ಬೆಂಗಳೂರು: ಮಳೆಗಾಲ ಶುರುವಾಗುತ್ತಿದ್ದ ಹಾಗೆ ಕಾಯಿಲೆಗಳೂ ಹರಡುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವಾತಾವಾರಣ ಏರುಪೇರಾಗುತ್ತಿದೆ. ಒಂದು ದಿನ ಮಳೆ, ಮತ್ತೊಂದು ದಿನ ಬಿಸಿಲು. ಈ ಕಾರಣದಿಂದ ಡೆಂಘೀ ಪ್ರಕರಣಗಳು ಹೆಚ್ಚಾಗಿವೆ ಎನ್ನುತ್ತಾರೆ ತಜ್ಱರು.
ಜುಲೈವೊಂದರಲ್ಲೇ ಈವರೆಗೆ 178 ಮಂದಿಗೆ ಡೆಂಘೀ ಇರುವುದು ದೃಢಪಟ್ಟಿದೆ. ಹೌದು, ಮಳೆಗಾಲದಲ್ಲಿ ಶುರುವಾಗುತ್ತಿದ್ದಂತೆ ಡೆಂಘಿ ಆರ್ಭಟ ಜೋರಾಗಿದ್ದು, 11 ದಿನಗಳಲ್ಲಿ 178 ಡೆಂಘಿ ಪ್ರಕರಣಗಳು ಪತ್ತೆಯಾಗಿದೆ.
ಇದನ್ನೂ ಓದಿ: 'ಟೋಬಿ'ಗಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ; 'ಗಾಯದ ನೋವು ತಾಳಲಾದರೆ ಊಟವನ್ನೂ ಮಾಡುತ್ತಿರಲಿಲ್ಲ'!
ಕಳೆದೊಂದು ತಿಂಗಳಿನಿಂದ ಡೆಂಘಿ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ 3565 ಡೆಂಘಿ ಶಂಕಿತರ ಗುರುತು ಪತ್ತೆ ಹಚ್ಚಲಾಗಿದೆ. ಈ ಪೈಕಿ 1009 ಮಂದಿಯ ರಕ್ತದ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇದರಲ್ಲಿ 905 ಜನರಿಗೆ ಡೆಂಘಿ ಇರುವುದು ಧೃಡವಾಗಿದೆ. ಆದರೆ ಡೆಂಘಿಯಿಂದ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ 585 ಡೆಂಘಿ ಪ್ರಕರಣಗಳು ಪತ್ತೆಯಾಗಿತ್ತು.