ನ್ಯೂಸ್

ಪಾಸ್​ಪೋರ್ಟ್ ಪವರ್ ಎಷ್ಟು?; 83ನೇ ಸ್ಥಾನದಲ್ಲಿ ಭಾರತ

ಪ್ರಸಕ್ತ ರ‌್ಯಾಂಕಿಂಗ್‌ನಲ್ಲಿ 2022ರ ಮೊದಲ ತ್ರೖೆಮಾಸಿಕದಲ್ಲಿ ಭಾರತ ತನ್ನ ಸ್ಥಾನವನ್ನು ಸೆಂಟ್ರಲ್ ಆಫ್ರಿಕಾದ ಸಾವೊ ಟೋಮ್ ಮತ್ತು ಪ್ರಿನ್ಸಿಪ್ ಜತೆಗೆ ಹಂಚಿಕೊಂಡಿದೆ.

  • ಸೂಚ್ಯಂಕದಲ್ಲಿ ಜಪಾನ್ ಮತ್ತು ಸಿಂಗಾಪುರ ಪಾಸ್​ಪೋರ್ಟ್​​ಗಗಳು ಮೊದಲ ಸ್ಥಾನಗಳಲ್ಲಿವೆ.
  • ಜರ್ಮನಿ ಮತ್ತು ದಕ್ಷಿಣ ಕೊರಿಯಾಗಳು ಎರಡನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿವೆ.
  • ಅಫ್ಘಾನಿಸ್ತಾನ ಸೂಚ್ಯಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
  • ಅಮೆರಿಕ ಮತ್ತು ಬ್ರಿಟನ್ ಪಾಸ್​ಪೋರ್ಟ್​ಗಳು 2020ರಲ್ಲಿ 8ನೇ ಸ್ಥಾನದಲ್ಲಿದ್ದವು ಕಳೆದ ವರ್ಷ ಆರನೇ ಸ್ಥಾನಕ್ಕೆ ಬಂದಿವೆ.
  • ಫಿನ್ಲೆಂಡ್, ಇಟಲಿ, ಲಕ್ಸಂಬರ್ಗ್ ಮತ್ತು ಸ್ಪೇನ್ ಮೂರನೇ ಸ್ಥಾನದಲ್ಲಿದ್ದು 189 ಸ್ಕೋರ್ ಹೊಂದಿವೆ.
  • ಹೆನ್ಲೆ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್​ಪೋರ್ಟ್ ಏಳು ಅಂಕಿ ಮೇಲೇರಿದ್ದು, 83ನೇ ಸ್ಥಾನಕ್ಕೆ ತಲುಪಿದೆ. ಕಳೆದ ವರ್ಷ ಇದು 90ನೇ ಸ್ಥಾನದಲ್ಲಿತ್ತು.
  • ಜರ್ಮನಿ, ದಕ್ಷಿಣ ಕೊರಿಯಾ ಪಾಸ್​ಪೋರ್ಟ್ ಮೂಲಕ ಜಗತ್ತಿನ 190 ರಾಷ್ಟ್ರಗಳಿಗೆ ವೀಸಾ ರಹಿತವಾಗಿ ಪ್ರವೇಶ ಪಡೆಯಬಹುದು.