ನ್ಯೂಸ್

ಈ ಭಾಷೆಯಲ್ಲಿ ರಿಲೀಸ್ ಆಗ್ತಿಲ್ಲ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್'!

ಮೋಹನ್​ ಶೆಟ್ಟಿ

ತಮಿಳುನಾಡು: ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ಇದೀಗ ಸಿನಿಪ್ರಿಯರ ಕುತೂಹಲ ಕೂಡ ಹೆಚ್ಚಿದ್ದು, 2024ರ ಆರಂಭದಲ್ಲಿ ಯಾವೆಲ್ಲ ನಟರ ಸಿನಿಮಾಗಳು ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ಕಲೆಹಾಕುವಲ್ಲಿ ಸದ್ಯ ಮುಂದಿದ್ದಾರೆ. 2024ರ ಸಂಕ್ರಾಂತಿ ಹಬ್ಬದ ವಾರದಲ್ಲಿ ಬಾಲಿವುಡ್​, ಸ್ಯಾಂಡಲ್​ವುಡ್​ ಚಿತ್ರಗಳಿಗೆ ಹೋಲಿಸಿದರೆ ಟಾಲಿವುಡ್​ ಮತ್ತು ಕಾಲಿವುಡ್​ ಚಿತ್ರಗಳು ಬಿಡುಗಡೆಗೊಳ್ಳಲು ಸಾಲು ಸಾಲಾಗಿ ನಿಂತಿವೆ. ಆ ಪೈಕಿ ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಅಭಿನಯದ ಬಹುನಿರೀಕ್ಷಿರ 'ಕ್ಯಾಪ್ಟನ್ ಮಿಲ್ಲರ್​' ಕೂಡ ಒಂದು.

ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಜನವರಿ 12, 2024 ರಂದು ಬಿಡುಗಡೆಗೊಳ್ಳಲು ಸಿದ್ಧಗೊಂಡಿದೆ. ಆದ್ರೆ, ಅದೇ ದಿನ ತೆಲುಗು ಭಾಷೆಯಲ್ಲಿ ಸಿನಿಮಾ ರಿಲೀಸ್​ ಆಗುತ್ತಿಲ್ಲ ಎಂಬ ಸುದ್ದಿ ಸದ್ಯ ಟಾಲಿವುಡ್​ ಮಂದಿಗೆ ತೀವ್ರ ಬೇಸರ ಮೂಡಿಸಿದೆ.

ಜನವರಿ 12ರಂದು ತೆಲುಗು ಆವೃತ್ತಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಈ ಕುರಿತಂತೆ ಚಿತ್ರತಂಡ ಏನಾದರೂ ಬದಲಾವಣೆ ಮಾಡಲಿದೆಯಾ ಅಥವಾ ನೇರವಾಗಿ ಒಟಿಟಿಯಲ್ಲೇ ರಿಲೀಸ್​ ಮಾಡಲಿದ್ಯಾ? ಎಂಬುದನ್ನು ನಿರೀಕ್ಷಿಸಬೇಕಿದೆ. ಕ್ಯಾಪ್ಟನ್​ ಮಿಲ್ಲರ್​ನಲ್ಲಿ ಧನುಷ್​ಗೆ ಜೋಡಿಯಾಗಿ ನಟಿ ಪ್ರಿಯಾಂಕಾ ಅರುಲ್ ಮೋಹನ್ ಕಾಣಿಸಿಕೊಂಡಿದ್ದಾರೆ.

ಸತ್ಯಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸೆಂಧಿಲ್ ತ್ಯಾಗರಾಜ್ ಮತ್ತು ಅರ್ಜುನ್ ತ್ಯಾಗರಾಜನ್ ಚಿತ್ರವನ್ನು ನಿರ್ಮಿಸಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಸಂದೀಪ್ ಕಿಶನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್, ವಿಜಯಕನ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಮೂಂತಾದವರ ತಾರಗಣವಿದೆ,(ಏಜೆನ್ಸೀಸ್).