More

    ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ: ನೆಹರು ತಾರಾಲಯದಲ್ಲಿ ನೇರ ಪ್ರಸಾರ ವೀಕ್ಷಿಸಲು ಅವಕಾಶ

    ಬೆಂಗಳೂರು: ಇಂದು ಚಂದ್ರಯಾನ – 3 ಉಪಗ್ರಹ ಉಡಾವಣೆ ಹಿನ್ನಲೆಯಲ್ಲಿ ನೇರ ಪ್ರಸಾರ ವೀಕ್ಷಿಸಲು ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ನೇರ ಪ್ರಸಾರಕ್ಕೆ ಎಲ್ಇಡಿ ವ್ಯವಸ್ಥೆ ಮಾಡಲಾಗಿದ್ದು, 250-270 ಜನರಿಗೆ ಅವಕಾಶವಿದೆ. ಮಧ್ಯಾಹ್ನ 12.30 ರಿಂದ ಸಾರ್ವಜನಿಕರಿಗೆ ಪ್ರವೇಶವಿದ್ದು, ಇಸ್ರೋದ ವಿಡಿಯೋಗಳ ಪ್ರದರ್ಶನ ಮಾಡಲಾಗುತ್ತಿದೆ. ಶ್ರೀಹರಿಕೋಟದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದಲೂ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

    ಈ ಹಿಂದೆಯೂ ಇಸ್ರೋ ಚಂದ್ರಯಾನ ಯೋಜನೆ ನಡೆಸಿದ್ದು, ರೋವರ್ ಇಳಿಸಲು ವಿಫಲವಾಗಿತ್ತು. ಇಂದು ಚಂದ್ರಯಾನ 3 ಯೋಜನೆಗೆ ಕ್ಷಣಗಣನೆ ಆರಂಭವಾಗಿದ್ದು, ಆಗಸ್ಟ್ 23 /24 ರಂದು ನೌಕೆ ಚಂದ್ರನ‌ ಕಕ್ಷೆ ತಲುಪಲಿದೆ. ಲ್ಯಾಂಡರ್ ಮೂಲಕ ರೋವರ್​​​ನ ಚಂದ್ರನ ಕಕ್ಷೆಯ ಮೇಲೆ ಇಳಿಸಿ ಚಂದ್ರನ ಮೇಲ್ಮೈ ಅಧ್ಯಯನ ಮಾಡಲಾಗುತ್ತದೆ. ಈ ತಾಂತ್ರಿಕ ನೈಪುಣ್ಯತೆಯಲ್ಲಿ ಇಸ್ರೋ ಸಫಲವಾದರೆ ಸೌರವ್ಯೂಹದ ಯಾವುದೇ ಕಾಯದ ಮೇಲೆ ಉಪಗ್ರಹ ಕಳುಹಿಸುವ ಸಾಮರ್ಥ್ಯ ಪಡೆಯಲಿದೆ.

    ಇಂದು ನೌಕೆ ಜೊತೆಗೆ ವೈಜ್ಞಾನಿಕ ಉಪಕರಣಗಳನ್ನು ಕಳುಹಿಸುತ್ತಿದ್ದು, ಚಂದ್ರನ ಮೇಲ್ಮೈನಲ್ಲಿರುವ ಮಣ್ಣಿನ ವಿಶ್ಲೇಷಣೆ, ಅದರ ಸಂಯೋಜನೆ, ಮಣ್ಣಿನಿಂದ ಹತ್ತು ಸೆಂಟಿ ಮೀಟರ್ ಒಳಗೆ ಟೆಂಪರೇಚರ್ ಬದಲಾವಣೆ ಸೇರಿದಂತೆ ಹಲವು ಅಧ್ಯಯನ ನಡೆಯಲಿದೆ ಹಾಗೂ ಚಂದ್ರನ‌ ಕಕ್ಷೆಯಿಂದ ಭೂಮಿಯ ಅಧ್ಯಯನ ಕೂಡ ಆಗಲಿದೆ.

    ಈ ಎಲ್ಲಾ ಮಾಹಿತಿಗಳನ್ನು ಒಳಗೊಂಡ ವಿಡಿಯೋ ಹಾಗೂ ಚಂದ್ರಯಾನ 3 ಸಂಬಂಧ ನೇರ ಪ್ರಸಾರಕ್ಕೆ ನೆಹರು ತಾರಾಲಯ ಸಿದ್ಧತೆ ನಡೆಸುತ್ತಿದೆ. ಜೊತೆಗೆ ವಿಜ್ಞಾನಿ ಗುರುಪ್ರಸಾದ್​​​ರಿಂದ ಕನ್ನಡದಲ್ಲಿ ಮಾಹಿತಿ ನೀಡಲಾಗುತ್ತದೆ. ಉಡಾವಣೆಯ ವೇಳೆ ಮಾಧ್ಯಮದಲ್ಲಿ ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಕಾಂಮೆಟ್ರಿ ಇರಲಿದೆ. ಅನೇಕರಿಗೆ ಮಾಹಿತಿ ಕನ್ನಡದಲ್ಲಿ ಸಿಗಲಿ ಎಂದು ಈ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇಂದು 1:30 ರಿಂದ 3:30 ರವರೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ ಕಾಲೇಜು ಮಕ್ಕಳು , ಸೇರಿದಂತೆ ಎಲ್ಲಾ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಚಂದ್ರಯಾನ 1 ರಲ್ಲಿ ತೆಗೆದಿದ್ದಂತಹ ಫೋಟೋಗಳನ್ನು ಕೂಡ ಪ್ರದರ್ಶನ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts