇದ್ದಾರೆ. ಆ ಪೈಕಿ 6.50 ಲಕ್ಷಕ್ಕೂ ಅಧಿಕ ಅಹಿಂದ ವರ್ಗದ ಮತದಾರರಿದ್ದಾರೆ. ನಂತರದ ಸ್ಥಾನದಲ್ಲಿ ಲಿಂಗಾಯತ ಮತ್ತು ಅಲ್ಪಸಂಖ್ಯಾತ ಮತದಾರರಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರ ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ ಗಡಿಯನ್ನು ಹಂಚಿಕೊಂಡಿರುವ ಕಾರಣ ಮರಾಠಿ ಸಮುದಾಯದ ಮತದಾರರು ಕೂಡ ಇದ್ದಾರೆ. ಅಭ್ಯರ್ಥಿಗಳ ಗೆಲುವಿನಲ್ಲಿ ಮರಾಠಿ ಮತದಾರರು ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ.

    ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಹೆಸರು
    * ಮಹಾಂತೇಶ ಕವಟಗಿಮಠ
    * ಮಂಗಳ ಅಂಗಡಿ
    * ಬಾಲಚಂದ್ರ ಜಾರಕಿಹೊಳಿ
    * ಸಂಜಯ ಪಾಟೀಲ
    * ಈರಣ್ಣ ಕಡಾಡಿ
    * ಶಂಕರಗೌಡ ಪಾಟೀಲ

    Belagavi

    Belagavi

    ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರುವ ಹೆಸರು
    * ಸತೀಶ ಜಾರಕಿಹೊಳಿ
    * ಅಶೋಕ ಪಟ್ಟಣ
    * ಮೃಣಾಲ್ ಹೆಬ್ಬಾಳ್ಕರ್
    * ಮೋಹನ್ ಕಾತರಕಿ
    * ಕಿರಣ ಸಾಧುನವರ
    * ಗಿರೀಶ ಸೋನ್ವಾಲಕರ್

    Belagavi

    Belagavi

    ಕ್ಷೇತ್ರದಲ್ಲಿ ಬಿಜೆಪಿ ಪ್ಲಸ್
    * ಪ್ರಧಾನಮಂತ್ರಿ ನರೇಂದ್ರ ಮೋದಿ ಅಲೆ
    * ಪ್ರಬಲ ಸಮುದಾಯಗಳಾದ ಲಿಂಗಾಯಿತ, ಕುರುಬ ಸಮುದಾಯದ ಬೆಂಬಲ
    * ಬಲಿಷ್ಠ ಕಾರ್ಯಕರ್ತರ ಸಂಘಟನೆ
    * ರಾಮಮಂದಿರ, ಹಿಂದುತ್ವ ಅಸ್ತ್ರ, ಮರಾಠಿಗರ ಬೆಂಬಲ
    * ಬಿಜೆಪಿ ನಾಯಕರು, ಹಿಂದುಪರ ಸಂಘಟನೆಗಳ ಒಗ್ಗಟ್ಟು

    ಕ್ಷೇತ್ರದಲ್ಲಿ ಬಿಜೆಪಿ ಮೈನಸ್
    * ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು
    * ಬೆಲೆ ಏರಿಕೆ, ಕೃಷಿ ಕಾಯ್ದೆ ವಿರುದ್ಧ ರೈತರ ಅಸಮಾಧಾನ
    * ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದು
    * ಸರ್ಕಾರದ ಗ್ಯಾರಂಟಿ ಯೋಜನೆಗಳ ಅಬ್ಬರ
    * 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವುದು

    ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ಲಸ್
    * ಅಹಿಂದ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತದಾರರ ಬಲ
    * ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ವಿ
    * 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್ ಶಾಸಕರು
    * ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಬಿಗಿ ಹಿಡಿತ
    * ಕೇಂದ್ರ ಸರ್ಕಾರದ ತಾರತಮ್ಯ
    * ಬಿಜೆಪಿ ವಿರೋಧಿ ಅಲೆ

    ಕ್ಷೇತ್ರದಲ್ಲಿ ಕಾಂಗ್ರೆಸ್ ಮೈನಸ್
    * ಕಾಂಗ್ರೆಸ್ ನಾಯಕರ ಒಳಜಗಳ
    * ಹಿಂದು ವಿರೋಧಿ ಎಂಬ ಹಣೆಪಟ್ಟಿ
    * ಪ್ರಬಲ ಸಮುದಾಯಗಳ ಮುನಿಸು
    * ಬರ ಪರಿಹಾರ ನೀಡಲು ವಿಳಂಬ ನೀತಿ
    * ಅಭಿವೃದ್ಧಿ ಕಾಮಗಾರಿಗಳು ಕುಂಠಿತ
    * ರಾಮಮಂದಿರ ಉದ್ಘಾಟನೆಗೆ ಗೈರಾಗಿರುವುದು
    * ಮರಾಠಿ ಭಾಷಿಕರ ವಿರೋಧ

    ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಳಗಾವಿ ರಾಜಕಾರಣ ತನ್ನದೆಯಾದ ವರ್ಚಸ್ಸನ್ನು ಹೊಂದಿದೆ. ಇಲ್ಲಿ ಪಕ್ಷದ ರಾಜಕೀಯಕ್ಕಿಂತ ವೈಯಕ್ತಿಕ ವರ್ಚಸ್ಸಿನ ರಾಜಕೀಯ ಜಿದ್ದಾ ಜಿದ್ದಿಗೆ ಬೆಳಗಾವಿ ಜಿಲ್ಲೆ ಹೆಸರುವಾಸಿಯಾಗಿದೆ. ಒಂದೇ ಪಕ್ಷದಲ್ಲಿದ್ದರೂ ಕೂಡ ಎರಡು ಬಣಗಳಿರುವುದು ಇಲ್ಲಿನ ವಿಶೇಷತೆ. ಡಿಸಿಸಿ ಬ್ಯಾಂಕ್ ಸೇರಿದಂತೆ ಸ್ಥಳೀಯ ಸಹಕಾರ ಸಂಸ್ಥೆಗಳ ಮೇಲಿನ ಹಿಡಿತ ಉಳಿಸಿಕೊಳ್ಳಲು ಇಲ್ಲಿನ ಬಹುತೇಕ ರಾಜಕಾರಣಿಗಳು ಬಣ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದು ಪ್ರಮುಖ ಪಕ್ಷಗಳ ನಾಯಕರಿಗೆ ತಲೆನೋವಾಗಿದೆ.

    ಸಚಿವರ ಮಕ್ಕಳಿಗೆ ಟಿಕೆಟ್ ಸಿಗುತ್ತಾ?
    ಬಲ್ಲಮೂಲಗಳ ಪ್ರಕಾರ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿಯನ್ನ ತಾವೇ ಸ್ಫರ್ಧೆ ಮಾಡಿ ಅಂತಾ ಕಾಂಗ್ರೆಸ್ ಹೈ ಕಮಾಂಡ್ ಹೇಳಿದೆ.ಆದ್ರೆ ಇಬ್ಬರೂ ಕೂಡ ಸಚಿವ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ ಎನ್ನಲಾಗ್ತಿದೆ.ನಾವು ಸ್ಫರ್ಧೆ ಮಾಡಲ್ಲ ನಮ್ಮ ಮಕ್ಕಳಿಗೆ ಟಿಕೆಟ್ ಕೊಡಿ ಅಂತಾ ಕಾಂಗ್ರೆಸ್ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ.ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ಮಗ ಮೃಣಾಲ್​ಗೆ ಟಿಕೆಟ್ ನೀಡಿದರೆ ಮರಾಠ ಸಮುದಾಯದ ಮತಗಳು ನಮ್ಮ ಪಕ್ಷಕ್ಕೆ ಬರುತ್ತವೆ.ಆದ್ರೆ ನನ್ನ ಮಗನ ಪರವಾಗಿ ನಾನು ನಾಯಕರ ಬಳಿ ಟಿಕೆಟ್ ಕೇಳಿಲ್ಲ..ಹೈ ಕಮಾಂಡ್ ನಿರ್ಧಾರವೆ ಅಂತಿಮ ಪಕ್ಷ ಯಾರಿಗೆ ಟಿಕೆಟ್ ನೀಡುತ್ತೋ ಅವರ ಪರ ಕೆಲಸ ಮಾಡುತ್ತೇನೆ ಅಂತಾ ಹೇಳಿದ್ದಾರೆ.ಒಟ್ಟಿನಲ್ಲಿ ಇದೇ ತಿಂಗಳು 19ರ ನಂತರ ಯಾರಿಗೆ ಟಿಕೆಟ್ ಅನೌನ್ಸ್ ಆಗುತ್ತೇ ಅನ್ನೋದನ್ನ ಕಾದು ನೋಡಬೇಕಾಗಿದೆ.

    Gold, Silver Price; ಚಿನ್ನದ ಬೆಲೆ ಮತ್ತೆ ಇಳಿಕೆ.. ಗೋಲ್ಡ್‌ ರೇಟ್‌ ಚೆಕ್‌ ಮಾಡಿ

    ‘ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದನ್ನು ಮರೆತಿಲ್ಲ’; ಆರ್​. ಅಶೋಕ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts